ಮದುವೆ ಅನ್ನೋ ಬಾಂಧವ್ಯವನ್ನು ನಂಬಿ ಪ್ರತಿಯೊಬ್ಬ ಹೆಣ್ಣು ಮಗಳೂ ಸಹ ತಾನು ಹುಟ್ಟಿ ಬೆಳೆದ ಮನೆಯನ್ನು ತನ್ನ ತವರನ್ನು ಬಿಟ್ಟು ಗಂಡನ ಮನೆಗೆ ಬರುತ್ತಾಳೆ.. ಇನ್ನು ಮುಂದೆ ಅದೇ ತನ್ನ ಮನೆಯೆಂದು ಭಾವಿಸಿ ಮುಂದಿನ ಸಂಪೂರ್ಣ ಜೀವನ ಕಳೆಯುವಳು.. ಆದರೆ ಅತ್ತ ಗಂಡ ಎನಿಸಿಕೊಂಡವರು ಮಡದಿಯನ್ನು ಅರ್ಥ ಮಾಡಿಕೊಂಡು ಪ್ರೀತಿ ಕಾಳಜಿ ತೋರಿದರೆ ಆಕೆಯ ಜೀವನ ಸ್ವರ್ಗವೇ ಸರಿ.. ಆದರೆ ಸ್ವಲ್ಪ ಹೆಚ್ಚು ಕಡಿಮೆಯಾಗಿ ಗಂಡ ಹಾಗೂ ಆತನ ಕುಟುಂಬದಿಂದ ಬೇರೆಯದ್ದೇ ವರ್ತನೆ ಕಂಡರೆ ಆ ಹೆಣ್ಣಿನ ಬಾಳು ಏನಾಗಬೇಡ.. ಊಹಿಸಲು ಸಹ ಅಸಾಧ್ಯ.. ಇದೀಗ ಅದೇ ರೀತಿಯ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ.
ಹೌದು ಈಕೆಯ ಹೆಸರು ಶೃತಿ ವಯಸ್ಸಿನ್ನೂ ಕೇವಲ ಮೂವತ್ತೆರೆಡು ವರ್ಷ.. ಬೆಂಗಳೂರಿನ ಹೆಚ್ ಎಸ್ ಆರ್ ಲೇಔಟ್ ನಿವಾಸಿ.. ಈಕೆಯನ್ನು ಕಳೆದ ಏಳು ವರ್ಷದ ಹಿಂದೆ 2014 ರಲ್ಲಿ ಹುಳಿಮಾವು ಮುಖ್ಯ ರಸ್ತೆಯ ಬಾಣಸವಾಡಿಯ ಮುನಿರೆಡ್ಡಿ ಬಡಾವಣೆಯ ನಿವಾಸಿ ಮಿಥುನ್ ರೆಡ್ಡಿ ಎಂಬುವವರಿಗೆ ಕೊಟ್ಟು ಮದುವೆ ಮಾಡಲಾಗಿತ್ತು.. ಮಗಳು ಸಂತೋಷವಾಗಿರಲಿ ಎಂದು ಸಾಕಷ್ಟು ಒಡವೆಹಾಗೂ ಹಣವನ್ನು ನೀಡಿ ಮದುವೆ ಮಾಡಿಕೊಟ್ಟಿದ್ದರು.. ಇನ್ನೇನು ಮಗಳ ಮದುವೆಯಾಯಿತು ಮಗಳು ಸಂತೋಷವಾಗಿ ಇರುತ್ತಾಳೆ ಎಂದು ಭಾವಿಸಿ ಇತ್ತ ಶೃತಿಯ ಅಪ್ಪ ಅಮ್ಮನೂ ನೆಮ್ಮದಿಯಾಗಿದ್ದರು.. ಆದರೆ ಮದುವೆಯಾದ ಮರು ದಿನದಿಂದಲೂ ಶೃತಿಗೆ ಗಂಡನ ಮನೆ ಬೇರೆಯದ್ದೇ ರೀತಿಯಲ್ಲಿ ಭಾಸವಾಗುತಿತ್ತು.. ಹೌದು ಗಂಡನ ಮನೆಯಲ್ಲಿಯೂ ಅಪ್ಪ ಅಮ್ಮನ ಪ್ರೀತಿ ಸಿಗಲಿದೆ ಎಂದುಕೊಂಶ ಶೃತಿಗೆ ಪ್ರತಿದಿನವೂ ಸಿಕ್ಕಿದ್ದು ಬರಿ ನೋವಷ್ಟೇ.. ಯಾವುದೇ ಕಷ್ಟವಾದರೂ ತನ್ನ ಬೆಂಬಲವಾಗಿ ನಿಲ್ಲಬೇಕಾದ ಗಂಡನೇ ನೋವಿನ ಸರಮಾಲೆಯನ್ನು ಶೃತಿಗೆ ಹಾಕಿದ.
ಹೌದು ಶೃತಿಯ ಗಂಡ ಮಿಥುನ್ ರೆಡ್ಡಿ ಹಾಗೂ ಆತನ ತಾಯಿ ಭಾಗ್ಯಮ್ಮ ಧನದಾಹಿಗಳಾಗಿದ್ದು ಶೃತಿಗೆ ಹಣ ತರುವಂತೆ ಒತ್ತಾಯ ಮಾಡುತ್ತಲೇ ಇದ್ದರು.. ಶೃತಿ ಸಹ ಪ್ರತಿ ಬಾರಿಯೂ ಹೆತ್ತವರ ಬಳಿ ಹೋಗಿ ಹಣ ತರುತ್ತಲೇ ಇದ್ದಳು.. ಆದರೆ ಅವರಿಬ್ಬರ ದಾಹ ಅಲ್ಲಿಗೆ ತೀರದಾಯಿತು.. ಏಳು ವರ್ಷದಿಂದ ಇದೇ ಕೆಲಸ ಮುಂದುವರೆಯುತ್ತಲೇ ಇತ್ತು.. ದುಡಿದು ತಿನ್ನುವ ಯೋಗ್ಯತೆ ಇಲ್ಲದ ಆ ಗಂಡಸು ಹಾಗೂ ಆತನ ತಾಯಿ ಸೇರಿಕೊಂಡು ವರಮಹಾಲಕ್ಷ್ಮಿ ಹಬ್ಬದ ದಿನ ಶೃತಿಗೆ ಒಂದು ಲಕ್ಷ ರೂಪಾಯಿ ಹಣವನ್ನು ತರುವಂತೆ ಒತ್ತಾಯ ಮಾಡಿದರು.. ಹಬ್ಬದ ದಿನ ಮನೆ ಮಹಾಲಕ್ಷ್ಮಿಯಾಗಿದ್ದ ಸೊಸೆಯನ್ನು ತವರು ಮನೆಗೆ ಕಳುಹಿಸಿದ್ದರು.. ಸರಿ ಅಂತ ಶೃತಿ ತನ್ನ ಹೆತ್ತವರ ಬಳಿಹೋಗಿ ಮೂವತ್ತೈದು ಸಾವಿರ ರೂಪಾಯಿಯನ್ನೂ ಸಹ ತೆಗೆದುಕೊಂಡು ಬಂದು ಕೊಟ್ಟಿದ್ದಳು.. ಉಳಿದ ಅರವತ್ತೈದು ಸಾವಿರ ಬಾಕಿ ಉಳಿಸಿಕೊಂಡಿದ್ದಳು.
ಆ ಹಣವನ್ನು ಸಹ ತೆಗೆದುಕೊಂಡು ಬಾ ಎಂದು ಸೋಮವಾರ ಶೃತಿಗೆ ಅತ್ತೆ ಭಾಗ್ಯಮ್ಮ ಹಾಗೂ ಗಂಡ ಮಿಥಿನ್ ರೆಡ್ಡಿ ನೋವು ನೀಡಿ ಆಕೆಯ ಮೇಲೆ ಕೈಮಾಡಿದ್ದರು.. ಇವರ ಆಟಗಳನ್ನು ನೋಡಿ ನೋಡಿ ಬೇಸರಗೊಂಡ ಶೃತಿ ಇವರದ್ದು ಮುಗಿಯುವ ಕತೆಯಲ್ಲ ಎಂದು ಅದೇ ರಾತ್ರಿ ತನ್ನ ಜೀವವನ್ನೇ ಕಳೆದುಕೊಂಡು ಬಿಟ್ಟಳು.. ಇತ್ತ ಶೃತಿ ಅವರ ಹೆತ್ತವರಿಗೆ ವಿಚಾರ ತಿಳಿದು ಮಗಳಿಗೆ ಇಷ್ಟೆಲ್ಲಾ ಮಾಡಿದರೂ ನೆಮ್ಮದಿ ಸಿಗದೇ ಈ ರೀತಿ ಆಯಿತು.. ಮಗಳೇ ಇಲ್ಲವಾದಳೆಂದು ಅವರ ಆಕ್ರಂದನ ಮುಗಿಲು ಮುಟ್ಟಿತು.. ಇಷ್ಟೆಲ್ಲಾ ಮಾಡಿ ಏನು ಪ್ರಯೋಜನವಾಯಿತು.. ದುಡಿದು ತಿನ್ನಲು ಯೋಗ್ಯತೆ ಇಲ್ಲದವ ತನಗಾಗಿಯೇ ಬದುಕುತ್ತಿದ್ದ ಹೆಂಡತಿಯನ್ನು ಕಳೆದುಕೊಂಡು ಏನು ಸಾಧಿಸಿದ.. ಇನ್ನು ಅವನಿಗೆ ಪೊಲೀಸರೇ ಗತಿಯಷ್ಟೇ.
ಯಾರೇ ಆಗಲಿ ದುಡಿದು ಸಂಸಾರವನ್ನು ಸಾಕುವ ಯೋಗ್ಯತೆ ಇಲ್ಲದ ಮೇಲೆ ದಯವಿಟ್ಟು ಮದುವೆ ಆಗಬೇಡಿ.. ಆ ಹೆಣ್ಣು ಜೀವ ಅದ್ಯಾವ ತಪ್ಪು ಮಾಡಿತ್ತು.. ಅದ್ಯಾವ ಕರ್ಮಕ್ಕೆ ಗುರಿಯಾಯಿತು.. ಎಲ್ಲಾ ಹೆಣ್ಣು ಮಕ್ಕಳಂತೆ ಮದುವೆಯಾಗಿ ಭವಿಷ್ಯದ ಬಗ್ಗೆ ಕನಸು ಕಂಡಿದ್ದೇ ತಪ್ಪಾ.. ಆಕೆಯ ಹೆತ್ತವರ ನೋವು ಅವರಿರುವವರೆಗೂ ಎಂದೂ ಕಡಿಮೆಯಾಗಲಾರದು.. ಹೆಣ್ಣು ಮಕ್ಕಳು ಅಷ್ಟೇ ಈ ರೀತಿ ಹಣದಾಹಿಗಳನ್ನು ಶುರುವಿನಲ್ಲೇ ಎದುರಿಸಿ ನಿಲ್ಲಿ.. ಜೀವ ಕಳೆದುಕೊಂಡು ಹೆತ್ತವರಿಗೆ ನೋವು ನೀಡುವ ನಿರ್ಧಾರಕಿಂತ ಆತನಿಂದ ದೂರ ಬಂದು ಬದುಕು ಕಟ್ಟಿಕೊಳ್ಳಿ.. ಪ್ರಪಂಚ ಬಹಳ ವಿಶಾಲವಾದದ್ದು.. ಮಾತನಾಡುವವರು ಮೂರು ದಿನವಷ್ಟೇ.. ಅವರ ಬಗ್ಗೆ ಯೋಚಿಸಿ ನಿಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳಬೇಡಿ.. ಇನ್ನಾದರೂ ಇಂತಹ ಮನಸ್ಥಿತಿಗಳು ಬದಲಾಗಲಿ.. ಅಣ್ಣ ತಮ್ಮಂದಿರು ಅಪ್ಪ ಅಮ್ಮಂದಿರು ಕಷ್ಟ ಪಟ್ಟು ಮದುವೆ ಮಾಡೋದು ಆ ಹೆಣ್ಣು ಮಗಳು ಸಂತೋಷವಾಗಿರಲಿ ಎಂದು.. ಈ ರೀತಿಯ ಸ್ಥಿತಿಯಲ್ಲಿ ನೋಡಲಲ್ಲ.