ಚಿರಂಜೀವಿ ಸರ್ಜಾ ಮತ್ತು ಮೇಘನಾ ದಂಪತಿಯ ಮ’ಗು ಹು’ಟ್ಟಿದ ಸಮಯದಿಂದ ಜೂನಿಯರ್ ಚಿರು ಬಗ್ಗೆ ಎಲ್ಲರಲ್ಲೂ ಬಹಳ ಕುತೂಹಲ ಇತ್ತು. ಜೂನಿಯರ್ ಚಿರು ಹು-ಟ್ಟಿದ ದಿನ ಕೆಲವೊಂದು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈ-ರಲ್ ಆಗಿದ್ದವು, ಅದಾದ ನಂತರ ಕುಟುಂಬದ ಮೂಲಕ ಜೂನಿಯರ್ ಚಿರುವಿನ ಯಾವುದೇ ಫೋಟೋಗಳು ಅಧಿಕೃತವಾಗಿ ಹೊರಬಂದಿರಲಿಲ್ಲ. ಆದರೆ ಫೆಬ್ರವರಿ 14 ಪ್ರೇಮಿಗಳ ದಿನದಂದು ನಟಿ ಮೇಘನಾ ರಾಜ್ ಜ್ಯೂನಿಯರ್ ಚಿರು ಫೋಟೋ ಶೇರ್ ಮಾಡಿ ಎಲ್ಲರಿಗು ಜೂನಿಯರ್ ಚಿರುವಿನ ಪರಿಚಯ ಮಾಡಿಕೊಟ್ಟಿದ್ದರು. ಅಂದಿನಿಂದ ಜ್ಯೂನಿಯರ್ ಚಿರು ಫೋಟೊಗಳು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈ-ರಲ್ ಆಗುತ್ತಿದೆ.
ಪ್ರೇಮಿಗಳ ದಿನದಂದು ಮೇಘನಾ ಶೇರ್ ಮಾಡಿದ ವಿಡಿಯೋದಲ್ಲಿ ಅರ್ಜುನ್ ಸರ್ಜಾ ಅವರು
ವಿಶೇಷವಾದ ಹೆಸರಿನ ಮೂಲಕ ಜ್ಯೂನಿಯರ್ ಚಿರುವನ್ನು ಎಲ್ಲರಿಗು ಪರಿಚಯ ಮಾಡಿಕೊಟ್ಟಿದ್ದರು.
ನಂತರದ ದಿನಗಳಲ್ಲಿ ಜ್ಯೂನಿಯರ್ ಚಿರು ನಾಮಕಾರಣ ಯಾವಾಗ ಎನ್ನುವ ಪ್ರಶ್ನೆ ಎಲ್ಲರಲ್ಲು
ಮೂಡಿತ್ತು. ಇದೀಗ ಅರ್ಜುನ್ ಸರ್ಜಾ ಅವರು ಜ್ಯೂನಿಯರ್ ಚಿರುಗೆ ಹೆಸರು ಸೆಲೆಕ್ಟ್
ಮಾಡಿದ್ದಾರೆ ಎನ್ನಲಾಗಿದೆ. ಹಾಗಿದ್ದಲ್ಲಿ ಜ್ಯೂನಿಯರ್ ಚಿರು ಹೆಸರೇನು? ಅರ್ಜುನ್ ಸರ್ಜಾ
ಅವರು ಜೂನಿಯರ್ ಚಿರುವಿಗೆ ಏನೆಂದು ಹೆಸರಿಟ್ಟಿದ್ದಾರೆ ಗೊತ್ತಾ! ನಾಮಕರಣ ಯಾವಾಗ?
ತಿಳಿಯಲು ಮುಂದೆ ಓದಿ.
ಅರ್ಜುನ್ ಸರ್ಜಾ ಅವರು ಜ್ಯೂನಿಯರ್ ಚಿರುವನ್ನು ಸಿಂಬಾ ಎಂದು ಕರೆದು ಪರಿಚಯ ಮಾಡಿದ್ದರು.
ಅಂದಿನಿಂದ ಅಭಿಮಾನಿಗಳೆಲ್ಲರು ಜ್ಯೂನಿಯರ್ ಚಿರುವನ್ನು ಸಿಂಬಾ ಎಂದೇ ಕರೆಯಲು ಶುರು
ಮಾಡಿದ್ದರು. ಮ-ಗುವಿಗೆ ಇದೆ ಹೆಸರನ್ನು ಇಡುತ್ತಾರೋ ಇಲ್ಲವೋ ಎಂಬುದು ಇನ್ನು
ಖಚಿತವಾಗಿಲ್ಲ. ಆದರೆ ಸರ್ಜಾ ಕುಟುಂಬದಿಂದ ಈಗಾಗಲೇ ಸಿಕ್ಕಿದ್ದ ಮಾಹಿತಿ ಪ್ರಕಾರ ಈ
ತಿಂಗಳ ಕೊನೆಯಲ್ಲಿ ಅಥವಾ ಮುಂದಿನ ತಿಂಗಳ ಮೊದಲನೇ ವಾರದಲ್ಲಿ ಜ್ಯೂನಿಯರ್ ಚಿರು ಗೆ
ನಾಮಕಾರಣ ಶಾಸ್ತ್ರ ನಡೆಯಲಿದೆ ಎನ್ನಲಾಗುತ್ತಿದೆ.
ಜ್ಯೂನಿಯರ್ ಚಿರುಗಾಗಿ ಧ್ರುವ ಸರ್ಜಾ ಖರೀದಿಸಿರುವ ಬೆಳ್ಳಿ ತೊಟ್ಟಿಲಿನಲ್ಲಿ ಜ್ಯೂನಿಯರ್
ಚಿರುಗೆ ನಾಮಕಾರಣ ಶಾಸ್ತ್ರ ನಡೆಯಲಿದೆ ಎನ್ನಲಾಗಿದೆ. ಜ್ಯೂನಿಯರ್ ಚಿರುಗೆ ಯಾವ ಹೆಸರು
ಇಡಲಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ. ಇತ್ತೀಚೆಗೆ ಮೇಘನಾ ರಾಜ್ ಅವರು
ತಾತನ ಜೊತೆ ಜ್ಯೂನಿಯರ್ ಚಿರು ಇರುವ ವಿಡಿಯೋ ಒಂದನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್
ಮಾಡಿದ್ದರು. ಈ ವಿಡಿಯೋ ಸಹ ಬಹಳ ವೈ-ರಲ್ ಆಗಿತ್ತು. ಇನ್ನೊಂದು ಕಡೆ ಚಿಕ್ಕಪ್ಪ ಧ್ರುವ
ಸರ್ಜಾ ಮಗುವಿಗೆ “ಲೇ ಜೂನಿಯರ್” ಎಂದೇ ಕರೆಯುತ್ತಾರೆ ಹಾಗು ಮೇಘನಾ ರಾಜ್ ಅವರು ಚಿಂಟು
ಎಂದು ಕರೆಯುತ್ತಾರೆ.