ಖ್ಯಾತ ಫೇಮಸ್ ನಟಿ ಈಗ ರಸ್ತೆ ಪಕ್ಕದಲ್ಲಿ ದೋಸೆ ಇಡ್ಲಿ ಮಾರಾಟ ಮಾಡುತ್ತಿದ್ದಾರೆ ! ಈ ನಟಿ ಯಾರು ಗೊತ್ತಾ

 

ನಮಸ್ತೆ ಸ್ನೇಹಿತರೆ, ಚಿತ್ರರಂಗ ಎನ್ನುವುದು ವರ್ಣ ರಂಜಿತವಾದ ಜಗತ್ತು ಎನ್ನುವುದು ನಿಜ.. ಆದರೆ ಸಿನಿಮಾದಲ್ಲಿ ಅಭಿನಯಿಸುವ ನಟ ನಟಿಯರ ವೈಯಕ್ತಿಕ ಜೀವನ ಕೂಡ ಅಷ್ಟೇ ವರ್ಣ ರಂಜಿತ್ ವಾಗಿರುತ್ತದೆ ಎನ್ನುವುದು ಸುಳ್ಳು.. ಯಾಕೆಂದರೆ ಕೆಲವು ಸಿನಿಮಾ ನಟ ನಟಿಯರ ಜೀವನದಲ್ಲಿ ಸಾಮಾನ್ಯ ಜನರಂತೆ ಸಮಸ್ಯೆಗಳು ಇರುತ್ತದೆ, ಇನ್ನೂ ಇವರಿಗೆ ಆರ್ಥಿಕ ಸಮಸ್ಯೆ ತುಂಬಾನೇ ಇರುತ್ತದೆ.. ಇಂತಹ ಕಷ್ಟದ ಪರಿಸ್ಥಿತಿಯಲ್ಲಿ ಅದೆಷ್ಟೋ ನಟ ನಟಿಯರು ಮಾನಸಿಕ ಪರಿಸ್ಥಿತಿಯಲ್ಲಿ ಕುಗ್ಗಿ ಹೋಗಿರುತ್ತಾರೆ.. ಆದರೆ ಈ ನಟಿ ಮಾತ್ರ ತನ್ನ ಜೀವನದಲ್ಲಿ ತನಗೆ ಬಂದ ಆರ್ಥಿಕ ಸಂಕಷ್ಡದಿಂದ ಪಾರಾಗಿ ಬಂದ ಸಂಕಷ್ಟವನ್ನು ಸಮರ್ಥವಾಗಿ ಎದುರಿಸಿ ನಿಂತಿದ್ದಾರೆ..‌ ಇವರು ಯಾವುದೇ ಅಡ್ಡ ದಾರಿಯನ್ನು ಹಿಡಿಯದೆ ಛಲದಿಂದ ಸ್ವಾಭಿಮಾನದಿಂದ ತನ್ನ ಜೀವನವನ್ನ ನಡೆಸುತ್ತಿದ್ದಾರೆ.

ಅಷ್ಟಕ್ಕೂ ಈ ನಟಿ ಬೇರೆ ಯಾರು ಅಲ್ಲ ಮಳೆಯಾಳಂ ಸಿನಿಮಾದ ಖ್ಯಾತ ನಟಿ ಕವಿತಾ ಲಕ್ಷ್ಮೀ..‌ ಇವರು ಮಮ್ಮುಟ್ಟಿ ಮೋಹನ್ ಲಾಲ್ ರವರಂತಹ ಮೇರು ನಟರ ಜೊತೆ ಸಿನಿಮಾದಲ್ಲಿ ಅದ್ಭುತವಾಗಿ ನಟಿಸಿದ್ದಾರೆ.. ಅಲ್ಲದೆ ಮಲೆಯಾಳಂ ಧಾರಾವಾಹಿ ಕೂಡ ಇವರು ಹೆಚ್ಚಾಗಿ ನಟಿಸಿದ್ದಾರೆ.. ಸುಮಾರು 15 ವರ್ಷಗಳ ಹಿಂದೆಯೇ ತನ್ನ ಪತಿಗೆ ವಿವಾಹ ವಿಚ್ಛೇದನ ನೀಡಿದ ಕವಿತಾ ಲಕ್ಷ್ಮೀ ತಮ್ಮ ಇಬ್ಬರು ಮಕ್ಕಳನ್ನು ನಾವೇ ಸಾಕುವ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು.. ತನ್ನ ಮಕ್ಕಳನ್ನು ಚನ್ನಾಗಿ ಓದಿಸಿ ವಿದ್ಯಾವಂತ ಹಾಗು ಬುದ್ದಿವಂತರಾಗಿ ಮಾಡಬೇಕು ಸಮಾಜದಲ್ಲಿ ತನ್ನ ಮಕ್ಕಳನ್ನು ಕಂಡು ಜನರು ಹೊಗಳಬೇಕು ಎಂದು ಹಲವಾರು ಕನಸುಗಳನ್ನು ಕಂಡಿದ್ದರು.. ಸಿನಿಮಾ ಮತ್ತು ಧಾರಾವಾಹಿಯಲ್ಲಿ ನಟಿಸುತ್ತಿದ್ದ ಕವಿತಾ ಲಕ್ಷ್ಮೀ ನಟನೆಯಲ್ಲಿ ತುಂಬಾ ಬೇಡಿಕೆಯ ನಟಿಯಾಗಿದ್ದರು..

ಆದರೆ ಸಮಯ ಕಾಲ ಬದಲಾವಣೆ ಆದಂತೆ ಈ ನಟಿಯ ಜೀವನದಲ್ಲಿ ಸಿನಿಮಾದಲ್ಲಿ ನಟಿಸಲು ಅವಕಾಶಗಳು ಕಡಿಮೆ ಆಗುತ್ತಾ ಬಂದವು, ಇನ್ನೂ ತನ್ನ ಒಬ್ಬ ಮಗನನ್ನು ವಿದೇಶದಲ್ಲಿ ವಿದ್ಯಾಭ್ಯಾಸವನ್ನು ಕೊಡಿಸುತ್ತಿದ್ದರು, ಈ ವೇಳೆ ಈ ನಟಿಗೆ ಆರ್ಥಿಕ ವಿಷಯದಲ್ಲಿ ತುಂಬಾನೇ ತೊಂದರೆ ಆಯಿತು.. ‌ತನ್ನ ಮಕ್ಕಳ ವಿದ್ಯಾಭ್ಯಾಸಕ್ಕೆ ತುಂಬಾ ಹಣ ಖರ್ಚಾಗುತ್ತಿತ್ತು.. ಇನ್ನೂ ಜೀವನ ನಿರ್ವಹಣೆ ಹಾಗು ಮಕ್ಕಳ ವಿದ್ಯಾಭ್ಯಾಸವನ್ನು ಹೇಗಾದರೂ ಮಾಡಿ ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದು ಯೋಚನೆ ಮಾಡಿದ ಕವಿತಾ ಲಕ್ಷ್ಮೀ, ತಿರುವನಂತಪುರಂನ ರಸ್ತೆ ಪಕ್ಷದಲ್ಲಿ ಒಂದು ಕ್ಯಾಂಟೀನ್ ಶುರುಮಾಡಿದರು.. ರುಚಿ ರುಚಿಯಾದ ದೋಸೆ, ಇಡ್ಲಿ, ವಡೆ, ಇನ್ನೂ‌ ಮುಂತಾದ ತಿಂಡಿಗಳನ್ನು ರಾತ್ರಿ ವೇಳೆ ಮಾರಾಟ ಮಾಡಿ ಒಳ್ಳೆಯ ಬಿಸಿನೆಸ್ ಮಾಡಿದ್ದರು ನಂತರ ಇದರಿಂದ ಬಂದ ಹಣದಿಂದ ತಮಗಿದ್ದ ಅರ್ಥಿಕ ಪರಿಸ್ಥಿತಿಯ ಸಂಕಷ್ಟವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿಕೊಂಡರು.