ವಿಜಯ್ ನಿನಗೆ ಸಂಚಾರದಲ್ಲಿ ಆಪತ್ತು ಇದೆ ಎಂದು 2016ರಲ್ಲೇ ನಾನು ತಿಳಿಸಿದ್ದೆ : ಬ್ರಹ್ಮಾಂಡ

ಬ್ರಹ್ಮಾಂಡ ಗುರುಗಳ ಭವಿಷ್ಯದ ಬಗ್ಗೆ ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳು ಫುಲ್ ಗರಂ ಆಗಿದ್ದಾರೆ. "ಇಂತಹ ಆರೋಗ್ಯ ಎಮರ್ಜೆನ್ಸಿಯ ವೇಳೆ, ಸುಳ್ಳು ಸೃಷ್ಟಿಸುವವರ ದೊಡ್ಡ ಗುಂಪೇ ಹುಟ್ಟಿಕೊಂಡಿದೆ"ಎಂದು ಸಾಣೇಹಳ್ಳಿ ಶ್ರೀಗಳು ಬೇಸರ ವ್ಯಕ್ತ ಪಡಿಸಿದ್ದಾರೆ. ಬ್ರಹ್ಮಾಂಡ ಗುರುಗಳು ಆಲಿಯಾಸ್ ನರೇಂದ್ರ ಬಾಬು ಶರ್ಮಾ, ಚಿತ್ರದುರ್ಗ ಜಿಲ್ಲೆ, ಹೊಸದುರ್ಗದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ, ಭೂಕಂಪ ಮತ್ತು ಕೊರೊನಾ ಬಗ್ಗೆ ಭಯಾನಕ ಭವಿಷ್ಯವನ್ನು ನುಡಿದಿದ್ದರು. "ಇಂತವರ ಭವಿಷ್ಯವನ್ನು ಕೇಳಿ ಜನರು ದಡ್ಡರಾಗಬಾರದು"ಎಂದು ಸಾಣೇಹಳ್ಳಿ ಶ್ರೀಗಳು ಜಿಲ್ಲೆಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಹೇಳಿದ್ದಾರೆ. ನರೇಂದ್ರ ಶರ್ಮಾ ಬಗ್ಗೆ ಸಾಣೇಹಳ್ಳಿ ಶ್ರೀಗಳು ಹೇಳಿದ್ದು.

ಬ್ರಹ್ಮಾಂಡ ಗುರುಗಳು ಆಲಿಯಾಸ್ ನರೇಂದ್ರ ಬಾಬು ಶರ್ಮಾ ಬ್ರಹ್ಮಾಂಡ ಭವಿಷ್ಯದ ಬಗ್ಗೆ ಬೇಸರ ವ್ಯಕ್ತ ಪಡಿಸಿರುವ ಸಾಣೇಹಳ್ಳಿ ಪಂಡಿತಾರಾಧ್ಯ ಶ್ರೀಗಳು, "ಕೊಡಗು ಜಿಲ್ಲೆಯ ಬಗ್ಗೆ ಭವಿಷ್ಯ ನುಡಿಯುವ ಬ್ರಹ್ಮಾಂಡ ಗುರೂಜಿ, ಕೂರೊನಾ ಬಗ್ಗೆ ಯಾಕೆ ಭವಿಷ್ಯವನ್ನು ನುಡಿಯಲಿಲ್ಲ. ಈ ಬಗ್ಗೆಯೂ ಜನರಿಗೆ ಮುನ್ಸೂಚನೆಯನ್ನು ನೀಡಬಹುದಿತ್ತಲ್ಲವೇ"ಎಂದು ಪ್ರಶ್ನಿಸಿದ್ದಾರೆ.
ಸಾಣೇಹಳ್ಳಿ ಶ್ರೀಗಳು "ಅದ್ಯಾವ ಮುಖ ಇಟ್ಟುಕೊಂಡು ಬ್ರಹ್ಮಾಂಡ ಗುರುಗಳು ಭವಿಷ್ಯ ನುಡಿದರೋ ಗೊತ್ತಿಲ್ಲ. ಢೋಂಗಿ ಬಾಬಾಗಳು, ಹಸ್ತಮುದ್ರಿಕೆ ಹೇಳುವವರು ಇಂತಹ ಸಮಯವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇಂತವರ ದೊಡ್ಡ ದಂಡೇ ಇದೆ. ಮೊದಲು ಇಂತವರು ಮೈಬಗ್ಗಿಸಿ ಕೆಲಸ ಮಾಡುವುದನ್ನು ಕಲಿಯಬೇಕು"ಎಂದು ಸಾಣೇಹಳ್ಳಿ ಶ್ರೀಗಳು ಹೇಳಿದ್ದಾರೆ.
ಇದು ಕೊರೊನಾ ಅಲ್ಲ, ಕೌಮಾರಿ ಕೊರೊನಾ ಬಗ್ಗೆ ಬ್ರಹ್ಮಾಂಡ ಗುರುಗಳು ಹೇಳಿದ್ದರು. "ಇದು ಕೊರೊನಾ ಅಲ್ಲ, ಕೌಮಾರಿ. ಈ ಕೌಮಾರಿಯ ಶಾಂತಿಗಾಗಿ ಎಲ್ಲಾ ದೇವಾಲಯಗಳಲ್ಲೂ ವಿಶೇಷ ಪೂಜೆ ನಡೆಯಬೇಕಿದೆ" ಎಂದು ಹೇಳಿದ್ದ ಬ್ರಹ್ಮಾಂಡ ಗುರುಗಳು, ಇದರಿಂದ ಮುಕ್ತಿಯ ಬಗ್ಗೆ ಏನನ್ನೂ ಹೇಳಿರಲಿಲ್ಲ.
ಇದೀಗ ವಿಜಯದ ದುರ್ಘಟನೆ ಬಳಿಕ ಬ್ರಹ್ಮಾಂಡ ಗುರೂಜಿ ಈ ರೀತಿಯ ಹೇಳಿಕೆ ಕೊಟ್ಟು ಜನರ ನಿಂದನೆಗೆ ಗುರಿಯಾಗಿದ್ದಾರೆ ಇದು ಎಷ್ಟು ಸರಿ ಹೇಳಿ.