ಯುವರಾಜ್ ಕುಮಾರ್ ಸಹೋದ್ಯೋಗಿಯನ್ನೇ ಮದುವೆಯಾಗಿದ್ದೇಗೆ, ದೊಡ್ಮನೆ ಮದುವೆಯ ಕ್ಷಣಗಳು ನೋಡಿ!

 

ಸ್ನೇಹಿತರೆ, ಚಿಕ್ಕಪ್ಪನಂತೆ ಪ್ರೀತಿಸಿ ಮದುವೆಯಾಗಿದ್ದಂತಹ ಯುವರಾಜ್ ಕುಮಾರ್ ಅವರ ಹೆಂಡತಿ ಯಾರು? ತನ್ನ ಸಹೋದ್ಯೋಗಿಯನ್ನು ಮದುವೆಯಾಗಲು ಕಾರಣವಾದರೂ ಏನು? ಹಾಗೂ ರಾಘಣ್ಣ ಸೊಸೆಯನ್ನು ಪ್ರೀತಿಯಿಂದ ಏನೆಂದು ಕರೆಯುತ್ತಾರೆ? ಹೀಗೆ ದೊಡ್ಮನೆಯ ಮತ್ತಷ್ಟು ಸ್ವಾರಸ್ಯಕರ ಮಾಹಿತಿಯನ್ನು ತಿಳಿದುಕೊಳ್ಳಬೇಕಾದರೆ ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಫ್ರೆಂಡ್ಸ್ ಅಣ್ಣಾವ್ರುಂತೆಯೇ ಅವರ ಮಕ್ಕಳಾದ ಪುನೀತ್ ರಾಜಕುಮಾರ್, ರಾಘವೇಂದ್ರ ರಾಜಕುಮಾರ್ ಮತ್ತು ಶಿವರಾಜ್ ಕುಮಾರ್ ಕುಮಾರ್ ನಮ್ಮ ಕನ್ನಡ ಚಿತ್ರರಂಗಕ್ಕೆ ಅದ್ಭುತವಾದ ಕೊಡುಗೆಯನ್ನು ನೀಡುವ ಮೂಲಕ ಕನ್ನಡ ಚಿತ್ರರಂಗವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ಅದ್ಭುತ ಪಾತ್ರವನ್ನು ನಿರ್ವಹಿಸಿದ್ದಾರೆ.

ಅದರಂತೆ ಇದೀಗ ದೊಡ್ಮನೆ ಮೊಮ್ಮಕ್ಕಳ ಕಾಲ. ಹೌದು ಅಪ್ಪು ಮತ್ತು ಶಿವಣ್ಣನಿಗೆ ಇಬ್ಬರು ಹೆಣ್ಣುಮಕ್ಕಳಿರುವ ಕಾರಣ ಚಿತ್ರರಂಗದಿಂದ ಕೊಂಚ ದೂರ ಉಳಿದಿದ್ದಾರೆ ಎಂದೇ ಹೇಳಬಹುದು. ಅಂದಹಾಗೆ ದೊಡ್ಮನೆಯ ಗಂಡು ಮೊಮ್ಮಕ್ಕಳಾದ ಯುವರಾಜ್ ಕುಮಾರ್ ವಿನಯ್ ರಾಜಕುಮಾರ್ ಚಿತ್ರರಂಗದಲ್ಲಿ ತಮ್ಮನ್ನು.

ತಾವು ತೊಡಗಿಸಿಕೊಳ್ಳುವ ಮೂಲಕ ಒಂದೊಳ್ಳೆ ಬ್ರೇಕ್ಗಾಗಿ ಹುಡುಕಾಡುತ್ತಿದ್ದಾರೆ. ಇನ್ನು ಇತ್ತೀಚಿಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಂತಹ ರಾಘವೇಂದ್ರ ರಾಜಕುಮಾರ್ ಅವರ ಮಗ ವಿನಯ್ ರಾಜಕುಮಾರ್ ತಮ್ಮ ಸಹೋದ್ಯೋಗಿಯಾದಂತಹ ಶ್ರೀದೇವಿ ಅವರನ್ನು ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಸಾಮಾಜಿಕ ಜಾಲತಾಣದಲ್ಲಿ ಎಷ್ಟೇ ಹುಡುಕಿದರೂ ಶ್ರೀದೇವಿಯವರ ಕುರಿತು ಸಿಗದಂತಹ ಮಾಹಿತಿಯನ್ನು ನಾವು ಇವತ್ತು ನಿಮಗೆ ತಿಳಿಸ ಹೊರಟಿದ್ದೇವೆ. ಹೌದು ಮೂಲತಹ ಮೈಸೂರಿನವರಾದ ಶ್ರೀದೇವಿ ಅವರು ದೆಹಲಿಯಲ್ಲಿ ಉನ್ನತ ವಿದ್ಯಾಭ್ಯಾಸವನ್ನು ಮುಗಿಸಿ ಡಾಕ್ಟರ್ ರಾಜಕುಮಾರ್ ಅವರ ವಜ್ರೇಶ್ವರಿ ಪ್ರೊಡಕ್ಷನ್ನಲ್ಲಿ ಕೆಲಸ ಗಿಟ್ಟಿಸಿಕೊಳ್ಳುತ್ತಾರೆ.

ಯುವರಾಜ್ ಕುಮಾರ್ ವಜ್ರೇಶ್ವರಿ ಪ್ರೊಡಕ್ಷನ್ ಸಂಸ್ಥೆಯ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತು ಅದರ ಆಗುಹೋಗುಗಳನ್ನು ನೋಡಿಕೊಳ್ಳುತ್ತಿರುತ್ತಾರೆ. ಹೇಗೆ ಪ್ರತಿನಿತ್ಯ ಒಡನಾಟದಲ್ಲಿದ್ದಂತಹ ಇವರಿಬ್ಬರ ಸ್ನೇಹ ಪ್ರೀತಿಗೆ ತಿರುಗಿ ದೊಡ್ಡ ಮನೆಯವರೆಲ್ಲರ ಒಪ್ಪಿಗೆ ಪಡೆದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಹೌದು ಮೇ 26, 2019ರಲ್ಲಿ ಸಪ್ತಪದಿ ತುಳಿದ ದೊಡ್ಡಮನೆಯ ಈ ಮುದ್ದಾದ ಮಕ್ಕಳ ಮದುವೆಗೆ ಚಿತ್ರರಂಗದ ಗಣ್ಯಾತಿಗಣ್ಯರು ಸೇರಿದಂತೆ, ರಾಜಕೀಯ ನಾಯಕರು ಬಂದು ನವ ವಧುವರರಿಗೆ ಶುಭಹಾರೈಸಿದರು. ಈ ಪುಟದಲ್ಲಿರುವ ಕೆಲವು ಫೋಟೋಗಳ ಮೂಲಕ ಯುವರಾಜ್ ಕುಮಾರ್ ಮತ್ತು ಶ್ರೀದೇವಿ ಅವರ ಮದುವೆಯ ಮಧುರ ಕ್ಷಣಗಳು ಹೇಗಿತ್ತು ಎಂಬುದನ್ನು ನೋಡಬಹುದಾಗಿದೆ.