ಬುಲೆಟ್ ಪ್ರಕಾಶ್ ಅವರ ಮಗ ಚಿತ್ರರಂಗಕ್ಕೆ ಎಂಟ್ರಿ, ಯಾವ ಚಿತ್ರ ಗೊತ್ತ !

 

ಸ್ಯಾಂಡಲ್ವುಡ್ ನಲ್ಲಿ ಹೀರೋ ಮಕ್ಕಳು ಹೀರೋ ಆದ್ರು, ವಿಲನ್ ಮಕ್ಕಳು ಹೀರೋ ಆದ್ರು. ಇದೀಗ ಕಾಮಿಡಿ ಸ್ಟಾರ್ ನಟರ ಮಕ್ಕಳ ಸರದಿ ಎಂದು ನಾನು ಕನ್ನಡ ಚಿತ್ರರಂಗದಲ್ಲಿ ದೊಡ್ಡ ನಟನಾಗಿ ಬೆಳೆಯಬೇಕು ಎಂಬ ಮಹಾದಾಸೆ, ತನ್ನ ಗುರಿಯನ್ನ ಬಿಚ್ಚಿಟ್ಟ ದಿವಂಗತ ಖ್ಯಾತ ಹಾಸ್ಯ ನಟ ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್ ಸೇನ್. ಹೌದು ಚಂದನವನದ ಬಹುಬೇಡಿಕೆಯ ಹಾಸ್ಯ ನಟರಲ್ಲಿ ಬುಲೆಟ್ ಪ್ರಕಾಶ್ ಕೂಡ ಒಬ್ಬರಾಗಿದ್ದರು. ಸಾಧುಕೋಕಿಲ ಮತ್ತು ಬುಲೆಟ್ ಪ್ರಕಾಶ್ ಜುಗಲ್ ಬಂಧಿಯ ಕಾಮಿಡಿಗಳು ಸ್ಯಾಂಡಲ್ ವುಡ್ ನಲ್ಲಿ ಸದಾ ಹಸಿರಾಗಿರುತ್ತವೆ. ಕಳೆದ ವರ್ಷ ಬುಲೆಟ್ ಪ್ರಕಾಶ್ ಅನಾರೋಗ್ಯದ ಸಮಸ್ಯೆಯಿಂದ ಬಳಲಿ ನಿಧನರಾದರು.

ಅವರ ನಿಧನಕ್ಕೆ ಕನ್ನಡ ಚಿತ್ರರಂಗ, ಅವರ ಅಭಿಮಾನಿ ಬಳಗ ಕಂಬನಿ ಮಿಡಿದಿತ್ತು. ಇದೀಗ ಇವರ ಹೆಸರು ಪ್ರಸ್ತಾಪ ಆಗುವುದಕ್ಕೂ ಕಾರಣ ಆದವರು ಅವರ ಪುತ್ರ ರಕ್ಷಕ್ ಸೇನ್. ಕನ್ನಡ ಚಿತ್ರ ರಂಗದಲ್ಲಿ ನನ್ನ ತಂದೆಯ ಹೆಸರಿನ ಉಳಿವಿಗಾಗಿ ನಾನು ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟಿದ್ದೇನೆ. ನನಗೆ ಸಿನಿಮಾದಲ್ಲಿ ಹಣ ಮಾಡುವ ಉದ್ದೇಶಕ್ಕಿಂತ ಹೆಚ್ಚಾಗಿ ಬುಲೆಟ್ ಪ್ರಕಾಶ್ ಅನ್ನೋ ಹೆಸರು ಚಿತ್ರರಂಗದಲ್ಲಿ ಉಳಿಸಿಕೊಂಡು ಹೋಗಬೇಕು ಎಂಬುದು ನನ್ನ ಆಸೆ. ಇನ್ನು ನನಗೆ ಸಿನಿರಂಗದಲ್ಲಿ ಬಹುತೇಕ ಎಲ್ಲಾ ನಟ ನಟಿಯರ ಪರಿಚಯವಿದೆ. ಅದರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್, ಸುದೀಪ್, ಶಿವಣ್ಣ ಸೇರಿ ಎಲ್ಲರನ್ನು ನಾನು ಚಿಕ್ಕಂದಿನಿಂದ ನೋಡಿ ಬೆಳೆದಿದ್ದೇನೆ.

ನನ್ನ ತಂದೆಯ ನಿಧನದ ನಂತರ ನನಗೆ ನನ್ನ ಕುಟುಂಬ, ಭವಿಷ್ಯದ ಬಗ್ಗೆ ಜವಾಬ್ದಾರಿ ಹೆಚ್ಚಿದೆ. ಚಿಕ್ಕಂದಿನಿಂದಲು ನಾನು ಒಬ್ಬ ನಟನಾಗಬೇಕು ಎಂದು ಡ್ಯಾನ್ಸ್, ಫೈಟ್, ರೇಸ್, ಹೀಗೆ ಒಂದಷ್ಟು ಪೂರ್ವ ತಯಾರಿ ಮಾಡಿಕಂಡಿದ್ದೇನೆ. ಈಗ ನಾನು ಮೊಟ್ಟ ಮೊದಲ ಬಾರಿಗೆ ಕ್ಯಾಮೆರಾ ಎದುರಿಸಲು ಸಿದ್ದನಾಗಿದ್ದೇನೆ. ಜಂಟಲ್ ಮ್ಯಾನ್ ಸಿನಿಮಾದ ನಿರ್ದೇಶಕ ಜಡೇಶಾ ಕೆ ಹಂಪಿ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಗುರು ಶಿಷ್ಯರು ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ರಕ್ಷಕ್ ಸೇನ್ ಕಾಣಿಸಿಕೊಂಡಿದ್ದಾರೆ.

ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ ರಕ್ಷಕ್ ಸೇನ್. ಇನ್ನು ಗುರು ಶಿಷ್ಯರು ಚಿತ್ರಕ್ಕೆ ತರುಣ್ ಸುಧೀರ್ ಕ್ರಿಯೇಟಿವ್ ಹೆಡ್ ಆಗಿದ್ದು, ಈ ಚಿತ್ರ ಕ್ರೀಡಾ ಕಥಾ ಹಂದರ ಹೊಂದಿರುವ ಸಿನಿಮಾ ಆಗಿದ್ದು, ಶರಣ್ ಮತ್ತು ನಿಶ್ವಿಕಾ ನಾಯ್ಡು ಅವರು ನಾಯಕ, ನಾಯಕಿಯಾಗಿ ನಟಿಸುತ್ತಿದ್ದಾರೆ. ಒಟ್ಟಾರೆಯಾಗಿ ಹೇಳಬೇಕೆಂದರೆ ಕನ್ನಡ ಚಿತ್ರರಂಗದಲ್ಲಿ ಬುಲೆಟ್ ಪ್ರಕಾಶ್ ಅವರು ಯಾವ ರೀತಿ ಗಟ್ಟಿಯಾಗಿ ನೆಲೆಯೂರಿ ನಿಂತಿದ್ದರೋ ಅದೇ ಹಾದಿಯಲ್ಲಿ ತಾವು ಸಾಗಬೇಕೆಂದು ಬಂದಿದ್ದಾರೆ ರಕ್ಷಕ್.