ದರ್ಶನ್, ಸುದೀಪ್ ರನ್ನು ಒಂದಾಗಿಸಲು ಮುಂದಾದ ರವಿಚಂದ್ರನ್. ಆಗಿದ್ದೇನು ಗೊತ್ತಾ?


ಸ್ಯಾಂಡಲ್ ವುಡ್ ನಲ್ಲಿ ಸ್ನೇಹಕ್ಕೆ ಹೆಸರಾಗಿದ್ದ ನಟರು ಡಾ.ವಿಷ್ಣುವರ್ಧನ್ ಮತ್ತು ಡಾ.ಅಂಬರೀಶ್ ಅವರು. ಇವರಿಬ್ಬರ ಸ್ನೇಹವನ್ನು ನೆನಪಿಸುವಂಥ ಮತ್ತೊಂದು ಜೋಡಿ ಇತ್ತು. ಅವರೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್. ಇವರಿಬ್ಬರು ಸ್ಯಾಂಡಲ್ ವುಡ್ ನ ಓಡುವ ಕುದುರೆಗಳು ಎಂದರೆ ತಪ್ಪಾಗುವುದಿಲ್ಲ. ಒಂದು ಕಾಲದಲ್ಲಿ ಕುಚಿಕು ಕುಚಿಕು ಹಾಡಿಗೆ ಸ್ನೇಹದಿಂದ ಹೆಜ್ಜೆ ಹಾಕಿದ್ದ ದಚ್ಚು ಕಿಚ್ಚ ಈಗ ಬೇರೆ ಬೇರೆ ಆಗಿದ್ದಾರೆ. ಒಂದು ಕಡೆ ವಿಷ್ಣುವರ್ಧನ್ ಅವರ ಅಭಿಮಾನಿಗಳು ಸುದೀಪ್ ಅವರಲ್ಲಿ ವಿಷ್ಣು ಅವರನ್ನು ಕಂಡರೆ ಮತ್ತೊಂದು ಕಡೆ ಅಂಬರೀಶ್ ಅವರ ಅಭಿಮಾನಿಗಳು ದರ್ಶನ್ ಅವರಲ್ಲಿ ಅಂಬರೀಶ್ ರನ್ನು ಕಾಣಲು ಶುರು ಮಾಡಿದ್ದರು.

ಇವರಿಬ್ಬರ ನಡುವೆ ಇದ್ದ ಸ್ನೇಹ ಅವರಿಬ್ಬರನ್ನು ನೆನಪಿಸುವ ಹಾಗೆ ಮಾಡುತ್ತಿತ್ತು. ದರ್ಶನ್ ಅವರ ಸಿನಿಮಾಗೆ ಸುದೀಪ್ ಸಪೋರ್ಟ್ ಮಾಡಿ ವಾಯ್ಸ್ ಓವರ್ ನೀಡಿದರೆ, ಸುದೀಪ್ ಸಿನಿಮಾಗೆ ಸಂಪೂರ್ಣ ಬೆಂಬಲ ನೀಡುತ್ತಿದ್ದರು ದರ್ಶನ್. ಹಲವಾರು ಕಾರ್ಯಕ್ರಮಗಳಲ್ಲಿ ಇಬ್ಬರು ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದರು. ಸಿಸಿಎಲ್ ನಲ್ಲಿ ಕೂಡ ಇಬ್ಬರು ಕ್ರಿಕೆಟ್ ಆಡಿದ್ದರು. ಅತ್ಯಂತ ಆತ್ಮೀಯವಾಗಿದ್ದ ಈ ಗೆಳೆತನಕ್ಕೆ ಯಾರ ಕೆಟ್ಟ ದೃಷ್ಟಿ ಬಿದ್ದಿತೋ ಗೊತ್ತಿಲ್ಲ, ಇವರಿಬ್ಬರ ಸ್ನೇಹದಲ್ಲಿ ಬಿರುಕು ಮೂಡಿತು. ಇವರ ನಡುವೆ ಎದ್ದಿರುವ ಗೋಡೆಯನ್ನು ಉರುಳಿಸಿ ಸ್ನೇಹ ಮತ್ತೆ ಮರುಕಳಿಸುವಂತೆ ಮಾಡಲು ಸ್ಯಾಂಡಲ್ ವುಡ್ ನ ಹಿರಿಯರು ಕೂಡ ಪ್ರಯತ್ನ ಪಟ್ಟರು ಆದರೆ, ಅದು ಸಾಧ್ಯವಾಗಲಿಲ್ಲ.

ಆದರೆ ದರ್ಶನ್ ಮತ್ತು ಸುದೀಪ್ ಅಭಿಮಾನಿ ಬಳಗ ಇಂದಿಗು ಸಹ ಇವರಿಬ್ಬರು ಒಂದಾಗಲಿ ಎಂದು ಆ-ಸೆಪಡುತ್ತಾರೆ. ಇದಕ್ಕೆ ಪೂರಕವಾಗಿ ಈಗ ಸೋಷಿಯಲ್ ಮೀಡಿಯಾದಲ್ಲಿ ಒಂದು ಘ-ಟನೆ ನಡೆದಿದೆ. ಸುದೀಪ್ ಮತ್ತು ದರ್ಶನ್ ಒಂದಾಗಬೇಕು ಎಂದು ನಿರ್ಮಾಪಕ ಸೂರಪ್ಪ ಬಾಬು ಟ್ವೀಟ್ ಮಾಡಿದ್ದಾರೆ. ದರ್ಶನ್ ಮತ್ತು ಸುದೀಪ್ ಜೊತೆಯಾಗಿ ಇರುವ ಫೋಟೋ ಒಂದನ್ನು ಟ್ವೀಟ್ ಮಾಡಿ, ಇವರಿಬ್ಬರು ಒಂದಾಗಬೇಕು ಎಂದು ಹೊಸ ಹ್ಯಾಶ್ ಟ್ಯಾಗ್ ಶುರು ಮಾಡಿದ್ದಾರೆ. ಜೊತೆಗೆ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಟ್ವಿಟರ್ ಅಕೌಂಟ್ ಇಂದ ಕೂಡ ಇದೇ ರೀತಿ ಟ್ವೀಟ್ ಮಾಡಲಾಗಿದೆ.

ಈ ಹ್ಯಾಶ್ ಟ್ಯಾಗ್ ಬಳಸಿ ಈಗಾಗಲೇ 10 ಸಾವಿರಕ್ಕೂ ಹೆಚ್ಚು ಟ್ವೀಟ್ಗಳನ್ನು ಮಾಡಲಾಗಿದೆ. ದರ್ಶನ್ ಮತ್ತು ಸುದೀಪ್ ಇಬ್ಬರ ಅಭಿಮಾನಿಗಳು ಕೂಡ ಇದರಿಂದ ಏನಾದರೂ ಹೊಸ ಬದಲಾವಣೆ ಆಗಬಹುದು. ಇವರಿಬ್ಬರ ನಡುವಿನ ಮನಸ್ತಾ-ಪ ಕ’ರಗಿ ಮತ್ತೆ ಒoದಾಗಬಹುದು ಎಂಬ ಭರವಸೆಯಲ್ಲಿದ್ದಾರೆ. ಆದರೆ ಈ ಅಭಿಯಾನ ಶುರು ಮಾಡಿದ ಸೂರಪ್ಪ ಬಾಬು ಅವರ ಟ್ವಿಟರ್ ಅಕೌಂಟ್ ಮತ್ತು ರವಿಚಂದ್ರನ್ ಅವರ ಹೆಸರಿನಲ್ಲಿರುವ ಟ್ವಿಟರ್ ಅಕೌಂಟ್ ಎರಡು ಸಹ ಫೇ-ಕ್ ಅಕೌo-ಟ್ ಎಂದು ತಿಳಿದುಬಂದಿದೆ. ದರ್ಶನ್ ಮತ್ತು ಸುದೀಪ್ ಗಾಗಿ ಯಾರೋ ಅಭಿಮಾನಿಗಳೇ ಈ ರೀತಿ ಮಾಡಿರಬಹುದು ಎನ್ನಲಾಗುತ್ತಿದೆ. ಏನೇ ಆದರೂ ದಚ್ಚು ಕಿಚ್ಚ ಒಂದಾಗಬೇಕು ಎಂದು ಶುರು ಅಗೋರುವ ಈ ಹ್ಯಾಶ್ ಟ್ಯಾಗ್ 10 ಸಾವಿರಕ್ಕೂ ಹೆಚ್ಚು ಟ್ವೀಟ್ ಗಳು ಆಗಿರುವುದು ಸಂತೋಷದ ವಿಚಾರವೇ. ಈ ಸುದ್ದಿ ಇಷ್ಟ ವಾಗಿದ್ದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯ ಗಳನ್ನೂ ತಪ್ಪದೆ ಕಾಮೆಂಟ್ ಮೂಲಕ ನಮಗೆ ತಿಳಿಸಿರಿ.