Watch Video Here: https://youtu.be/vYtzc0Q6v2g
ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಸಿನಿಮಾಗಳಲ್ಲಿ ಸೂಪರ್ ಸ್ಟಾರ್ ಆಗಬೇಕು ಎಂದರೆ ಕಠಿಣ ಪರಿಶ್ರಮ ವಹಿಸಬೇಕು ವರ್ಷಾನುವರ್ಷ ಚಿತ್ರರಂಗದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿ ಸ್ಟಾರ್ ಆಗಬೇಕು. ಆದರೆ ಇಲ್ಲೊಬ್ಬ ಪುಟ್ಟ ಕಂದ ಹುಟ್ಟುತ್ತಲೇ ಚಿತ್ರರಂಗದಲ್ಲಿ ದೊಡ್ಡ ಸ್ಟಾರ್ ಆಗಿಬಿಟ್ಟಿದ್ದು, ಇನ್ನೂ ಕೂಡ ತೊದಲು ಮಾತನಾಡುತ್ತಿರುವ ಈ ಪುಟ್ಟ ಕಂದಮ್ಮನಿಗೆ ಸಾಮಾಜಿಕ ಜಾಲತಾಣದಲ್ಲಿ ಸಾವಿರಾರು ಫ್ಯಾನ್ ಪೇಜ್ ಗಳು ಹುಟ್ಟಿಕೊಂಡಿವೆ. ಹೌದು ಆ ಪುಟ್ಟ ಕಂದಮ್ಮ ಬೇರೆ ಯಾರೂ ಅಲ್ಲ, ಸರ್ಜಾ ಕುಟುಂಬದ ಪ್ರೀತಿಯ ಕುಡಿ ಮೇಘಾ ಹಾಗೂ ಚಿರಂಜೀವಿ ಸರ್ಜಾ ಅವರ ಪ್ರೀತಿಯ ಫಲವಾಗಿ ಜನಿಸಿರುವ ತಾತ ಸುಂದರ್ ರಾಜ್ ಹಾಗೂ ಪ್ರಮೀಳಾ ಜೋಷಾಯಿ ಅವರ ಪ್ರೀತಿಯ ಚಿಂಟು ಜ್ಯೂನಿಯರ್ ಚಿರು.
ಹೌದು ಕನ್ನಡ ಚಿತ್ರರಂಗದಲ್ಲಿ ಉದಯೋನ್ಮುಖ ನಟನಾಗಿ ತನ್ನದೇ ಆದ ಛಾಪು ಮೂಡಿಸಿದ್ದ ಚಿರಂಜೀವಿ ಸರ್ಜಾ, ಚಂದನವನದ ಮುದ್ದು ಗೊಂಬೆ ಮೇಘನಾ ರಾಜ್ ಅವರನ್ನು ವಿವಾಹವಾಗುತ್ತಾರೆ. ಇಬ್ಬರು ಕೂಡ ಕಲೆಯ ಹಿನ್ನೆಲೆಯಿಂದ ಬಂದಿರುವ ಕಾರಣ ಚಿತ್ರರಂಗದಲ್ಲಿ ನಾಯಕ ನಾಯಕಿಯಾಗಿ ಮಿಂಚಿದ್ದು, ಯುವ ಪೀಳಿಗೆಗಳ ಅಚ್ಚುಮೆಚ್ಚಿನ ನಟ ನಟಿಯರಾಗಿದ್ದರು.
ಇತ್ತ ಮೇಘನಾ ರಾಜ್ ರವರು ಕನ್ನಡ ಚಿತ್ರರಂಗ ಮಾತ್ರವಲ್ಲದೆ ಮಲಯಾಳಂ ಚಿತ್ರರಂಗದಲ್ಲೂ ಕೂಡ ದೊಡ್ಡ ಯಶಸ್ಸನ್ನು ಕಂಡಿದ್ದು, ಅಲ್ಲಿನ ಟಾಪ್ ನಟಿಯಾಗಿ ಮಿಂಚಿದ್ದರು. ಇನ್ನೂ ಚಿತ್ರರಂಗದಲ್ಲಿ ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ರವರು ಯಾವ ರೀತಿ ಸ್ನೇಹ ಹಾಗೂ ಬಂಧವನ್ನು ಬೆಸೆದುಕೊಂಡಿದ್ದರೂ ಎಂಬುವುದಕ್ಕೆ ಇವರ ವಿವಾಹವು ಸಾಕ್ಷಿ.
ಹೌದು ಕ್ರಿಶ್ಚಿಯನ್ ಹಾಗೂ ಹಿಂದೂ ಎರಡು ಸಂಪ್ರದಾಯದ ಪ್ರಕಾರ ಎರಡು ಬಾರಿ ವಿವಾಹವಾದ ಈ ದಂಪತಿಗಳ ವಿವಾಹಕ್ಕೆ ಇಡೀ ಕನ್ನಡ ಚಿತ್ರರಂಗವೇ ಸಾಕ್ಷಿಯಾಗಿದ್ದವು. ಹಿರಿತೆರೆಯಿಂದ ಹಿಡಿದು ಕಿರಿತೆರೆಯವರಿಗೂ ಪ್ರತಿಯೊಬ್ಬರೂ ಕೂಡ ಆಗಮಿಸಿ ಚಿರು ಹಾಗೂ ಮೇಘನಾ ಗೆ ಶುಭಾಶಯ ತಿಳಿಸಿದ್ದಾರೆ. ವಿವಾಹವಾದ ಬಳಿಕ ದಾಂಪತ್ಯ ಜೀವನ ಹಾಗೂ ಸಿನಿಮಾ ಎರಡರಲ್ಲೂ ಕೂಡ ಯಶಸ್ಸು ಹಾಗೂ ನೆಮ್ಮದಿಯನ್ನು ಕಾಣುತ್ತಿದ್ದ ಈ ಜೋಡಿಗಳು ಚಂದನವನದ ಕ್ಯೂಟ್ ಕಪಲ್ ಎಂದೇ ಹೇಳಲಾಗುತ್ತಿತ್ತು.
ಇದೆಲ್ಲದರ ನಡುವೆ ಸಾಮಾಜಿಕ ಜಾಲತಾಣದಲ್ಲಿ ಒಂದು ವೀಡಿಯೋ ವೈರಲ್ ಆಗಿದ್ದು ಈ ವೀಡಿಯೊದಲ್ಲಿ ಜೂನಿಯರ್ ಚಿರುವಿನ ಹೊಸ ಫೋಟೋಗಳನ್ನು ನೋಡಬಹುದು. ನೀವು ಕೂಡ ಈ ವಿಡಿಯೋ ನೋಡಿ ಜೂನಿಯರ್ ಚಿರುವಿಗೆ ಮೇಘನ ರಾಜ್ ರವರು ಯಾವ ಹೆಸರು ಇಡಬಹುದ ಎಂಬುದನ್ನು ಕಮೆಂಟ್ಸ್ ಮುಖಾಂತರ ತಿಳಿಸಿ.