ನಟ ಉದಯ್ ಹಾಗು ಅನಿಲ್ ದುರಂತದ ದಿನ ವಿನಯ್ ಗುರೂಜಿ ಏನು ಹೇಳಿದ್ದರು ಗೊತ್ತಾ….ನೋಡಿ

 

ಕನ್ನಡ ಚಿತ್ರರಂಗದಲ್ಲಿ ಒಂದು ಅಪಘಾತವನ್ನು ಮುರಿಯಲು ಸಾಧ್ಯವೇ ಇಲ್ಲ ಎಂದರೆ ಅದು ಮಾಸ್ತಿಗುಡಿ ಚಿತ್ರದ ಕ್ಲೈಮ್ಯಾಕ್ಸ್ ಶೂಟ್ ಅಂತಾನೇ ಹೇಳಬಹುದು. ಹೌದು ಅನಿಲ್ ಹಾಗೂ ಉದಯ್ ಇಬ್ಬರೂ ಕೂಡಾ ಚಿತ್ರದ ಕ್ಲೈಮಾಕ್ಸ್ ಚಿತ್ರೀಕರಣದ ವೇಳೆ ಪ್ರಾಣ ಕಳೆದುಕೊಂಡಿದ್ದು, ಚಿತ್ರತಂಡದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.ಹೌದು ನವೆಂಬರ್ 7, 2016 ರಂದು ಈ ರೀತಿಯಾದಂತಹ ದುರಂತವೊಂದು ಸಂಭವಿಸಿದ್ದು, ದುನಿಯಾ ವಿಜಯ್ ಅಭಿನಯದ ‘ಮಾಸ್ತಿಗುಡಿ’ ಚಿತ್ರದ ಶೂಟಿಂಗ್‌ ವೇಳೆ ಇಬ್ಬರು ಖಳನಟರು ನೀರಿನಲ್ಲಿ ಮುಳುಗಿ ಪ್ರಾಣ ಕಳೆದುಕೊಂಡಿದ್ದರು.

ನಾಗಶೇಖರ್‌ ನಿರ್ದೇಶನದ ‘ಮಾಸ್ತಿಗುಡಿ’ ಚಿತ್ರದ ಕ್ಲೈಮ್ಯಾಕ್ಸ್‌ ಚಿತ್ರೀಕರಣವು ನವೆಂಬರ್ 7, 2016 ರ ಸೋಮವಾರದಂದು ಮಧ್ಯಾಹ್ನ 2.45ರ ಸುಮಾರಿಗೆ ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿ ನಡೆಯುತ್ತಿತ್ತು. ನಾಯಕ ದುನಿಯಾ ವಿಜಯ್‌ ಹಾಗೂ ನಟರಾದ ಅನಿಲ್‌ ಮತ್ತು ಉದಯ್‌ ಹೆಲಿಕಾಪ್ಟರ್‌ನಿಂದ ನೀರಿಗೆ ಜಿಗಿಯುವ ದೃಶ್ಯದ ಚಿತ್ರೀಕರಣ ನಡೆಯುತ್ತಿತ್ತು. ಅದರಂತೆಯೇ ಹೆಲಿಕಾಪ್ಟರ್‌ನಿಂದ ಈ ಮೂವರು ನೀರಿಗೆ ಜಿಗಿದಿದ್ದು, ದುನಿಯಾ ವಿಜಯ್‌ ಅವರು ಅಪಾಯದಿಂದ ಪಾರಾಗಿ ದಡ ಸೇರಿದ್ದಾರೆ.

ಆದರೆ, ಅನಿಲ್‌ ಮತ್ತು ಉದಯ್‌ ನೀರಿನಲ್ಲಿ ಮುಳುಗಿದವರು ಮತ್ತೆ ಮೇಲೆಳಲಿಲ್ಲ. ಮೂರು ತಂಡಗಳಾಗಿ ಅನಿಲ್ ಹಾಗೂ ಉದಯ್ ಮೃತದೇಹಗಳಿಗಾಗಿ ಶೋಧ ಕಾರ್ಯ ಕೈಗೊಂಡಿದ್ದು, 48 ಗಂಟೆಗಳ ಬಳಿಕ ಅನಿಲ್ ಅವರ ದೇಹ ಪತ್ತೆಯಾಗಿತ್ತು.ಈ ಅವಘಡಕ್ಕೆ ಕಾರಣ ತಾಂತ್ರಿಕ ದೋಷ ಕಾರಣ ಎನ್ನಲಾಗಿದೆ. ಅನಿಲ್ ಹಾಗೂ ಉದಯ್ ನೀರಿಗೆ ಜಿಗಿದ ಸಮಯಕ್ಕೆ ಸರಿಯಾಗಿ ಬೋಟ್ ಸ್ಥಳಕ್ಕೆ ಹೋಗಬೇಕಿತ್ತು. ಆದರೆ ಬೋಟ್ ಸ್ಟಾರ್ಟ್ ಆಗಿರಲಿಲ್ಲ.

ನಂತರ ತೆಪ್ಪದ ಮೂಲಕ ರಕ್ಷಿಸೋ ಪ್ರಯತ್ನ ನಡೆಸಿದ್ದರೂ ಕೂಡ ಅಷ್ಟರ ಹೊತ್ತಿಗಾಗಲೇ ತಡವಾಗಿತ್ತು. ಇನ್ನು, ಅನಿಲ್ ಹಾಗೂ ಉದಯ್‌ಗೆ ಸರಿಯಾಗಿ ಈಜು ಕೂಡ ಬರುತ್ತಿರಲಿಲ್ಲ. ಕನ್ನಡ ಚಿತ್ರರಂಗದಲ್ಲಿ ದುನಿಯಾ ವಿಜಯ್‌ ಅವರನ್ ತನ್ನ ಗುರು ಎಂದು ಹೇಳಿತಿದ್ದ ಅನಿಲ್ ಹಾಗೂ ಉದಯ್‌, ದುರಂತ ನಡೆಯುವುದಕ್ಕೂ ಮುನ್ನಾ ಇಬ್ಬರೂ ಕೂಡ ದುನಿಯಾ ವಿಜಿ ಕಾಲಿಗೆ ನಮಸ್ಕರಿಸಿದ್ದರು ಹಾಗೆಯೇ ಸೆಲ್ಫಿ ಕೂಡಾ ತೆಗೆದುಕೊಂಡಿದ್ದರು.

ಇಂತಹ ಸಾಹಸವನ್ನು ಇದೇ ಮೊದಲ ಬಾರಿಗೆ ಮಾಡುತ್ತಿದ್ದು, ಕುತೂಹಲವೂ ಆಗುತ್ತಿದೆ. ಹಾಗೆಯೇ ಸ್ವಲ್ಪ ಭಯವೂ ಆಗುತ್ತಿದೆ ಎಂದು ಉದಯ್‌ ಹೇಳಿಕೊಂಡಿದ್ದರು. ಇನ್ನು ಈ ಘಟನೆ ನಡೆಯುವುದಕ್ಕೂ ಮುನ್ನ, ಈ ಸ್ಥಳಕ್ಕೆ ಕೊಪ್ಪ ತಾಲೂಕಿನ ಗೌರಿಗದ್ದೆಯ ಅವಧೂತ ಎಂದೇ ಖ್ಯಾತರಾಗಿರುವ ವಿನಯ್ ಗುರೂಜಿ ಭೇಟಿ ನೀಡಿದ್ದರಂತೆ. ಹೌದು ಸಾಹಸ ನಿರ್ದೇಶಕರಾದ ರವಿವರ್ಮಾ ಅವರು ಸಂದರ್ಶನವೊಂದರಲ್ಲಿ ಮಾತನಾಡಿದ್ದು, ಯಾವುದೇ ರೀತಿಯ ಲೈಫ್ ಜಾಕೆಟ್ ಬಳಸದೇ ಅನಿಲ್ ಹಾಗೂ ಉದಯ್ ಸಾಹಸಕ್ಕೆ ಮುಂದಾಗಿದ್ದು, ಹೆಲಿಕಾಪ್ಟರ್‌ನಿಂದ ಕೆಳಗೆ ಹಾರುವ ಕೆಲವೇ ನಿಮಿಷಗಳ ಮುಂಚೆ ಸ್ಥಳಕ್ಕೆ ವಿನಯ್ ಗುರೂಜಿ ಭೇಟಿ ಕೊಟ್ಟಿದ್ದರಂತೆ.

ಅಲ್ಲದೇ ಯಾಕೋ ಸರಿ ಹೋಗುತ್ತಿಲ್ಲ ಒಂದು ಕುಂಬಳಕಾಯಿ ತಂದು ಒಡೆಯಿರಿ ಎಂದು ಕೂಡ ಚಿತ್ರತಂಡದವರಿಗೆ ತಿಳಿಸಿದ್ದರಂತೆ. ಕೊಡಲೇ ಕುಂಬಳಕಾಯಿ ತರಿಸಿ ಒಡೆಸಿದ್ದರೂ ಕೂಡ ಅವಘಡ ಸಂಭವಿಸಿದೆ. ಹೌದು ಹೆಲಿಕಾಪ್ಟರ್ ಲ್ಯಾಂಡ್ ಮಾಡಿ ಕೆಲವು ದೃಶ್ಯಗಳ ಚಿತ್ರೀಕರಣವನ್ನು ಮೊದಲು ಮಾಡಲಾಗಿತ್ತು. ಈ ವೇಳೆ ವಿನಯ್ ಗುರೂಜಿ ಅವರು ಅಲ್ಲಿರುವುದು ಸರಿಬರದೇ ಹೊರಡುತ್ತೇನೆಂದು ಹೊರಟಿದ್ದು ಅವರ ಕಾರಿನಲ್ಲಿದ್ದ ಸಾಯಿಬಾಬಾ ಮೂರ್ತಿಯನ್ನು ತೆಗೆದುಕೊಂಡು ಬಂದು ದುನಿಯಾ ವಿಜಯ್ ಕೈಗೆ ಕೊಟ್ಟು, ರವಿವರ್ಮಾಗೆ ಕೊಡಿ ಎಂದೂ ಹೇಳಿದ್ದರಂತೆ. ಅಂತೆಯೇ ದುನಿಯಾ ವಿಜಯ್ ತಕ್ಷಣವೇ ತಮಗೆ ತಂದು ಕೊಟ್ಟ ಮೂರ್ತಿಯನ್ನು ರವಿವರ್ಮ ಅವರಿಗೆ ನೀಡಿ ಇದನ್ನು ನೀವೇ ಇಟ್ಟುಕೊಳ್ಳಬೇಕಂತೆ ಎಂದು ಹೇಳಿದ್ದಾರೆ. ಈ ಘಟನೆಯಿಂದ ರವಿವರ್ಮಾ ಜೈಲಿಗೆ ಹೋಗಿ ಬಂದ ಮೇಲೆ ವಿನಯ್ ಗುರೂಜಿಯನ್ನು ಭೇಟಿ ಮಾಡಿದ್ದು, ಘಟನೆ ಬಗ್ಗೆ ವಿವರಿಸಿದ್ದಾರೆ. ‘ ಆ ದಿನ ಬಹಳ ದೊಡ್ಡ ದುರ್ಘಟನೆ ಆಗುವುದಿತ್ತು. ಕನಿಷ್ಠ 7 ಮಂದಿ ಸಾಯಬೇಕಿತ್ತು. ಆದರೆ ಎರಡಕ್ಕೇ ಮುಕ್ತಾಯವಾಗಿದೆ,’ ಎಂದು ಗುರೂಜಿ ಹೇಳಿದ್ದರು ಎಂದು ರವಿವರ್ಮಾ ತಿಳಿಸಿದ್ದಾರೆ.