ತಂದೆ ಹಣಕಾಸಿನ ಸಮಸ್ಯೆಯಿಂದ ಮಾರಿದ್ದ ಮನೆ ಬಿಡಿಸಿಕೊಂಡ ಸ್ಟಾರ್ ನಟ

 

ಬೆಳ್ಳಿಪರದೆ ಮೇಲೆ ನಮ್ಮ ರಂಜಿಸುವ ಎಷ್ಟೋ ಜನ ನಟ ನಟಿಯರ ಹಿಂದಿನ ನಿಜ ಜೀವನ ಯಾವುದೇ ಜನಸಾಮಾನ್ಯರಿಗಿಂತ ಕಡಿಮೆ ಇರುವುದಿಲ್ಲ. ಸಾಕಷ್ಟು ಏಳುಬೀಳು ಕಷ್ಟಗಳನ್ನು ಅನುಭವಿಸಿ ಅವರು ಉತ್ತುಂಗಕ್ಕೆ ಇರುತ್ತಾರೆ. ಚಿತ್ರರಂಗದಲ್ಲಿ ನಾಯಕ ನಟನಾಗಿರಲಿ ಅಥವಾ ನಾಯಕನಟಿ ಯಾಗಿರಲಿ ಅಥವಾ ಪೋಷಕ ಕಲಾವಿದರೆ ಆಗಿರಲಿ ಏಳು ಬೀಳುಗಳು ಸಾಮಾನ್ಯ. ಒಂದು ಸಮಯದಲ್ಲಿ ಉತ್ತುಂಗದಲ್ಲಿ ತೇಲಾಡತ್ತಿದ್ದವರು ಧಿಡೀರನೆ ನೆಲ ಕಚ್ಚಿದ ಉದಾಹರಣೆಗಳನ್ನು ನಾವು ಸಾಕಷ್ಟು ನೋಡಿದ್ದೇವೆ ಮತ್ತು ಕೇಳಿದ್ದೇವೆ. ಅದೇ ರೀತಿ ಬಾಲಿವುಡ್ನ ಟಾಪ್ ನಟರಲ್ಲಿ ಒಬ್ಬರಾಗಿದ್ದ ಜಾಕಿ ಶ್ರಾಫ್ ಅವರು ಒಂದರ ಮೇಲೆ ಒಂದರಂತೆ ಸೋಲನ್ನು ಅನುಭವಿಸಿ ಹಠಾತ್ತನೆ ಪಾತಾಳಕ್ಕೆ ಕುಸಿದು ಆರ್ಥಿಕವಾಗಿ ಸಾಕಷ್ಟು ಕಷ್ಟಗಳನ್ನು ಅನುಭವಿಸಿ ಕೊನೆಗೆ ತಾವು ಆಡಿ ಬೆಳೆದು ವಾಸವಿದ್ದ ಮನೆಯನ್ನೇ ಮಾರಿದ್ದರು ಎಂದರೆ ನೀವು ನಂಬಲೇಬೇಕು.

ಹೌದು ಖ್ಯಾತ ನಟ ಜಾಕಿ ಶ್ರಾಫ್ 2003ರಲ್ಲಿ ತೆರೆಕಂಡ ಬಹುಕಲಾವಿದರು ನಟಿಸಿದ ಭೂಮ್ ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ಆದರೆ ಆ ಚಿತ್ರ ನೀರಸ ಪ್ರದರ್ಶನ ಕಂಡು ದೊಡ್ಡ ಪೆಟ್ಟು ನೀಡಿತ್ತು. ಆ ಸಮಯದಲ್ಲಿಯೇ ಜಾಕಿ ಶ್ರಾಫ್ ತಮ್ಮ ವಾಸದ ಮನೆಯನ್ನೇ ಮಾರಿ ಬಿಟ್ಟಿದ್ದರು. ಆದರೆ ತಮ್ಮ ತಂದೆ ಹಾಗೂ ತಾಯಿ ವಾಸವಿದ್ದ ನೆಚ್ಚಿನ ಮನೆಯನ್ನು ಇದೀಗ ಅವರ ಮಗ ಅಂದರೆ ಬಾಲಿವುಡ್ನ ಸದ್ಯದ ಟಾಪ್ ನಟರಲ್ಲಿ ಒಬ್ಬರಾಗಿರುವ ಟೈಗರ್ ಶ್ರಾಫ್ ಅವರ ತಮ್ಮ ಸ್ವಂತ ದುಡಿಮೆಯಿಂದ ಮರಳಿ ಕೊಡಿಸಿದ್ದಾರೆ. ಹೌದು ಟೈಗರ್ ಶ್ರಾಫ್ ಚಿತ್ರರಂಗಕ್ಕೆ ಬರುವ ಮೊದಲು ಸಕಲ ರೀತಿಯಲ್ಲಿ ಸಿದ್ಧತೆಗಳನ್ನು ಮಾಡಿಕೊಂಡು ತಮ್ಮ ಮೊದಲ ಚಿತ್ರದ ಮೂಲಕವೇ ತಾವು ಭರವಸೆಯ ನಟ ಎಂಬುದನ್ನು ಸಾಬೀತುಪಡಿಸಿದರು.

ಈಗಾಗಲೇ ದೊಡ್ಡ ದೊಡ್ಡ ಬಿಗ್ ಬಜೆಟ್ ಚಿತ್ರಗಳಲ್ಲಿ ನಟಿಸಿ ಬಹುಬೇಡಿಕೆಯ ನಟರಲ್ಲಿ ಒಬ್ಬರಾಗಿರುವ ಟೈಗರ್ ಅವರು ಕೋಟ್ಯಾಂತರ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ. ಹೀಗಾಗಿ ತಾವು ಕಷ್ಟದ ಸಮಯದಲ್ಲಿ ಕಳೆದುಕೊಂಡ ಮನೆಯನ್ನು ತಮ್ಮ ತಂದೆತಾಯಿಗಳಿಗೆ ಮರಳಿ ಉಡುಗರೆ ನೀಡಿದ್ದಾರೆ. ಈ ವಿಷಯವನ್ನು ಇತ್ತೀಚಿಗೆ ಸ್ವತಹ ಜಾಕಿಶ್ರಾಫ್ ಅವರೇ ತಿಳಿಸಿದ್ದು ಭಾವುಕರಾಗಿ ಮಾತನಾಡಿದರು. ಟೈಗರ್ ತಾಯಿ ಇದಕ್ಕೆ ನಿರಾಕರಿಸಿದ್ದರು ಆದರೆ ಟೈಗರ್ ಬಲವಂತಮಾಡಿ ನಮ್ಮ ಹಳೆಯ ಮನೆಯನ್ನು ಮರಳಿ ಕೊಡಿಸಿದ ನನ್ನ ಇಬ್ಬರು ಮಕ್ಕಳ ಬಗ್ಗೆ ನನಗೆ ಹೆಮ್ಮೆಯಿದೆ ಎಂದು ಹೇಳಿಕೊಂಡರು.