ನಟ, ನಿರ್ದೇಶಕ ಕಾಶಿನಾಥ್ ಅವರ ಸಿನಿಮಾ ಏನಾದರೂ ಟಿವಿಯಲ್ಲಿ ಪ್ರಸಾರ ಮಾಡಿದರೆ ಜನ ತಪ್ಪದೇ ನೋಡುತ್ತಾರೆ. ಅಲ್ಲದೇ, ಅದೆಷ್ಟು ಜನ ಇಂದಿಗೂ ಕದ್ದುಮುಚ್ಚಿ ಯೂಟ್ಯೂಬ್ ಚಾನೆಲ್ಗಳಲ್ಲಿ ಇವರ ಸಿನಿಮಾ ನೋಡಿದವರಿಲ್ಲ ಹೇಳಿ. ಕಾಶಿನಾಥ್ ಎಂದರೆ ಇಡೀ ಕನ್ನಡ ಸಿನಿಮಾದಲ್ಲಿ ಬೇರೆಯದೇ ಹೆಸರು. ಅವರು ನಿರ್ದೇಶನ ಮಾಡಿದ ಸಿನಿಮಾಗಳು ನಿಜಕ್ಕೂ ಅದೆಷ್ಟು ಜನರ ಮನಸ್ಸನ್ನು ಗೆದ್ದಿಲ್ಲಾ.
ರಿಯಲ್ ಸ್ಟಾರ್ ಉಪೇಂದ್ರ ಅವರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯ ಮಾಡಿಸಿದ್ದೇ ಇದೇ ಕಾಶಿನಾಥ್ ಅವರು. ನಟ ಉಪೇಂದ್ರ ಅವರು ಓಂ ಚಿತ್ರವನ್ನು ನಿರ್ದೇಶನ ಮಾಡಲೂ ಇದೇ ಕಾಶಿನಾಥ್ ಅವರ ಪ್ರೋತ್ಸಾಹವೇ ಕಾರಣ. ನಟ ಉಪೇಂದ್ರ ಅವರಿಗೆ ಕಾಶಿನಾಥ್ ಅವರು ಸಿನಿಮಾ ಗುರುವಾಗಿದ್ದರು. ಆದರೆ ಕಾಶಿನಾಥ್ ಅವರು ಇಂದು ನಮ್ಮೊಂದಿಗೆ ಇಲ್ಲ. ನಟ, ನಿರ್ದೇಶಕ ದ್ವಾರಕೀಶ್ ಅವರು ನಿರ್ದೇಶನ ಮಾಡಿದ ಚೌಕ ಸಿನಿಮಾ ಇವರು ನಟಿಸಿದ ಕೊನೆಯ ಚಿತ್ರ.
ಈ ಚಿತ್ರದಲ್ಲಿ ಐ ಲವ್ ಯೂ ಅಪ್ಪ ಹಾಡಿನಲ್ಲಿ ಕಾಣಿಸಿಕೊಳ್ಳುವ ಮೂಲಕ ಸಾಕಷ್ಟು ಜನಪ್ರಿಯತೆಯನ್ನು ಮತ್ತೆ ಗಳಿಸಿಕೊಂಡರು. ೧೯೭೬ರಿಂದ ಕಾಶಿನಾಥ್ ಅವರು ತಮ್ಮ ಸಿನಿಮಾ ಪ್ರಯಾಣವನ್ನು ಪ್ರಾರಂಭಿಸಿದರು. ಅಮರ ಮಧುರ ಪ್ರೇಮ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ಈ ಚಿತ್ರದಲ್ಲಿ ಅವರು ಕೇವಲ ನಿರ್ದೇಶನ ಮಾತ್ರವಲ್ಲ, ನಟನಾಗಿಯೂ ಕಾಣಿಸಿಕೊಂಡಿದ್ದರು. ಅವರು ತಮ್ಮ ಸಿನಿಮಾ ವೃತ್ತಿ ಜೀವನದಲ್ಲಿ ೪೦ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಅಲ್ಲದೇ ಪೋಷಕ ಪಾತ್ರಗಳಲ್ಲೂ ಕಾಣಿಸಿಕೊಂಡಿದ್ದಾರೆ. ೧೯೯೩ರಲ್ಲಿ ಬಿಡುಗಡೆಯಾದ ಶ್! ಎಂಬ ಚಿತ್ರವನ್ನು ಇಂದಿಗೂ ಯಾವ ಸಿನಿ ಪ್ರೇಕ್ಷಕರು ಮರೆಯಲು ಸಾಧ್ಯವಿಲ್ಲ. ಕನ್ನಡಿ ಸಿನಿಮಾರಂಗದಲ್ಲೇ ವಿಶಿಷ್ಟ ಪ್ರಯೋಗಾತ್ಮಕ ಚಿತ್ರಗಳನ್ನು ಇವರು ಕೊಡುಗೆ ನೀಡಿದ್ದಾರೆ. ನಟ ಕಾಶಿನಾಥ್ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಒಬ್ಬ ಮಗಳು ಹಾಗೂ ಒಬ್ಬ ಮಗ. ಹೆಂಡತಿ ಹೆಸರು ಚಂದ್ರಪ್ರಭಾ ಎಂದು. ಅವರು ತಮ್ಮ ಇಬ್ಬರು ಮಕ್ಕಳಿಗೂ ಮದುವೆ ಮಾಡಿದ್ದಾರೆ.
ನಟ ಕಾಶಿನಾಥ್ ಅವರು ಇಹಲೋಕ ತ್ಯಜಿಸಿದಾಗ ಪತ್ನಿ ಚಂದ್ರಪ್ರಭಾ ಅವರು ಅದೆಷ್ಟು ಸಂಕಟ ಪಟ್ಟರು ಎಂಬುದನ್ನು ಆ ದೇವರು ಮಾತ್ರ ನೋಡಲು ಸಾಧ್ಯ ಎನ್ನುವಂತಿತ್ತು. ಕಾಶಿನಾಥ್ ಅವರದ್ದು ಬಹಳ ಅಚ್ಚುಕಟ್ಟಾದ ದಾಂಪತ್ಯ. ಆದರೆ ಇವರು ಸಾಕಷ್ಟು ಡಬ್ಬಲ್ ಮೀನಿಂಗ್ ಬರುವ ಸಿನಿಮಾಗಳಲ್ಲೇ ಹೆಚ್ಚು ತಯಾರಿಸಿದ್ದರು. ಇದೇ ಕಾರಣಕ್ಕಾಗಿ ಹೆಚ್ಚು ಜನ ಪ್ರೇಕ್ಷಕರು ಇವರ ಸಿನಿಮಾಗಳನ್ನು ಕದ್ದುಮುಚ್ಚಿ ನೋಡುತ್ತಿದ್ದರು.
ಆದರೆ ಒಂದು ಬಾರಿಯೂ ತಮ್ಮ ಹೆಂಡತಿ ಈ ರೀತಿಯ ಚಿತ್ರಗಳನ್ನು ನಿರ್ದೇಶನ ಮಾಡಿದ್ದಕ್ಕೆ ಆಕ್ಷೇಪ ತೆಗೆದಿರಲಿಲ್ಲ. ಅಷ್ಟರಮಟ್ಟಿಗೆ ಅವರ ದಾಂಪತ್ಯ ಜೀವನ ಸಾಗಿತ್ತು. ಪ್ರಸ್ತುತ ಚಂದ್ರಪ್ರಭಾ ಅವರ ತಮ್ಮ ಮಗನ ಜೊತೆಗೆ ಕಾಲ ಕಳೆಯುತ್ತಿದ್ದಾರೆ. ಅವರ ಮಗ ಕೂಡ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ನಟನೆ ಮಾಡುವ ಹವ್ಯಾಸವನ್ನೂ ಇಟ್ಟುಕೊಂಡಿದ್ದಾರೆ. ಅಲ್ಲದೇ ೨-೩ ಸಿನಿಮಾಗಳಲ್ಲೂ ಕಾಣಿಸಿಕೊಂಡಿದ್ದಾರೆ. ಆದರೆ ತಂದೆ ಕಾಶಿನಾಥ್ ಅವರಷ್ಟರ ಮಟ್ಟಿಗೆ ಮಗನಿಗೆ ಹೆಸರು ಮಾಡಲು ಸಾಧ್ಯವಾಗಲಿಲ್ಲ.