ಸಂಚಾರಿ ವಿಜಯ್’ ಹೆಸರಿನಿಂದ ಪರಿಚಿತರಾಗಿರುವ ಬಿ. ವಿಜಯ್ ಕುಮಾರ್ (17 ಜುಲೈ 1983 – 15 ಜೂನ್ 2021) ಒಬ್ಬ ಚಲನಚಿತ್ರ ಮತ್ತು ರಂಗಭೂಮಿ ನಟ. ಸಂಚಾರಿ ಹೆಸರಿನ ನಾಟಕತಂಡದಲ್ಲಿ ಇವರು ಒಬ್ಬರಾಗಿದ್ದರಿಂದ ಇವರಿಗೆ ಸಂಚಾರಿ ವಿಜಯ್ ಎಂಬ ಹೆಸರು ಬಂತು. 2014ರ ಸಾಲಿನ 62ನೇ ರಾಷ್ಟ್ರ ಚಲನಚಿತ್ರ ಪ್ರಶಸ್ತಿಯಲ್ಲಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಇವರು ಜುಲೈ 17, 1983ರಂದು ಚಿಕ್ಕಮಗಳೂರು ಜಿಲ್ಲೆಯ, ಕಡೂರು ತಾಲ್ಲೂಕಿನ, ಸಿಂಗಟಗೆರೆ ಹೋಬಳಿಯ, ಪಂಚನಹಳ್ಳಿ-ರಂಗಾಪುರ ಗ್ರಾಮದಲ್ಲಿ ಹುಟ್ಟಿದರು. ಇವರದ್ದು ಕಲೆಯ ಹಿನ್ನೆಲೆಯ ಕುಟುಂಬವಾಗಿದ್ದು ತಂದೆ ಬಸವರಾಜಯ್ಯನವರು ಚಿತ್ರಕಲಾವಿದರು, ಸಂಗೀತ ವಾದ್ಯಗಳನ್ನು ನುಡಿಸುತ್ತಿದ್ದರು.ತಾಯಿ ಗೌರಮ್ಮನವರು ಜಾನಪದ ಕಲಾವಿದರಾಗಿದ್ದು, ಭದ್ರಾವತಿಯ ಆಕಾಶವಾಣಿಯಲ್ಲಿ ಅನೇಕ ಕಾರ್ಯಕ್ರಗಳನ್ನು ನೀಡಿದ್ದರು. ಇಂತಹ ಕುಟುಂಬದಲ್ಲಿ ಜನಿಸಿದ ಇವರು ಬಾಲ್ಯದಿಂದಲೇ ರಂಗಭೂಮಿ ಹಾಗೂ ಚಿತ್ರಕಲೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಬೆಂಗಳೂರಿನ ಬಿಎಂಎಸ್ ಶಿಕ್ಷಣ ಸಂಸ್ಥೆಯಲ್ಲಿ ಇಂಜಿನಿಯರಿಂಗ್ ಪದವಿಯನ್ನು ಪೂರೈಸಿದ್ದಾರೆ. ಕೆಲಕಾಲ ಕೆಐಇಟಿ ಶಿಕ್ಷಣ ಸಂಸ್ಥೆಯಲ್ಲಿ ಅರೆಕಾಲಿಕ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಇವರು ತಮ್ಮ ಕನಸನ್ನು ಈಡೇರಿಸಿಕೊಳ್ಳಲು ಕೆಲಸಕ್ಕೆ ವಿದಾಯ ಹೇಳಿ ಪೂರ್ಣಪ್ರಮಾಣವಾಗಿ ರಂಗಭೂಮಿಯಲ್ಲಿ ತೊಡಗಿಸಿಕೊಂಡರು. ಹತ್ತು ವರ್ಷಗಳಿಂದ ಸಂಚಾರಿ ಥಿಯೇಟರ್ ರಂಗತಂಡದ ಹಲವಾರು ನಾಟಕಗಳಲ್ಲಿ ಅಭಿನಯಿಸುವುದರ ಜೊತೆಗೆ ಕನ್ನಡದ ಹಲವಾರು ರಂಗತಂಡಗಳಲ್ಲಿ ನಟಿಸಿದ್ದಾರೆ. ರಂಗಭೂಮಿಯಲ್ಲಿ ನಟನೆ ಮಾತ್ರವಲ್ಲದೇ ಎರಡು ನಾಟಕಗಳನ್ನು ಸಹ ನಿರ್ದೇಶಿಸಿದ್ದಾರೆ.
ಒಬ್ಬ ಭಾರತೀಯ ರಂಗಭೂಮಿ ಮತ್ತು ಸಿನೆಮಾ ಕಲಾವಿದರಾಗಿದ್ದು ಪ್ರಮುಖವಾಗಿ ಕನ್ನಡ
ಚಿತ್ರರಂಗದಲ್ಲಿ ಕೆಲಸ ಮಾಡಿದ್ದಾರೆ. ಜೊತೆಗೆ ತಮಿಳು, ತೆಲುಗು ಮತ್ತು ಹಿಂದಿ
ಸಿನೆಮದಲ್ಲಿಯೂ ಕೆಲಸ ಮಾಡಿದ್ದಾರೆ. 62ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ
ಇವರಿಗೆ ಕನ್ನಡದ ನಾನು ಅವನಲ್ಲ…ಅವಳು.. ಚಿತ್ರಕ್ಕೆ ಅತ್ಯುತ್ತಮ ನಟ ಪ್ರಶಸ್ತಿ
ನೀಡಲಾಗಿದ್ದು, ಈ ಚಿತ್ರದಲ್ಲಿ ತೃತೀಯ ಲಿಂಗಿಯ ಪಾತ್ರ ನಿರ್ವಹಿಸಿದ್ದಾರೆ. ಇದೇ
ಪಟ್ಟಿಯಲ್ಲಿ, ಮುಖ್ಯ ಪಾತ್ರ ನಿರ್ವಹಿಸಿದ್ದ ಮತ್ತೊಂದು ಸಿನೆಮಾ ‘ಹರಿವು’ ಅತ್ಯುತ್ತಮ
ಕನ್ನಡ ಪ್ರಾದೇಶಿಕ ಚಲನಚಿತ್ರ ಪ್ರಶಸ್ತಿ ಪಡೆಯಿತು.
ನಟ ಸಂಚಾರಿ ವಿಜಯ್ ಅವರು ಜೆ.ಪಿ. ನಗರದ 7ನೇ ಹಂತದಲ್ಲಿ ಶನಿವಾರ ರಾತ್ರಿ ಸಂಭವಿಸಿದ
ಅಪಘಾತದಲ್ಲಿ ತೀವ್ರ ಗಾಯಗೊಂಡು ಅವರನ್ನು ಅಪೋಲೊ ಆಸ್ಪತ್ರೆಗೆ ದಾಖಲಾಗಿದ್ದರು. ರಸ್ತೆ
ಅಪಘಾತದಲ್ಲಿ ವಿಜಯ್ ಅವರ ತಲೆ ಹಾಗೂ ತೊಡೆಗೆ ಭಾರೀ ಪೆಟ್ಟಾಗಿತ್ತು. ಸರ್ಜರಿ ಮಾಡಿದ್ದರೂ
ಕೂಡ ವಿಜಯ್ ಅವರು ಯಾವುದೇ ಚಿಕಿತ್ಸೆಗೆ ಸ್ಪಂದಿಸಿರಲಿಲ್ಲ. ಅಪಘಾತ ಆದತಕ್ಷಣ ವಿಜಯ್ ಅವರನ್ನು ಆಸ್ಪತ್ರೆಗೆ ಕರೆತರಲಾಗಿತ್ತು, ಆಪರೇಶನ್ ಕೂಡ
ಮಾಡಲಾಗಿತ್ತು. ಆದರೆ ಚಿಕಿತ್ಸಗೆ ಸ್ಪಂದಿಸಿರಲಿಲ್ಲ. ವಿಜಯ್ ಅವರು ಮೆದುಳು
ನಿಷ್ಕ್ರಿಯವಾಗಿತ್ತು. ವಿಜಯ್‌ಗೆ 38 ವರ್ಷ ವಯಸ್ಸಾಗಿತ್ತು. ಅಪೋಲೋ ಆಸ್ಪತ್ರೆ
ವೈದ್ಯರಿಂದ ಅಧಿಕೃತ ಘೋಷಣೆಯಾಗಿದೆ. ಆಸ್ಪತ್ರೆಗೆ ಕರೆತಂದಾಗಲೇ ವಿಜಯ್ ಸ್ಥಿತಿ ತುಂಬ ಹದಗೆಟ್ಟಿತ್ತು. ತಕ್ಷಣ ಅವರಿಗೆ
ಆಪರೇಶನ್ ಕೂಡ ಮಾಡಲಾಗಿತ್ತು. ಆಪರೇಶನ್ ಆದ 36 ಗಂಟೆ ಕೂಡ ಅವರು ಚಿಕಿತ್ಸೆಗೆ
ಸ್ಪಂದಿಸಿರಲಿಲ್ಲ. ಬಹು ಮುಖ್ಯವಾಗಿ ಅವರ ಮೆದುಳಿಗೆ ಭಾರೀ ಪೆಟ್ಟಾಗಿತ್ತು. ತೀವ್ರ ನಿಗಾ
ಘಟಕದಲ್ಲಿ ಇರಿಸಲಾಗಿತ್ತು, ಆದರೆ ಅವರಿಗೆ ಪ್ರಜ್ಞೆ ಬಂದಿರಲಿಲ್ಲ. ಸಂಚಾರಿ ವಿಜಯ್ ಅವರು ಗೆಳೆಯ ನವೀನ್ ಜೊತೆ ಜೂನ್ 12ರಂದು ರಾತ್ರಿ 11.45ರ ಸುಮಾರಿಗೆ
ಬೈಕ್‌ನಲ್ಲಿ ಹೋಗುವಾಗ ರಸ್ತೆ ಅಪಘಾತವಾಗಿತ್ತು. ವಿದ್ಯುತ್ ಕಂಬಕ್ಕೆ ಹೋಗಿ ಬೈಕ್
ಗುದ್ದಿತ್ತು ಎನ್ನಲಾಗಿದೆ. ತಕ್ಷಣವೇ ಅವರನ್ನು ಬನ್ನೇರುಘಟ್ಟದ ಅಪೋಲೋ ಆಸ್ಪತ್ರೆಗೆ
ದಾಖಲು ಮಾಡಲಾಗಿತ್ತು. ಆದರೆ ಆರೋಗ್ಯ ಸ್ಥಿತಿ ತುಂಬ ಗಂಭೀರವಾಗಿತ್ತು. ಸಿ.ಟಿ.
ಸ್ಕ್ಯಾನ್ ಮಾಡಿದ ನಂತರದಲ್ಲಿ ವಿಜಯ್ ಮೆದುಳಿಗೆ ತೀವ್ರ ಗಾಯವಾಗಿ ರಕ್ತಸ್ರಾವವಾಗಿರೋದು
ವೈದ್ಯರಿಗೆ ಗೊತ್ತಾಗಿತ್ತು. ಮೆದುಳಿನ ರಕ್ತಸ್ರಾವವನ್ನು ತಡೆಯಲು ತಕ್ಷಣವೇ
ಶಸ್ತ್ರಚಿಕಿತ್ಸೆ ಮಾಡಲಾಗಿತ್ತು.ನ್ಯೂರೋ ಐಸಿಯುನಲ್ಲಿ ಇಟ್ಟು ಚಿಕಿತ್ಸೆ ನೀಡಿದ್ದರೂ ಕೂಡ ವಿಜಯ್ ಅವರು ಚಿಕಿತ್ಸೆಗೆ
ಸ್ಪಂದಿಸಿರಲಿಲ್ಲ. ಅವರ ಆರೋಗ್ಯ ಸ್ಥಿತಿ ತುಂಬ ಗಂಭೀರವಾಗಿದೆ, ಏನೂ ಹೇಳಲಾಗಲ್ಲ ಎಂದು
ವೈದ್ಯರು ಮಾಹಿತಿ ನೀಡಿದ್ದರು. ಕುಟುಂಬಸ್ಥರು ವಿಜಯ್ ಅವರ ಅಂಗಾಂಗ ದಾನ ಮಾಡಲು ನಿರ್ಧಾರ
ಮಾಡಿದ್ದಾರೆ. ನಟನೆ ಜೊತೆಗೆ ಸಾಮಾಜಿಕ ಕೆಲಸ ಮಾಡೋದರಲ್ಲಿ ಸಂಚಾರಿ ವಿಜಯ್ ಅವರು
ಹೆಚ್ಚು ಗುರುತಿಸಿಕೊಂಡಿದ್ದರು.