ನಟಿ ಶ್ವೇತಾ ಶ್ರೀವಾತ್ಸವ್ ಮನೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ

 

ಸ್ಯಾಂಡಲ್ ವುಡ್ ನಟಿ ಶ್ವೇತಾ ಶ್ರೀವಾತ್ಸವ್ ಅವರು ಸೋಷಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್, ಆಗಾಗ ತಮ್ಮ ಮುದ್ದು ಮಗಳು ಆಶ್ಮಿತಾ ಜೊತೆ ಫೋಟೋಶೂಟ್ ಮಾಡಿಸಿ ಅವುಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಶ್ವೇತಾ ಅವರು ಮಗಳ ಜೊತೆ ಮಾಡಿಸುವ ಫೋಟೋಶೂಟ್ ಗಳು ಬಹಳ ವಿಭಿನ್ನವಾಗಿರುತ್ತವೆ. ಒಂದು ಥೀಮ್ ಇಟ್ಟುಕೊಂಡು ಫೋಟೋಶೂಟ್ ಮಾಡಿಸುತ್ತಾರೆ ಶ್ವೇತಾ ಶ್ರೀವಾತ್ಸವ್.

ಹಬ್ಬಗಳ ಸಮಯದಲ್ಲಿ ಆ ಸಮಯಕ್ಕೆ ತಕ್ಕ ಹಾಗೆ ಫೋಟೋಶೂಟ್ ಮಾಡಿಸುತ್ತಾರೆ. ಇತ್ತೀಚೆಗೆ ವರಮಹಾಲಕ್ಷ್ಮಿ ಹಬ್ಬಕ್ಕೆ ಸುಂದರವಾದ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದರು. ಇದೀಗ ಮತ್ತೊಂದು ವಿಶೇಷಕ್ಕೆ ಮತ್ತೊಂದು ಹೊಸ ಫೋಟೋಶೂಟ್ ಮಾಡಿಸಿ, ಮಗಳ ಜೊತೆ ಇರುವ ಮುದ್ದಾದ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ ನಟಿ ಶ್ವೇತಾ ಶ್ರೀವಾತ್ಸವ್.

ನಾಳೆ ಕೃಷ್ಣ ಜನ್ಮಾಷ್ಟಮಿ, ಈ ಹಬ್ಬ ಎಲ್ಲರಿಗೂ ಬಹಳ ಸ್ಪೆಷಲ್. ಅದರಲ್ಲು ಮುದ್ದು ಮಕ್ಕಳಿರುವ ಮನೆಗಳಲ್ಲಿ ಕೃಷ್ಣ ಜನ್ಮಾಷ್ಟಮಿ ಹಬ್ಬದ ಸಡಗರವೇ ಬೇರೆ. ಶ್ವೇತಾ ಶ್ರೀವಾತ್ಸವ್ ಅವರ ಮನೆಯಲ್ಲಿ ಕೂಡ ಪುಟ್ಟ ಆಶ್ಮಿತಾ ಇದ್ದಾಳೆ, ಶ್ವೇತಾ ಅವರಿಗೆ ತಮ್ಮ ಮಗಳೇ ಮುದ್ದು ಕೃಷ್ಣ ಆಗಿದ್ದಾಳೆ. ಮುದ್ದು ಮಗಳನ್ನು ಕೃಷ್ಣನ ಹಾಗೆ ಅಲಂಕಾರ ಮಾಡಿ, ಫೋಟೋಶೂಟ್ ಮಾಡಿಸಿ, ಕೃಷ್ಣ ಜನ್ಮಾಷ್ಟಮಿಯ ಶುಭಾಶಯ ಹೇಳಿ, ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ ಶ್ವೇತಾ..