ಹಿಂದೂ ಧರ್ಮದಲ್ಲಿ ಅನೇಕ ದೇವರನ್ನು ಪೂಜಿಸಲಾಗುತ್ತದೆ. ಅದೇ ರೀತಿ ಆಂಜನೇಯ ದೇವರನ್ನು ಪೂಜೆ ಮಾಡುವ, ಅವರನ್ನು ಆರಾಧಿಸುವ ಭಕ್ತರಿಗೆ ಒಂದು ಒಳ್ಳೆಯ ಸಮಾಚಾರವನ್ನು ಹೇಳಲಿದ್ದೇವೆ. ನಾವು ದೇವರ ಮೂರ್ತಿ, ಅಥವಾ ವಿಗ್ರಹವನ್ನು ಶ್ರದ್ಧೆ ಭಕ್ತಿಯಿಂದ ಪೂಜಿಸುತ್ತೇವೆ. ನಮ್ಮ ಕಷ್ಟ ಕಾರ್ಪಣ್ಯಗಳನ್ನು ದೂರ ಮಾಡುವಂತೆ ಬೇಡುತ್ತೇವೆ. ಆದರೆ ಅದೇ ದೇವರು ಈಗಲೂ ಭೂಮಿ ಮೇಲೆ ಇದ್ದಾರೆ ಅಂದರೆ ನೀವು ನಂಬಲೇ ಬೇಕು. ಆ ದೇವರು ಬೇರೆ ಯಾರೂ ಅಲ್ಲ ಆಂಜನೇಯ.
ಹೌದು, ಈ ಕಲಿಯುಗದಲ್ಲಿ ಹೆಚ್ಚಿನವರು ಆಂಜನೇಯನನ್ನು ನಂಬುತ್ತಾರೆ. ಭಜರಂಗಿ ಯನ್ನು ಪೂಜೆ ಮಾಡುವವರನ್ನು ಕಷ್ಟ ಕಾಲದಲ್ಲಿ ಕಾಪಾಡುತ್ತಾನೆ ಅನ್ನುವ ನಂಬಿಕೆಯೂ ಇದೆ. ಇದಕ್ಕೆ ಅನೇಕ ಪುರಾವೆಗಳು ಕೂಡ ಇವೆ. ಹೌದು, ವಾಯುಪುತ್ರ ಆಂಜನೇಯ ಚಿರಂಜೀವಿ. ಎಲ್ಲಿವರೆಗೆ ಭಕ್ತರು ರಾಮನ ಸ್ತುತಿ ಮಾಡುತ್ತಾರೋ ಅಲ್ಲಿವರೆಗೆ ಆಂಜನೇಯ ಈ ಭೂಮಿ ಮೇಲೆ ನೆಲೆಸಿರುತ್ತಾನೆ. ಪ್ರತಿ ಯುಗದಲ್ಲಿಯೂ ಆಂಜನೇಯ ಸ್ವಾಮಿಯು ಕೆಲ ಪವಾಡ ಪುರುಷರಿಗೆ ಕಾಣಸಿಗುತ್ತಾನೆ.
ಸುಮಾರು ಹದಿಮೂರನೇ ಶತಮಾನದಲ್ಲಿ ಮಧ್ವಾಚಾರ್ಯರು ಆಂಜನೇಯ ಸ್ವಾಮಿಯನ್ನು ಕಂಡಿದ್ದರು, ಅದೇ ರೀತಿ ತುಳಸಿ ದಾಸರು ಕೂಡ ತಾನು ಆಂಜನೇಯ ಸ್ವಾಮಿಯ ದರ್ಶನ ಪಡೆದಿದ್ದೇನೆ ಎಂದು ಹೇಳಿದ್ದಾರೆ. ಹಾಗಾಗಿಯೇ ಅವರು ರಾಮಚರಿತ ಬರೆದಿದ್ದಾರೆ. ರಾಮಾಯಣದಲ್ಲಿ ನಾವು ಕೇಳಿರುವ ಕಥೆ ಪ್ರಕಾರ ರಾಮ ಅಪಹರಿಸಿದ್ದ ಸೀತಾ ದೇವಿಯನ್ನು ಕಾಪಾಡಲು ಆಂಜನೇಯ ಲಂಕಾ ಪರ್ವತದ ಮೇಲಿಂದ ಹಾರಿ ಹೋಗಿದ್ದ ಅನ್ನುವುದು. ಲಂಕಾದ ತ್ರಿಪುರದಲ್ಲಿ ನೆಲೆಸಿದ್ದ ಆಂಜನೇಯನಿಗೆ ಅಲ್ಲಿದ್ದ ಗಿರಿಜನರು ಸಹಾಯ ಮಾಡಿದ್ದಾರಂತೆ.ಹೀಗಾಗಿ ಅಲ್ಲಿನ ಗಿರಿನಜರಿಗೆ ಆಂಜನೇಯ ದರ್ಶನ ನೀಡುತ್ತಾನಂತೆ. ಅದು ಪ್ರತಿ ನಲವತ್ತೊಂದು ವರ್ಷಕ್ಕೊಮ್ಮೆ ಆ ಬೆಟ್ಟಕ್ಕೆ ಬಂದು ತನ್ನ ಭಕ್ತರನ್ನು ಕಾಣುತ್ತಾನೆ ಎಂದು ಹೇಳಲಾಗಿದೆ. ಆ ಜಾಗದಲ್ಲಿ ಆಂಜನೇಯ ನೆಲೆಯಾಗಿದ್ದಾನೆ ಹಾಗು ಗಿರಿಜನರಿಗೆ ದರ್ಶನ ನೀಡುತ್ತಾನೆ ಅನ್ನುವುದಕ್ಕೆ ಅಲ್ಲಿ ಒಂದು ಪುರಾವೆ ಇದೆ. ಅದುವೇ ಆಂಜನೇಯನ ಪಾದದ ಗುರುತು. ಈ ಹಿಂದೆ 2014 ರ 27 ರಂದು ಆಂಜನೇಯ ಇಲಿಗೆ ಬಂದು ಗಿರಿಜನರಿಗೆ ದರ್ಶನ ನೀಡಿದ್ದನಂತೆ. ಇನ್ನು ಮುಂದೆ ಎರಡು ಸಾವಿರದ ಐವತ್ತೊಂದನೇ ಇಸವಿಯಲ್ಲಿ ಮತ್ತೆ ಆಂಜನೇಯ ಪ್ರತ್ಯಕ್ಷನಾಗಲಿದ್ದಾನೆ.