ನಟಿ ಮಾಲಾಶ್ರೀ ಅವರ ತಂಗಿ ಯಾರು ಗೊತ್ತಾ, ಇವರು ಒಂದು ಕಾಲದ ಕನ್ನಡದ ಟಾಪ್ ನಟಿ ಆಗಿದ್ದರು

 

ಕನ್ನಡ ಚಿತ್ರರಂಗದ ಡ್ರೀ’ಮ್ ಗರ್ಲ್, ಮೋ’ಹಕ ನಟಿ ಮಾಲಾಶ್ರೀ. 90ರ ದಶಕದಲ್ಲಿ ಹೀರೋಗಳಿಗೆ ಇದ್ದಷ್ಟೇ ಪ್ರಾಮುಖ್ಯತೆ ಮಾಲಾಶ್ರೀ ಅವರಿಗೂ ಇತ್ತು. ಕನ್ನಡ ಚಿತ್ರರಂಗ ಮಾತ್ರವಲ್ಲದೆ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಯಶಸ್ವಿ ನಟಿಯಾಗಿದ್ದರು ಮಾಲಾಶ್ರೀ. ನಟಿ ಮಾಲಾಶ್ರೀ ಆಗಿನ ಕಾಲದ ಎಲ್ಲಾ ಹುಡುಗರ ಮೋಸ್ಟ್ ಫೇವರೆಟ್ ನಟಿ. 90ರ ದಶಕದಲ್ಲಿ ಕನ್ನಡ ಚಿತ್ರರಂಗದ ಟಾಪ್ ಮೋಸ್ಟ್ ನಟಿಯಾಗಿ ಮೆರೆದರು ಮಾಲಾಶ್ರೀ. ಹೀರೋಗಳಿಗೆ ಇರುತ್ತಿದ್ದಷ್ಟೇ ಬೇಡಿಕೆ ಮಾಲಾಶ್ರೀ ಅವರಿಗು ಇತ್ತು. ಕನ್ನಡ ಚಿತ್ರರಂಗದ ಎಲ್ಲಾ ಸ್ಟಾರ್ ನಟರ ಜೊತೆ ನಟಿಸಿದ ಹೆಗ್ಗಳಿಕೆ ಇವರದ್ದು. ಒಂದು ಕಾಲದಲ್ಲಿ ಇವರ ಕಾಲ್ ಶೀಟ್ ಸಿಗುವುದೇ ಕಷ್ಟವಾಗಿತ್ತು.

ಹೋಮ್ಲಿ ಹುಡುಗಿ, ಮುಗ್ಧ ಹುಡುಗಿ, ಹಳ್ಳಿ ಹುಡುಗಿ, ಸಿಟಿಯ ಬೋ-ಲ್ಡ್ ಹುಡುಗಿ, ಖಡಕ್ ಪೊಲೀಸ್ ಪಾತ್ರಗಳು ಎಲ್ಲಾ ಪಾತ್ರಗಳಿಗೂ ಹೊಂದಿಕೊಳ್ಳುವಂತಹ ಕಲಾವಿದೆ ಮಾಲಾಶ್ರೀ ಅವರು. ಕನ್ನಡ ಮಾತ್ರವಲ್ಲದೆ ತೆಲುಗು ತಮಿಳು ಚಿತ್ರರಂಗದಲ್ಲಿ ಕೂಡ ಇವರಿಗೆ ಬಹಳ ಬೇಡಿಕೆ ಇತ್ತು. ಕನ್ನಡ ಚಿತ್ರರಂಗದ ಕನಸಿನ ಕನ್ಯೆ ಎಂದೇ ಖ್ಯಾತಿ ಪಡೆದಿದ್ದರು. ಇವರ ಅಭಿನಯವನ್ನು ಮೀರಿಸಲು ಸಾಧ್ಯ ಆಗುತ್ತಿರಲಿಲ್ಲ. ಮಾಲಾಶ್ರೀ ಅವರಿಗೆ ಒಬ್ಬರು ತಂಗಿ ಸಹ ಇದ್ದಾರೆ. ಮಾಲಾಶ್ರೀ ಅವರ ತಂಗಿ ಕೂಡ ದೊಡ್ಡ ನಟಿ! ಅದು ಯಾರು ಗೊತ್ತಾ, ತಿಳಿಯಲು ಮುಂದೆ ಓದಿರಿ ಮಾಲಾಶ್ರೀ ಅವರ ತಂಗಿ ಹೆಸರು ಶುಭಶ್ರೀ. ಇವರು ಸಹ ನಟಿಯಾಗಿ ಕೆಲವು ವರ್ಷಗಳ ಕಾಲ ಸ್ಯಾಂಡಲ್ ವುಡ್ ನಲ್ಲಿ ಕೆಲಸ ಮಾಡಿದ್ದಾರೆ. ಆದರೆ ಅಕ್ಕನ ಹಾಗೆ ಇವರು ಹೆಚ್ಚಿನ ಯಶಸ್ಸು ಕಾಣಲಿಲ್ಲ. ಶುಭ ಅವರು ಸಹ ಆಗಿನ ಕಾಲದ ಹಲವಾರು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸುಳಿ, ಮಾವನ ಮಗಳು ಸೇರಿದಂತೆ ಸುಮಾರು ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ಅಕ್ಕನ ಹಾಗೆ ಇವರಲ್ಲಿ ಸಹ ಪ್ರತಿಭೆ ಇತ್ತು. ಆದರೆ ಯಶಸ್ಸು ಇವರ ಪಾಲಿಗೆ ಒಲಿಯಲಿಲ್ಲ. ಹಲವಾರು ಸಿನಿಮಾಗಳಲ್ಲಿ ನಟಿಸಿದರು ಸಹ ಇವರಿಗೆ ಜನಪ್ರಿಯತೆ ಸಿಕ್ಕಿದ್ದು ಒಂದು ಹಾಡಿನ ಮೂಲಕ. ನಟ ದೇವರಾಜ್ ಅಭಿನಯದ ಸರ್ಕಲ್ ಇನ್ಸ್ಪೆಕ್ಟರ್ ಸಿನಿಮಾದ ಒಂದು ಹಾಡಿನಲ್ಲಿ ಶುಭ ಕಾಣಿಸಿಕೊಂಡಿದ್ದರು.

ಊರ್ಮಿಳಾ ಎನ್ನುವ ಹಾಡು ಇಂದಿಗು ಸಹ ಬಹಳ ಫೇಮಸ್. ಈ ಹಾಡಿನಲ್ಲಿ ಶುಭಶ್ರೀ ಅವರ ನೃತ್ಯವನ್ನು ಯಾರು ಮರೆಯಲು ಸಾಧ್ಯವಿಲ್ಲ. ಟ್ಯಾಲೆಂಟ್ ಮತ್ತು ಲುಕ್ಸ್ ಎರಡು ಇದ್ದರು ಸಹ ಇವರಿಗೆ ಅಕ್ಕನಿಗೆ ಸಿಕ್ಕಷ್ಟು ಅದೃಷ್ಟ ಯಶಸ್ಸು ಸಿಗಲಿಲ್ಲ. ಅದೃಷ್ಟ ಎನ್ನುವುದು ಎಲ್ಲರಿಗೂ ಸಿಗುವುದಿಲ್ಲ ಎನ್ನುವುದಕ್ಕೆ ಶುಭ ಅವರು ಸಾಕ್ಷಿ. ಇತ್ತೀಚಿಗೆ ಮಾಲಾಶ್ರೀ ಅವರ ಪತಿ ಅಗಲಿದ ಸಮಯದಲ್ಲಿ ಕೂಡ ಶುಭಶ್ರೀ ಅವರು ಬೆಂಗಳೂರಿಗೆ ಬಂದು, ಮಾಲಾಶ್ರೀ ಅವರಿಗೆ ಅವರ ಕುಟುಂಬಕ್ಕೆ ಸo’ತಾಪ ಸೂಚಿಸಿದ್ದರು.