ಸಾಂಸ್ಕೃತಿಕ ನಗರಿ ಮೈಸೂರು ಸದಾ ಸುದ್ದಿಯಲ್ಲಿಯೇ ಇರುತ್ತದೆ. ಆದರೆ ಬಹುತೇಕ ಒಳ್ಳೆ ವಿಚಾರಗಳಿಗೆ ಸುದ್ದಿಯಾಗುತ್ತಿದ್ದ ಮೈಸೂರು ಕಳೆದ ಒಂದು ವಾರದಿಂದ ನಡೆಯಬಾರದ ಘಟನೆಗಳು ನಡೆದು ಸುದ್ದಿಯಾಗುತಿತ್ತು. ಮೈಸೂರು ಸುರಕ್ಷಿತ ಅಲ್ಲ ಎನ್ನುವ ಮಾತುಗಳು ಸಹ ಸಾಮಾಜಿಕ ಜಾಲತಾಣದಲ್ಲಿ ಕೇಳಿ ಬರುತ್ತಿದ್ದವು. ಆಭರಣ ಅಂಗಡಿಯ ಘಟನೆ ಹಾಗೂ ಚಾಮುಂಡಿ ಬೆಟ್ಟದಲ್ಲಿ ನಡೆದ ಘಟನೆ ರಾಜ್ಯವನ್ನೇ ಬೆಚ್ಚಿಬೀಳಿಸಿತು. ತೆರೆ ಮರೆಯಲ್ಲಿ ಇದ್ದ ಸಣ್ಣ ಪುಟ್ಟವರೆಲ್ಲಾ ಮುನ್ನೆಲೆಗೆ ಬಂದು ಈ ಬಗ್ಗೆ ಮಾತನಾಡಿ ಆದಷ್ಟು ಬೇಗ ಈ ಘಟನೆಗಳಿಗೆ ಕಾರಣರಾದವರನ್ನು ಹಿಡಿಯಿರಿ ಅನ್ನೋದಕ್ಕಿಂದ ಆಕೆ ಹಾಗೆ ಮಾಡಬಾರದಿತ್ತು. ಹೀಗೆ ಮಾಡಬಾರದಿತ್ತು. ಅಲ್ಲಿ ಆ ರೀತಿ ಮಾಡಬೇಕಿತ್ತು. ಈ ರೀತಿ ಮಾಡಬೇಕಿತ್ತು ಎಂದು ಪ್ರಚಾರ ಪಡೆದರಷ್ಟೇ. ಆದರೆ ರಾಜ್ಯದ ಸಾಮಾನ್ಯ ಜನರ ಮನವಿ ಮಾತ್ರ ಘಟನೆಗೆ ಕಾರಣರಾದವರನ್ನು ಹಿಡಿದು ಮುಂದೆ ಈ ರೀತಿ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಲಿ ಎಂಬುದೇ ಆಗಿತ್ತು.
ಜನರು ರಾಜಕಾರಣಿಗಳು ಎಲ್ಲರ ಮಾತಿನ ಒತ್ತಡ ಇದ್ದರೂ ಸಹ ಮೈಸೂರು ಪೊಲೀಸರು ಇದೀಗ ಒಂದು ಘಟನೆಗೆ ಕಾರಣರಾದವರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಹೌದು ಆಭರಣ ಅಂಗಡಿಯಲ್ಲಿ ನಡೆದ ಘಟನೆಗೆ ಕಾರಣರಾದವರನ್ನು ಹಿಡಿದ ರೋಚಕ ಸ್ಟೋರಿ ನಿಜಕ್ಕೂ ಮೈ ಜುಮ್ಮೆನ್ನುವಂತಿದೆ. ಹೌದು ಈ ಬಗ್ಗೆ ಇಂದು ಸುದ್ದಿ ಗೋಷ್ಠಿ ನಡೆಸಿ ಡಿ ಜಿ ಐಜಿಪಿ ಪ್ರವೀಣ್ ಸೂದ್ ಅವರು ಮಾಹಿತಿ ನೀಡಿದ್ದಾರೆ. ಹೌದು ಅಂದು ಘಟನೆ ನಡೆದ ಜಾಗದಲ್ಲಿ ಇದ್ದದ್ದು ನಾಲ್ಕು ಮಂದಿ. ಆದರೆ ಇದರಲ್ಲಿ ಪಾಲ್ಗೊಂಡಿರಿವುದು ಒಟ್ಟು ಎಂಟು ಮಂದಿ. ಅದರಲ್ಲಿ ಒಟ್ಟು ಆರು ಮಂದಿಯನ್ನು ಪೊಲೀಸರು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಅದರಲ್ಲಿ ಒಬ್ಬ ಮೈಸೂರಿನವನೇ ಮತ್ತೊಬ್ಬ ಬೆಂಗಳೂರಿನವನು ಇಬ್ಬರೂ ಸೇರಿ ಪ್ಲಾನ್ ಮಾಡಿ ಹೊರಗಿನವರನ್ನು ಕರೆಸಿ ಈ ಕೆಲಸ ಮಾಡಿಸಿದ್ದಾರೆ. ಘಟನೆ ನಡೆದ ಬಳಿಕ ಐದು ಮಂದಿ ಐದು ರಾಜ್ಯಕ್ಕೆ ತೆರಳಿದ್ದು ಎಲ್ಲೆಲ್ಲಿ ಹೋದರೆಂದು ತಿಳಿದರೆ ನಿಜಕ್ಕೂ ಶಾಕ್ ಆಗುತ್ತದೆ.
ಹೌದು ಕೆಲಸ ಮಾಡಿ ಆ ಎಂಟು ಮಂದಿ ಒಂದೊಂದು ರಾಜ್ಯಕ್ಕೆ ಓಡಿ ಹೋಗಿದ್ದರು. ಆ ಆ ರಾಜ್ಯಕ್ಕೆ ಹೋಗಿ ಮೈಸೂರಿನ ಪೊಲೀಸರು ಅವರುಗಳನ್ನು ಹಿಡಿದು ಹಾಕಿದ್ದಾರೆ. ಹೌದು ಒಬ್ಬ ಜಮ್ಮು ಕಾಶ್ಮೀರಕ್ಕೆ ಓಡಿ ಹೋಗಿದ್ದರೆ ಮತ್ತೊಬ್ಬ ರಾಜಸ್ಥಾನ ಮತ್ತೊಬ್ಬ ಪಶ್ಚಿಮ ಬಂಗಾಳಕ್ಕೆ ಓಡಿ ಹೋಗಿದ್ದನು. ಮತ್ತೊಬ್ಬ ಉತ್ತರ ಪ್ರದೇಶ ಮತ್ತೊಬ್ಬ ಮುಂಬೈ ಇನ್ನೊಬ್ಬ ಬೆಂಗಳೂರು.. ಒಟ್ಟು ಐದು ತಂಡಗಳನ್ನು ರಚಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ಅವರುಗಳು ಇದ್ದ ರಾಜ್ಯಗಳಿಗೆ ತೆರಳಿ ಹಿಡಿದು ಹಾಕಿದ್ದಾರೆ. ಅಷ್ಟೇ ಅಲ್ಲದೇ ಆ ಆ ರಾಜ್ಯದ ನ್ಯಾಯಾಲಯದ ಪ್ರಕ್ರಿಯೆ ಮುಗಿಸಿ ಅವರುಗಳನ್ನು ಮೈಸೂರಿಗೆ ಕರೆತರುವುದಾಗಿ ತಿಳಿಸಿದ್ದಾರೆ.