ನಮ್ಮ ಭಾರತ ದೇಶದ ರಾಜೀಕಯ ವಲಯದಲ್ಲಿ ಓರ್ವ ವ್ಯಕ್ತಿ ‘ಎಂ ಎಲ್ ಎ’ ಆಗುವುದು ಅಂದರೆ ಅಷ್ಟು ಸುಲಭದ ಮಾತಲ್ಲ ಬಿಡಿ ಹಾಗೂ ‘ಎಂ ಎಲ್ ಎ’ ಆಗಲು ಕೋಟಿ ಕೋಟಿ ಹಣವನ್ನ ಕೂಡ ಖರ್ಚು ಮಾಡಬೇಕಾಗುತ್ತದೆ ಎಂಬ ಪದ್ಧತಿ ಕೂಡ ಇದೆ. ಇನ್ನು ಒಂದು ಭಾರಿ ‘ಎಂ ಎಲ್ ಎ’ ಆದರೆ ಸಾಕು ತಮ್ಮ ಮಕ್ಕಳ ಮೊಮ್ಮೊಕ್ಕಳ ಜೀವನಕ್ಕೆ ಸಾಕಾಗುವಷ್ಟು ಹಣವನ್ನ ಗಳಿಕೆ ಮಾಡುವ ಇಂದಿನ ರಾಜಕಾರಣಿಗಳ ಮಧ್ಯೆ, ಇನ್ನು ಕೆಲವೇ ಕೆಲವರು ಮಾತ್ರ ಎಲ್ಲರಿಗಿಂತ ಸ್ವಲ್ಪ ಭಿನ್ನವಾಗಿರುತ್ತಾರೆ ಹಾಗೂ ಅವರು ಇತರೆ ವ್ಯಕ್ತಿಗಳಿಗೆ ಮಾಧರಿಯಾಗಿರುತ್ತಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.
ಇದೀಗ ನಾವು ಹೇಳಲು ಹೊರಟಿರುವ ವ್ಯಕ್ತಿ ಬರೋಬ್ಬರಿ ಐದು ಭಾರಿ ‘ಎಂ ಎಲ್ ಎ’ ಆಗಿದ್ದು ಅವರು ಇದೀಗ ಹೇಗೆ ಜೀವನವನ್ನ ಮಾಡುತ್ತಿದ್ದಾರೆ ಎಂದು ತಿಳಿದರೆ ನೀವು ಅಚ್ಚರಿ ಪಡುವುದಂತು ಗ್ಯಾರೆಂಟಿ ಹಾಗೂ ಇಂತಹ ವ್ಯಕ್ತಿಗಳು ಇನ್ನು ಕೂಡ ಭೂಮಿ ಮೇಲೆ ಇದ್ದಾರಯೇ ಎಂದು ಆಶ್ಚರ್ಯ ಪಡಬಹುದು. ಹಾಗಾದರೆ ಈ ವ್ಯಕ್ತಿ ಯಾರು ಮತ್ತು ಇವರು ಹೇಗೆ ಜೀವನವನ್ನ ಮಾಡುತ್ತಿದ್ದಾರೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ತಿಳಿದುಕೊಳ್ಳಲು ಈ ಲೇಖನಿಯನ್ನು ಪೂರ್ತಿಯಾಗಿ ಓದಿ.
ಹೌದು ಈ ವ್ಯಕ್ತಿಯ ಹೆಸರು ಗುಮ್ಮಡಿ ನರಸಯ್ಯ ಎಂಬುದಾಗಿದ್ದು, ತೆಲಂಗಾಣ ರಾಜ್ಯದ ಖಮ್ಮಮ್ ಜಿಲ್ಲೆಯ ಎಲ್ಲಂದು ಕ್ಷೇತ್ರದಲ್ಲಿ ಬರೋಬ್ಬರಿ ಐದು ಭಾರಿ ಎಂ ಎಲ್ ಎ ಆಗಿ ಗೆದ್ದು ಜನರ ಸೇವೆಯನ್ನ ಮಾಡುತ್ತಿದ್ದಾರೆ. ಇನ್ನು ಗುಮ್ಮಡಿ ನರಸಯ್ಯ ಅವರು ಎಂ ಎಲ್ ಎ ಆಗಿದ್ದಾಗ ಅವರಿಗೆ ಕೋಟಿಗಟ್ಟಲೆ ಹಣವನ್ನ ಗಳಿಸುವ ಅವಕಾಶ ಕೂಡ ಇತ್ತು, ಆದರೆ ಸಿಕ್ಕ ಅವಕಾಶವನ್ನ ದುರುಪಯೋಗ ಮಾಡಿಕೊಳ್ಳದ ಅವರು ಆ ಹಣವನ್ನ ಜನರಿಗಾಗಿ ಮೀಸಲಿಟ್ಟಿದ್ದು, ಸದಾ ಜನ ಸೇವೆಯಲ್ಲಿ ನಿರತರಾಗಿದ್ದರು.
“ನನಗೆ ಹಣ ಬೇಡ, ಜನರ ಪ್ರೀತಿ ಬೇಕು” ಎಂದು ಹೇಳುವ ಅವರು ಬರೋಬ್ಬರಿ 25 ವರ್ಷಗಳ ಕಾಲ ಜನರ ಸೇವೆಯನ್ನ ಮಾಡುತ್ತಲೇ ಜೀವನವನ್ನ ಸಾಗಿಸುತ್ತಿರುವ ಗುಮ್ಮಡಿ ನರಸಯ್ಯ ರವರು, ಐದು ಭಾರಿ ಎಂಎಲ್ಎ ಆಗಿ ಆಯ್ಕೆಯಾದ ರು. ಒಂದು ರೂಪಾಯಿ ಹಣವನ್ನ ಕೂಡ ಕೆಟ್ಟ ದಾರಿಯಲ್ಲಿ ಸಂಪಾಧನೆ ಮಾಡದ ಅವರು, ಈಗಲೂ ಕೂಡ ತಮ್ಮ ಹಳೆಯ ಮನೆ, ಹಳೆಯ ಸೈಕಲ್ ಮತ್ತು ಎಲ್ಲಿಗಾದರೂ ದೂರ ಹೋಗಬೇಕು ಅಂದರೆ ಬಸ್ ಸ್ಟಾಂಡ್ ನಲ್ಲಿ ನಿಂತು ಬಸ್ ಬರುವ ತನಕ ಕಾದು ನಂತರ ಬಸ್ ನಲ್ಲಿ ಹೋಗುತ್ತಾರೆ.
ನರಸಯ್ಯ ಎಷ್ಟು ಸರಳ ಜೀವಿ ಎಂದರೆ, ಒಂದು ದಿನ ನರಸಯ್ಯ ಅವರು ಸೈಕಲ್ ತಳ್ಳಿಕೊಂಡು ಹೋಗುತ್ತಿದ್ದಾಗ ಹಿಂದಿನಿಂದ ಬಂದ ಒರ್ವ ದ್ವಿಚಕ್ರ ವಾಹನ ಸವಾರ ಅವರಯ ಎಂಎಲ್ಎ ಎಂದು ತಿಳಿಯದೆ ‘ಹೇ ಮುದುಕ ಪಕ್ಕಕ್ಕೆ ಸರಿ’ ಎಂದು ಬೈದಿದ್ದಾನೆ, ಈ ಸಮಯದಲ್ಲಿ ಕೊಂಚ ಕೋಪ ಕೂಡ ಮಾಡಿಕೊಳ್ಳದ ನರಸಯ್ಯ ಅವರು, ತುಂಬಾ ಸಮಾಧಾನಕರವಾಗಿ ಆಯಿತು ಹೋಗು ಎಂದು ಹೇಳಿದರಂತೆ.
ನರಸಯ್ಯ ಅವರು ಸಾಮಾನ್ಯರಲ್ಲಿ ಸಾಮಾನ್ಯರಂತೆ ಜೀವನವನ್ನ ಮಾಡುತ್ತಿದ್ದು, ನರಸಯ್ಯ ಅವರ ರೀತಿಯೇ ಎಲ್ಲಾ ಎಂಎಲ್ಎ ಗಳು ಮತ್ತು ಎಲ್ಲಾ ರಾಜಕೀಯ ನಾಯಕರು ಜೀವನವನ್ನ ಮಾಡಿದರೆ ಎಷ್ಟು ಚಂದ ಅಲ್ಲವೇ? ಇನ್ನು ಕೆಲವು ವ್ಯಕ್ತಿಗಳ ಬಗ್ಗೆ ನಾವು ಮಾತನಾಡುತ್ತೇವೆಯೇ ಹೊರತು ಅವರನ್ನ ಜೀವನದಲ್ಲಿ ಆದರ್ಶವಾಗಿ ತೆಗೆದುಕೊಳ್ಳುವುದಿಲ್ಲ, MLA ನರಸಯ್ಯ ಆದರ್ಶವಾಗಿ ತೆಗೆದುಕೊಂಡರೆ ದೇಶ ಉಜ್ವಲವಾಗುವುದಲ್ಲಿ ಎರಡು ಮಾತಿಲ್ಲ.