ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಶಾಕ್! ಕೊರೊನಾಗೆ ಖ್ಯಾತ ಖಳನಟ ಕೆಜಿಫ್ ವಿಲನ್ ಬಲಿ!

 

ಎಲ್ಲಿ ನೋಡಿದರಲ್ಲಿ, ಯಾವ ಮಾಧ್ಯಮವನ್ನು ನೋಡಿದರೂ ಕೂಡ ಈ ಸುದ್ದಿ ಬಿಟ್ಟು ಬೇರೆಯದು ಇಲ್ಲ. ಇದೇ ವೇಳೆ ಕನ್ನಡ ಚಿತ್ರರಂಗಕ್ಕಂತೂ ಶಾಪವೇ ತಟ್ಟಿದೆ ಎಂಬಷ್ಟರ ಮಟ್ಟಿಗೆ ಈ ಕೊರೊನಾ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಇದೇ ಕಾರಣಕ್ಕಾಗಿ ಸಾಕಷ್ಟು ಚಿತ್ರರಂಗದ ಬಹುತೇಕ ಮಂದಿ ಕೂಡ ಸಾವನ್ನಪ್ಪಬೇಕಾಯಿತು. ಅದಷ್ಟೇ ಅಲ್ಲ ಸಾವಿರಾರು ಸಾಮಾನ್ಯ ಮಂದಿ ಕೂಡ ಕೊರೊನಾ ಅಟ್ಟಹಾಸಕ್ಕೆ ಬಲಿಯಾಗಿದ್ದಾರೆ.

ಈಗ ಕೆಜಿಎಫ್‌ನ ಚಾಪ್ಟರ್‌ ೧ ಚಿತ್ರದಲ್ಲಿ ವಿಲನ್‌ ಪಾತ್ರದಲ್ಲಿ ಮಿಂಚಿದ್ದ ಮಾರನ್‌ ಅವರು ಕೊರೊನಾ ಕಾರಣದಿಂದಾಗಿ ನಿಧನ ಹೊಂದಿದ್ದಾರೆ. ಮಾರನ್‌ ಅವರಿಗೆ ಕೊರೊನಾ ಸೋಂಕು ತಗುಲಿದ್ದರಿಂದ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಾರನ್‌ ಅವರು ತಮ್ಮ ಕೊನೆಯುಸಿರು ಎಳೆದಿದ್ದಾರೆ.

ಮಾರನ್‌ ಅವರು ಮೂಲತಃ ತಮಿಳು ಚಿತ್ರರಂಗದಲ್ಲಿ ಗಿಲ್ಲಿ ಮತ್ತು ಕುರುವಿ ಪಾತ್ರಗಳಿಗೆ ಹೆಸರುವಾಸಿಯಾಗಿದ್ದರು.  ಬಾಸ್‌, ಎಂಗೀರಾ ಭಾಸ್ಕರನ್‌, ತಲೈ ನಗರಂ, ಡಿಶುಂ, ವೆಟ್ಟೈ, ಕೆಜಿಎಫ್‌ ಚಾಪ್ಟರ್‌ ೧ ಸೇರಿದಂತೆ ನಾನಾ ಚಿತ್ರಗಳಲ್ಲಿ ಖಳನಾಯಕನ ಪಾತ್ರದಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದರು. ಮಾರನ್‌ ಅವರು ಕೇವಲ ಖಳನಾಯಕನ ಪಾತ್ರವಷ್ಟೇ ಅಲ್ಲದೇ, ಹಾಸ್ಯ ಪಾತ್ರಗಳಲ್ಲಿಯೂ ಕಾಣಿಸಿಕೊಂಡಿದ್ದರು.
ಮಾರನ್‌ ಅವರ ನಿಧನಕ್ಕೆ ಇಡೀ ಕನ್ನಡ ಚಿತ್ರರಂಗ ಹಾಘೂ ತಮಿಳು ಚಿತ್ರರಂಗ ಕಂಬನಿ ಮಿಡಿದಿದೆ. ಇನ್ನು ಈ ಕೊರೊನಾ ಕಾರಣದಿಂದಾಗಿ ಅದೆಷ್ಟು ಜನರ ಸಾವು ನೋವನ್ನು ನೋಡಬೇಕಾಗಿದೆಯೋ ತಿಳಿದಿಲ್ಲ. ಆದರೆ ಆದಷ್ಟು ಬೇಗ ಈ ಕೊರೊನಾ ಆತಂಕ ಕಡಿಮೆಯಾಗಿ ಎಲ್ಲವೂ ಮೊದಲಿನಂತಾಗಲಿ ಎಂಬುದು ನಮ್ಮ ಪ್ರಾರ್ಥನೆ.
೨ನೇ ಬಾರಿಗೆ ಅಪ್ಪಳಿಸಿದ ಕೊರೊನಾ ಮೊದಲ ಬಾರಿಗಿಂತ ವೇಗವಾಗಿ ಹರಡುತ್ತಿದ್ದು, ಸಾಕಷ್ಟು ಸಾವು ನೋವನ್ನು ತಂದಿತು. ಇದೇ ಕಾರಣಕ್ಕಾಗಿ ರಾಜ್ಯದಲ್ಲಿ ಕೂಡ ಇದೇ ತಿಂಗಳ ೨೪ರವರೆಗೆ ಲಾಕ್‌ ಡೌನ್‌ ಮಾಡಲಾಗಿದೆ. ಕೊರೊನಾ ಕಾರಣದಿಂದಾಗಿ ಕನ್ನಡ ಚಿತ್ರರಂಗದಲ್ಲಿ ಇದುವರೆಗೂ ೨೧ಕ್ಕೂ ಹೆಚ್ಚು ಜನರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಇಷ್ಟಾದರೂ ಕೂಡ ಸಾವಿನ ಅಟ್ಟಹಾಸ ಕಡಿಮೆಯಾಗಿಲ್ಲ.
ಪ್ರತಿದಿನವೂ ಕೋರೊನಾ ಸೋಂಕಿಗೆ ತುತ್ತಾಗುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಆದರೆ ಇದು ಗ್ರಾಮೀಣ ಭಾಗಕ್ಕೆ ಹರಡುತ್ತಿರುವುದು ಮತ್ತಷ್ಟು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ. ಏಕೆಂದರೆ ಗ್ರಾಮೀಣ ಭಾಗದಲ್ಲಿ ಸೂಕ್ತವಾದ ಆಸ್ಪತ್ರೆ ಹಾಗೂ ವೈದ್ಯರು ಲಭ್ಯವಿಲ್ಲದೇ ಇರುವುದು, ಆಕ್ಸಿಜನ್‌, ವೆಂಟೆಲೀಟರ್‌ ಸೌಲಭ್ಯ ಈ ಎಲ್ಲಾ ಕಾರಣಗಳಿಂದಾಗಿ ಕೊರೊನಾ ಗ್ರಾಮೀಣ ಪ್ರದೇಶಕ್ಕೆ ಹರಡುತ್ತಿರುವುದು ಸಾಕಷ್ಟು ಆತಂಕವನ್ನು ಹುಟ್ಟು ಹಾಕಿದೆ.