ಕನ್ನಡದ ಖ್ಯಾತ ನಟಿ ಜಯಾ ಅವರು ಇನ್ನಿಲ್ಲ.. ಆದರೆ ಕೊರೊನಾದಿಂದಲ್ಲ.. ನಿಜಕ್ಕೂ ಏನಾಗಿತ್ತು ಗೊತ್ತಾ?

 

ಕಳೆದ ವರ್ಷ 2020 ಕನ್ನಡ ಚಿತ್ರರಂಗಕ್ಕೆ ಮಾತ್ರವಲ್ಲದೇ ಸಂಪೂರ್ಣ ಭಾರತ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿತ್ತು.. ಸಾಲು ಸಾಲು ಕಲಾವಿದರು ಇನ್ನಿಲ್ಲವಾದರು.. ಚಿರು ಸರ್ಜಾ.. ಬುಲೆಟ್ ಪ್ರಕಾಶ್.. ಮೈಕಲ್ ಮಧು.. ಸೇರಿದಂತೆ ಇನ್ನೂ ಅನೇಕ ಹಿರಿಯ ಕಲಾವಿದರು.. ಸಂಗೀತ ದಿಗ್ಗಜರಾದ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ಸೇರಿದಂತೆ ಅನೇಕ ಖ್ಯಾತ ನಾಮರು ಇಹಲೋಕ ತ್ಯಜಿಸಿದರು.. ಮತ್ತೆಂದೂ ಇಂತಹ ವರ್ಷ ಬಾರದಿರಲಿ ಎನ್ನುವಂತಾಗಿತ್ತು.. ಆದರೆ ಈ ವರ್ಷವೂ ಸಹ ಅದೇ ರೀತಿಯ ನೋವುಗಳು ಮರುಕಳಿಸುತ್ತಿದೆ.. ಹೌದು ಈ ವರ್ಷವೂ ಸಹ ಚಿತ್ರರಂಗದ ಸಾಲು ಸಾಲು ಕಲಾವಿದರು ಇನ್ನಿಲ್ಲವಾಗುತ್ತಿದ್ದಾರೆ.. ಕಳೆದ ತಿಂಗಳಷ್ಟೇ ಸ್ಯಾಂಡಲ್ವುಡ್ ನ ಹಿರಿಯ ನಟಿ ಮಾಲಾಶ್ರೀ ಅವರ ಪತಿ ಖ್ಯಾತ ನಿರ್ಮಾಪಕರಾದ ಕೋಟಿ ರಾಮು ಅವರು ಕೊರೊನಾದಿಂದಾಗಿ ಜೀವ ಕಳೆದುಕೊಂಡರು.

ಬೆಟ್ಟದ ಹೂ ಖ್ಯಾತಿಯ ಶಂಖನಾದ ಅರವಿಂದ್ ಅವರು ಹಿರಿಯ ನಟ ಕೃಷ್ಣೇ ಗೌಡ ಅವರು ಸೇರಿದಂತೆ ಇನ್ನೂ ಕೆಲ ಕಲಾವಿದರು ಕೊರೊನಾದಿಂದಾಗಿ ಜೀವ ಕಳೆದುಕೊಳ್ಳುವಂತಾಯಿತು.ಮ್ ಇದೀಗ ಸ್ಯಾಂಡಲ್ವುಡ್ ನ ಮತ್ತೊಂದು ಹಿರಿಯ ಕೊಂಡಿ ಕಳಚಿಕೊಂಡಿದೆ.. ಹೌದು ಕನ್ನಡದ ಖ್ಯಾತ ಹಿರಿಯ ನಟಿ ಬಿ ಜಯಾ ಅವರು ಇಹಲೋಕ ತ್ಯಜಿಸಿದ್ದಾರೆ.. ಆದರೆ ಇದಕ್ಕೆ ಕೊರೊನಾ ಕಾರಣ ಎಂದು ಸುದ್ದಿಯಾಗಿತ್ತು.. ಆದರೆ ಅಸಲಿ ವಿಚಾರ ಬೇರೆಯೇ ಇದೆ.. ಹೌದು ಸ್ಯಾಂಡಲ್ವುಡ್ ನ ಖ್ಯಾತ ನಟಿ ಬಿ ಜಯಾ ಅವರು ಕನ್ನಡ ಚಿತ್ರರಂಗದ ಮೊದಲ ತಲೆಮಾರಿನವರಾಗಿದ್ದು ಮೂರು ತಲೆಮಾರಿನ ಕಲಾವಿದರ ಜೊತೆಗೂ ಅಭಿನಯಿಸಿದರು‌.. ದಶಕಗಳ ಕಾಲ ಚಿತ್ರರಂಗದಲ್ಲಿ ದುಡಿದ ಜಯಾ ಅವರಿಗೆ ಕಲೆಯೇ ಬದುಕಾಗಿತ್ತು.

ಅವರ ಜೀವನದ ಬಂಡಿ ಸಾಗಿದ್ದೂ ಸಹ ಈ ಕಲಾ ವೃತ್ತಿ ಇಂದಲೇ.. ಮುನ್ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಂಡ ಜಯಾ ಅವರು ಅನೇಕ ಧಾರಾವಾಹಿಗಳಲ್ಲಿಯೂ ಬಣ್ಣ ಹಚ್ಚಿದ್ದರು.. ಸದಾ ಲವಲವಿಕೆಯಿಂದ ಚಿಕ್ಕವರು ದೊಡ್ಡವರೆನ್ನದೆ ಎಲ್ಲರ ಜೊತೆಯೂ ಸಂತೋಷವಾಗಿ ನಡೆದುಕೊಳ್ಳುತ್ತಿದ್ದ ಆ ಹಿರಿಯ ಜೀವ ಇಂದು ಕೊನೆಯುಸಿರೆಳೆದಿದೆ.. ಹೌದು ಜೂನ್ ಮೂರರಂದು ಗುರುವಾರ ಮಧ್ಯಾಹ್ನ ಮೂರು ಮೂವತ್ತರ ಸಮಯದಲ್ಲಿ ಇಹಲೋಕ ತ್ಯಜಿಸಿದ್ದಾರೆ.. ಆದರೆ ಬಿ ಜಯಾ ಅವರ ಅಗಲಿಕೆಗೆ ಕೊರೊನಾ ಕಾರಣ ಎಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿತ್ತು.. ಆದರೆ ಜಯಾ ಅವರು ಇನ್ನಿಲ್ಲವಾಗಿದ್ದು ಕೊರೊನಾದಿಂದಲ್ಲ.. ಹೌದು ಜಯಾ ಅವರು ಬಹಳಷ್ಟು ದಿನಗಳಿಂದ ವಯೋಶಜ ಕಾಯಿಲೆಗಳಿಂದ ಬಳಲುತ್ತಿದ್ದರು.. ಜಯಾ ಅವರನ್ನು ಕೆಲ ದಿನಗಳ ಹಿಂದೆ ಚಿಕಿತ್ಸೆಗಾಗಿ ಆಸ್ಪತ್ರೆಗೂ ಸಹ ದಾಖಲು ಮಾಡಲಾಗಿತ್ತು.

ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಜಯಾ ಅವರು ಕೊನೆಯುಸಿರೆಳೆದಿದ್ದಾರೆ.. ಬದುಕಿದ್ದಷ್ಟೂ ದಿನ ಕಲೆಗಾಗಿಯೇ.. ಕಲೆಯಿಂದಾಗಿಯೇ ಜೀವನ ಸಾಗಿಸಿದ ಹಿರಿಯ ಜೀವನ ಅಗಲಿಕೆಗೆ ಸಂಪೂರ್ಣ ಸ್ಯಾಂಡಲ್ವುಡ್ ಹಾಗೂ ಕಿರುತೆರೆ ಕಲಾವಿದರು ಕಂಬನಿ ಮಿಡಿದಿದ್ದು ಸಂತಾಪ ಸೂಚಿಸಿದ್ದಾರೆ.. ಜಯಾ ಅವರು ಇಂತವರ ಜೊತೆ ಅಭಿನಯಿಸಲಿಲ್ಲ ಎಂಬ ಮಾತೇ ಇಲ್ಲ.. ಸಿನಿಮಾ ರಂಗದ ಮೊದಲ ತಲೆಮಾರಿನ ಹಿರಿಯ ದಿಗ್ಗಜ ಕಲಾವಿದರಿಂದ ಹಿಡಿದು ಈಗಿನ ಧಾರಾವಾಹಿ ಕಲಾವಿದರ ಜೊತೆಗೂ ಸಹ ಬಣ್ಣ ಹಚ್ವಿರುವ ಜಯಾ ಅವರು ಸಾವಿರಾರು ನೆನಪುಗಳನ್ನು ಕಲಾವಿದರು ಮಾತ್ರವಲ್ಲದೇ ಜನರ ಮನಸ್ಸಿನಲ್ಲಿಯೂ ಅಚ್ವಿಳಿಸಿ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ.. ಮರೆಯಾದ ಕನ್ನಡದ ಕಲಾ ಚೇತನಕ್ಕೆ ಶಾಂತಿ ಸಿಗಲಿ.