ಕೊನೆಯಲ್ಲಿ ಎಂಟ್ರಿ ಕೊಟ್ಟು, ದಿವ್ಯ ಉರುದುಗ ಹಾಗೂ ಅರವಿಂದ್ ಮದುವೆಗೆ ಬಿಗ್ ಟ್ವಿಸ್ಟ್ ನೀಡಿದ ದಿವ್ಯ ತಂದೆ. ಹೇಳಿದ್ದೇನು ಗೊತ್ತಾ?

 

ನಮಸ್ಕಾರ ಸ್ನೇಹಿತರೇ ಕನ್ನಡ ಕಿರುತೆರೆಯ ಇತಿಹಾಸದಲ್ಲಿ ಇಲ್ಲಿಯವರೆಗೂ ಬಂದಂತಹ ಶೋ ಗಳಲ್ಲಿ. ಅತ್ಯಂತ ದೊಡ್ಡ ಹಾಗೂ ಶ್ರೀಮಂತ ರಿಯಾಲಿಟಿ ಶೋ ಎಂದರೆ ಅದು ಬಿಗ್ ಬಾಸ್ ಕನ್ನಡ ಶೋ. ಈಗಾಗಲೇ 8 ಅವತರಿಣಿಕೆಗಳನ್ನು ಪೂರೈಸಿದೆ. ಇಲ್ಲಿಗೆ ಹಲವಾರು ಬಗೆಯ ಸ್ಪರ್ಧಿಗಳು ಬಂದಿದ್ದಾರೆ. ಇದು ಬೇರೆ ಬೇರೆ ಚಾನೆಲ್ ಗಳಲ್ಲಿ ನಡೆದಿದೆ.

ಆದರೆ ಅಂದಿನಿಂದ ಇಂದಿನವರೆಗೂ ಹೋಸ್ಟ್ ಮಾಡಿರೋ ರಿಯಲ್ ಬಿಗ್ ಬಾಸ್ ಒಬ್ಬರೇ ಅದು ಕಿಚ್ಚ ಸುದೀಪ್. ಅವರ ನಿರೂಪಣಾ ಶೈಲಿ ವೈಶಿಷ್ಟ್ಯತೆ ಅವರನ್ನು ಭಾರತದಲ್ಲೇ ಬೆಸ್ಟ್ ಬಿಗ್ ಬಾಸ್ ಹೋಸ್ಟ್ ನ್ನಾಗಿ ಮಾಡಿದೆ‌. ಅವರು ಬಿಗ್ ಬಾಸ್ ಮಂದಿಯನ್ನು ಕಂಟ್ರೋಲ್ ಮಾಡೋ ರೀತಿ ವಿಭಿನ್ನವಾದದ್ದು. ಈ ಬಿಗ್ ಬಾಸ್ ನಲ್ಲಿ ಒಂದು ವಿಶೇಷ ಘಟನೆಗಳ ಬಗ್ಗೆ ಕೂಡ ಹೇಳ್ತೀವಿ ಬನ್ನಿ.

ಈ ಬಾರಿಯ ಬಿಗ್ ಬಾಸ್ ಸೀಸನ್ ಎಂಟು ಲಾಕ್ ಡೌನ್ ನ ಕಠಿಣ ನಿಯಮಗಳಿಂದಾಗಿ ಅರ್ಧಕ್ಕೆ ನಿಂತರೂ ಸಹ ಇದು ಹತ್ಹತ್ರ 70 ದಿನಗಳ ನಡೆದಿತ್ತು. ಈ 70ದಿನಗಳಲ್ಲಿ ಎಂಟರ್ಟೈನ್ಮೆಂಟ್ ಗೇನೂ ಕೊರತೆಯಿರಲಿಲ್ಲ. ಈ ಸೀಸನ್ ನಲ್ಲಿ ಕೂಡ ಲವ್ ಸ್ಟೋರಿ ಗಳಿಗೇನು ಕೊರತೆಯಿರಲಿಲ್ಲ. ಮೊದಲಿಗೆ ಮಂಜು ಪಾವಗಡ ಹಾಗೂ ದಿವ್ಯ ಸುರೇಶ್ ಲವ್ವಿ ಡವ್ವಿ ವೀಕ್ಷಕರ ಗಮನ ಸೆಳೆಯಿತು ನಂತರ ಇದು ಸುಳ್ಳು ಎಂದು ಗೊತ್ತಾಯಿತು.

ಆದರೆ ಇದರ ನಡುವಲ್ಲೇ ಕಿರುತೆರೆರ ನಟಿ ದಿವ್ಯಾ ಉರುಡುಗ ಹಾಗೂ ರೇಸರ್ ಅರವಿಂದ್ ಕೆ.ಪಿ. ರವರ ಸ್ನೇಹ ಸಂಬಂಧ ಬಿಗ್ ಬಾಸ್ ಮನೆಯಲ್ಲಿ ಸೌಂಡ್ ಮಾಡಲಾರಂಭಿಸಿತು. ಪ್ರತಿ ಸಂಚಿಕೆಯಲ್ಲೂ ಪ್ರತಿ ದಿನ ಇವರಿಬ್ಬರು ಜೊತೆಯಾಗಿ ಮಾತನಾಡೋದು ಜೊತೆಯಾಗಿ ತಿರುಗಾಡೋದನ್ನು ನೋಡಿ ಅಸೂಯೆ ಪಟ್ಟುಕೊಂಡವರೆಷ್ಟೋ ಜನ ಇದ್ದಾರೆ. ಒಬ್ಬರನ್ನೊಬ್ಬರು ಯಾವತ್ತೂ ಬಿಟ್ಟು ಕೊಟ್ಟವರಲ್ಲ. ಒಮ್ಮೆ ದಿವ್ಯ ಉರುಡುಗ ನನಗೆ ಅರವಿಂದ್ ತುಂಬಾ ಸ್ಪೆಷಲ್ ಎಂದು ಅಪ್ಪನ ಉಂಗುರ ಕೊಟ್ಟಿದ್ದು ಇದೆ. ಇದಾದ ನಂತರ ಇದು ಕೇವಲ ಸ್ನೇಹ ಅಲ್ಲ ಸ್ನೇಹಕ್ಕೂ ಮೀರಿದ ಸಂಬಂಧ ಎಂದು ಎಲ್ಲರಿಗೂ ತಿಳಿಯಿತು.

ಬಿಗ್ ಬಾಸ್ ನ ತುಂಬೆಲ್ಲ ಈ ಪ್ರೇಮಪಕ್ಷಿಗಳು ಹಾರಾಡುತ್ತಿದದ್ದನ್ನು ನೋಡಿ ಎಲ್ಲರೂ ಇವರು ಮದುವೆ ಆಗುತ್ತಾರೆ ಇವರು ಮದುವೆಯಾದರೆ ಎಷ್ಟು ಚಂದ ಎಂದೆಲ್ಲಾ ಮಾತನಾಡತೊಡಗಿದರು. ಆದರೆ ದಿವ್ಯ ಉರುಡುಗ ಈ ಬಗ್ಗೆ ಪರೋಕ್ಷವಾಗಿ ಹೆಳುತ್ತಾ. ನಮ್ಮ ತಂದೆ ಯಾವ ಹುಡುಗ ನನ್ನು ಮದುವೆ ಆಗು ಎನ್ನುತ್ತಾರೋ ಅವರೇ ನನ್ನ ಪತಿ ಎಂದು ಹೇಳಿಕೊಂಡಿದ್ದೆ. ಇತ್ತ ದಿವ್ಯ ಉರುಡುಗ ರವರ ಅಪ್ಪ ನನ್ನ ಮಗಳು ತನ್ನ ಜೀವನದಲ್ಲಿ ಸದಾ ಒಳ್ಳೆಯ ನಿರ್ಧಾರವನ್ನೇ ತೆಗೆದು ಕೊಳ್ಳುತ್ತಾಳೆ.

ಅವಳ ಮದುವೆಯ ವಿಚಾರದಲ್ಲಿ ನನ್ನದೇನು ತಕರಾರಿಲ್ಲ ಅವಳು ಯಾರನ್ನು ಇಷ್ಟ ಪಡುತ್ತಾಳೋ ಅವರಿಗೆ ಅವಳನ್ನು ಕೊಟ್ಟು ಸಂತೋಷದಿಂದ ಮದುವೆ ಮಾಡುತ್ತೇವೆಂದು ಇತ್ತೀಚೆಗೆ ಹೇಳಿದ್ದಾರೆ. ರೋಗಿ ಬಯಸಿದ್ದು ಹಾಲು ಅನ್ನ ವೈದ್ಯರು ಹೇಳಿದ್ದು ಹಾಲು ಅನ್ನ ಅನ್ನುವಂತಾಗಿದೆ ಪರಿಸ್ಥಿತಿ. ಈ ಮೂಲಕ ದಿವ್ಯ ಉರುಡುಗ ಹಾಗೂ ಅರವಿಂದ್ ರವರ ಮದುವೆ ಬಹುತೇಕ ಖಚಿತವಾಗಿದೆ ಎನಿಸುತ್ತಿದೆ ಯಾಕೆಂದರೆ ಅರವಿಂದ್ ದಿವ್ಯ ಇಬ್ಬರು ಮನೆಯವರು, ಮಕ್ಕಳ ನಿರ್ಧಾರ ಒಪ್ಪಿಕೊಳ್ಳುವುದು ಖಚಿತವಾಗಿದೆ ಇನ್ನು ಅರವಿಂದ್ ಹಾಗೂ ದಿವ್ಯ ರವರು ಬಿಡಿ ಹೇಳುವ ಅವಶ್ಯಕತೆ ಇಲ್ಲ ಎನಿಸುತ್ತದೆ ಅಲ್ಲವೇ. ಇನ್ನು ನಿಮಗೇನನ್ನಿಸುತ್ತದೆ ದಿವ್ಯ ಉರುಡುಗ ಹಾಗೂ ಅರವಿಂದ್ ಕೆಪಿ ವಿವಾಹ ಆಗುತ್ತಾರಾ ಇಲ್ಲವಾ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ.