ಸದ್ಯ ಇದೀಗ ಯಶ್ ಅವರು ಮಾಡಿರುವ ಈ ಮಹಾನ್ ಕಾರ್ಯಕ್ಕೆ ಕನ್ನಡ ಚಿತ್ರರಂಗದ ಪ್ರತಿಯೊಬ್ಬರೂ ಕೂಡ ಶ್ಲಾಘನೆ ವ್ಯಕ್ತಪಡಿಸಿದ್ದು ಹಲವಾರು ಮಂದಿ ಕಮೆಂಟ್ ಮಾಡುವ ಮೂಲಕ ಮೆಚ್ಚುಗೆಯನ್ನೂ ಕೂಡ ಸೂಚಿಸಿದ್ದಾರೆ. ಇನ್ನೂ ಕಣ್ಣಿಗೆ ಕಾಣದಂತೆ ದಾನ ಧರ್ಮ ಮಾಡುವುದರಲ್ಲಿ ಎತ್ತಿದ ಕೈ ಆಗಿರುವ ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ ರವರು ಕೂಡ ಯಶ್ ಮಾಡಿರುವ ಈ ಮಹಾನ್ ಕಾರ್ಯದಿಂದ ಸಂತೋಷವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಯಶ್ ರವರ ಪೋಸ್ಟ್ ನೋಡುತ್ತಿದ್ದಂತೆ ದರ್ಶನ್ ಕರೆ ಮಾಡಿದ್ದಾರೆ. ನಿಮ್ಮ ಈ ಕೆಲಸದಿಂದ ತುಂಬಾ ಜನಕ್ಕೆ ಒಳ್ಳೆಯದಾಗುತ್ತದೆ. ನಿಮ್ಮ ಹೃದಯ ದೊಡ್ಡದು.
ದುಡ್ಡನ್ನು ಪಡೆಯುವ ಅಷ್ಟೂ ಕುಟುಂಬಗಳ ಹಾರೈಕೆ ನಿಮ್ಮ ಕುಟುಂಬದ ಮೇಲಿರುತ್ತದೆ ಎಂದು ಹೇಳುವ ಮೂಲಕ ಯಶ್ ಮಾಡಿರುವ ಕಾರ್ಯಕ್ಕೆ ಧನ್ಯವಾದವನ್ನು ತಿಳಿಸಿದ್ದಾರೆ. ಇನ್ನು ದರ್ಶನ್ ಗೆ ಪ್ರತ್ಯುತ್ತರಿಸಿರುವ ಯಶ್, ನಿಮ್ಮನ್ನು ನೋಡಿಯೇ ನಾನು ಸಹಾಯ ಮಾಡುವುದನ್ನು ಕಲಿತಿದ್ದು, ನಿಮ್ಮ ಸಹಾಯದ ಮುಂದೆ ಇದ್ಯಾವುದೂ ಲೆಕ್ಕಕ್ಕೆ ಇಲ್ಲ ಎಂದು ತಮ್ಮ ಮನದಾಳದ ಮಾತನ್ನು ತಿಳಿಸಿದ್ದಾರೆ. ಒಟ್ಟಾರೆ ಕನ್ನಡ ಚಿತ್ರರಂಗದ ಜೋಡೆತ್ತುಗಳಾದ ಇವರಿಬ್ಬರು ಮಾಡುತ್ತಿರುವ ಸಹಾಯ ಕೇಳಿ ಇಡೀ ಚಿತ್ರರಂಗವೇ ಶ್ಲಾಘನೆಯನ್ನು ವ್ಯಕ್ತಪಡಿಸುತ್ತಿದ್ದು, ನಟರ ಸಾಮಾಜಿಕ ಕಾರ್ಯಕ್ಕೆ ನಿಮ್ಮ ಅನಿಸಿಕೆ ಏನು ಎಂಬುದನ್ನು ಕಮೆಂಟ್ ಮುಖಾಂತರ ತಿಳಿಸಿ.