ಮೇಘನಾ ಇನ್ನುಮುಂದೆ ಪ್ರತಿ ವೀಕೆಂಡ್ ನಿಮ್ಮ ಮನೆಗೆ ಬರ್ತಾರೆ!

ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಮೇಘನಾ ರಾಜ್, ಸಾಕಷ್ಟು ವಿಚಾರಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಇದೀಗ ಬಹಳ ದಿನಗಳ ನಂತರ ಅಭಿಮಾನಿಗಳಿಗೆ ಒಂದು ದೊಡ್ಡ ಸರ್ಪ್ರೈಸ್ ನೀಡಿದ್ದಾರೆ ಮೇಘನಾ. ಮೇಘನಾ ಅವರನ್ನು ತೆರೆಯ ಮೇಲೆ ನೋಡಬೇಕು ಎಂದು ಅಭಿಮಾನಿಗಳು ಆಸೆ ಪಟ್ಟರು. ಅದಕ್ಕಿಂತ ದೊಡ್ಡ ಸರ್ಪ್ರೈಸ್ ಅನ್ನೇ ಮೇಘನಾ ನೀಡಿದ್ದಾರೆ. ಅದೇನು ಗೊತ್ತಾ? ತಿಳಿಸುತ್ತೇವೆ ನೋಡಿ.

ಮೇಘನಾ ರಾಜ್ ಇನ್ನುಮುಂದೆ ಪ್ರತಿ ವೀಕೆಂಡ್ ನಿಮ್ಮ ಮನೆಗೆ ಬರಲಿದ್ದಾರೆ. ಅದು ಹೇಗೆ ಅಂದ್ರೆ, ಕಲರ್ಸ್ ಕನ್ನಡ ವಾಹಿನಿಯ ಮೂಲಕ ಬರಲಿದ್ದಾರೆ ಮೇಘನಾ ರಾಜ್. ಕಲರ್ಸ್ ಕನ್ನಡ ವಾಹಿನಿಯ ಬಹಳ ಸ್ಪೆಷಲ್ ಆದ ಡ್ಯಾನ್ಸ್ ಶೋ, ಡ್ಯಾನ್ಸಿಂಗ್ ಚಾಂಪಿಯನ್ ಶೋಗೆ ಮೇಘನಾ ರಾಜ್ ಅವರು ಜಡ್ಜ್ ಆಗಿ ಬರುತ್ತಿದ್ದಾರೆ. ಇಂದು ಪ್ರೊಮೋ ಬಿಡುಗಡೆ ಆಗಿದ್ದು, ಪ್ರೊಮೋ ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಮೇಘನಾ ಅವರು ಸಹ ಪ್ರೊಮೋ ವಿಡಿಯೋ ಶೇರ್ ಮಾಡಿ, ಸಂತೋಷ ವ್ಯಕ್ತಪಡಿಸಿದ್ದಾರೆ.

ನಟಿ ಮೇಘನಾ ರಾಜ್ ಚಿಕ್ಕ ವಯಸ್ಸಿನಿಂದಲೂ ಕನ್ನಡ ಚಿತ್ರರಂಗದಲ್ಲಿ ಆಡಿ ಬೆಳೆದವರು. ಇವರ ತಂದೆ ತಾಯಿಯರು ಹಿರಿಯ ಕಲಾವಿದರಾದ ಪ್ರಮೀಳಾ ಜೋಷಾಯ್ ಮತ್ತು ಸುಂದರ್ ರಾಜ್ ಇಬ್ಬರು ಕೂಡ 4 ದಶಕಕ್ಕಿಂತ ಹೆಚ್ಚಿನ ಸಮಯದಿಂದ ಸ್ಯಾಂಡಲ್ ವುಡ್ ಗೆ ಸೇವೆ ಸಲ್ಲಿಸಿದ್ದಾರೆ.ಹಾಗಾಗಿ ಕನ್ನಡ ಚಿತ್ರರಂಗ ಮೇಘನಾ ರಾಜ್ ಅವರಿಗೆ ಹೊಸದೇನಲ್ಲ. ಬಾಲನಟಿಯಾಗಿ ಜೋಕುಮಾರಸ್ವಾಮಿ ಸಿನಿಮಾದಲ್ಲಿ ನಟಿಸಿದ ನಂತರ ವಿದ್ಯಾಭ್ಯಾಸದ ಕಡೆ ಹೆಚ್ಚು ಗಮನ ಹರಿಸಿದರು ಮೇಘನಾ ರಾಜ್.
ಸೈಕಾಲಜಿ ವಿಷಯದಲ್ಲಿ ಪದವಿ ಪಡೆದ ನಂತರ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟರು.

ಪುಂಡ ಸಿನಿಮಾ ಮೂಲಕ ನಾಯಕಿಯಾದ ಮೇಘನಾ ರಾಜ್, ನಂತರ ಮಲಯಾಳಂ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಮಲಯಾಳಂ ಚಿತ್ರರಂಗದಲ್ಲಿ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿ ಅಲ್ಲಿನ ಟಾಪ್ ನಟಿಯಾಗಿ ಯಶಸ್ಸು ಗಳಿಸಿದರು ಮೇಘನಾ. ನಂತರ ರಾಜಾಹುಲಿ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ವಾಪಸ್ ಬಂದರು. ಆಟಗಾರ ಸೇರಿದಂತೆ ಹಲವಾರು ಕನ್ನಡ ಸಿನಿಮಾಗಳಲ್ಲಿ ಮೇಘನಾ ನಟಿಸಿದರು. ತಮಿಳು ಚಿತ್ರರಂಗದಲ್ಲಿ ಕೂಡ ಒಂದೆರಡು ಸಿನಿಮಾಗಳಲ್ಲಿ ನಟಿಸಿದ್ದಾರೆ ಮೇಘನಾ.
ಮಲಯಾಳಂ ಮತ್ತು ಕನ್ನಡ ಚಿತ್ರರಂಗದಲ್ಲಿ ಮೇಘನಾ ಅವರಿಗೆ ದೊಡ್ಡ ಫ್ಯಾನ್ ಬೇಸ್ ಇದೆ. ಈಗ ಮತ್ತೊಮ್ಮೆ ನಟನೆಗೆ ಮರಳಿ ಬರುತ್ತಿದ್ದಾರೆ ಮೇಘನಾ.