ಚಂದನವನದ ಖ್ಯಾತಿಯ ಬುಲೆಟ್ ಪ್ರಕಾಶ್ ಅವರು ಇಲ್ಲವಾಗಿರಬಹುದು ಆದರೆ ಅವರು ನೀಡಿದ ಕೊಡುಗೆ ಮಾತ್ರ ಅಪಾರ. ಇವರು ತಮ್ಮ ಹಾಸ್ಯ ಪ್ರಜ್ಞೆಯಿಂದಲೇ ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸುತ್ತಿದ್ದರು. ಕನ್ನಡದ್ಲಲಿ ಸುಮಾರು ೩೫೦ಕ್ಕೂ ಹೆಚ್ಚು ಚಿತ್ರಗಳಲ್ಲಿ ಬಣ್ಣ ಹಚ್ಚುವ ಮೂಲಕ ಕನ್ನಡ ಚಿತ್ರರಸಿಕರ ಮನ ಗೆದ್ದಿದ್ದಾರೆ. ಬುಲೆಟ್ ಪ್ರಕಾಶ್ ಅವರು ಇತ್ತೀಚೆಗೆ ತೀವ್ರ ಹೃದಯಾಘಾತವಾಗಿ ನಿಧನ ಹೊಂದಿದರು. ಅವರು ತಮ್ಮ ಮಗನನ್ನು ತೆರೆ ಮೇಲೆ ಕಾಣಬೇಕು ಎಂದು ಬಹಳ ಆಸೆ ಪಟ್ಟಿದ್ದರು. ಹಾಗಾಗಿ ಬುಲೆಟ್ ಪ್ರಕಾಶ್ ಅವರ ಮಗ ರಕ್ಷಕ್ ಅವರು ತಮ್ಮ ತಂದೆಯ ಆಸೆಯಂತೆ ಬಣ್ಣದ ಲೋಕಕ್ಕೆ ಕಾಲಿಡಲು ಈಗಾಗಲೇ ತಯಾರಿ ನಡೆಸಿದ್ದಾರೆ.

ಈಗ ಇದೇ ಗುರುಶಿಷ್ಯರು ಟೈಟಲ್ ಹಿಡಿದು ಶರಣ್ ಮತ್ತು ತಂಡದವರು ಹೊಸ ರೀತಿಯಲ್ಲಿ ಕಥೆ
ಹೇಳಲು ಹೊರಟಿದ್ದಾರೆ. ಜಡೇಶ್ ಗುರುಶಿಷ್ಯರು ಚಿತ್ರಕ್ಕೆ ಆಕ್ಷನ್ ಕಟ್
ಹೇಳುತ್ತಿದ್ದಾರೆ. ತರುಣ್ ಸುದೀರ್ ಅವರು ಕ್ರಿಯೇಟಿವ್ ಹೆಡ್ ಆಗಿ ಕೆಲಸ
ಮಾಡುತ್ತಿದ್ದಾರೆ.
ಈ ಚಿತ್ರದಲ್ಲಿ ಶರಣ್ ಅವರ ಶಿಷ್ಯನ ಪಾತ್ರವನ್ನು ರಕ್ಷಕ್ ಅವರು
ನಿರ್ವಹಿಸುತ್ತಿದ್ದಾರೆ. ನೆನಪಿರಲಿ ಪ್ರೇಮ್ ಅವರ ಮಗ ಏಕಾಂತ್ ಕೂಡ ಗುರುಶಿಷ್ಯರು
ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಇದಲ್ಲದೇ ಸಾಕಷ್ಟು ಕಲಾವಿದರ ಮಕ್ಕಳು ಈ
ಚಿತ್ರದಲ್ಲಿ ಅಭಿನಯಿಸಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಆದರೆ ಯಾವ ಯಾವ ಸ್ಟಾ
ಮಕ್ಕಳು ಯಾವ ಯಾವ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಈ ತಿಂಗಳು ಕೊನೆ
ವೇಳೆಗೆ ತಿಳಿಯಲಿದೆ. ಮಗನನ್ನು ಹೀರೋ ಪಾತ್ರದಲ್ಲಿ ಕಾಣಬೇಕು ಎಂದು ಬಹಳ ಯೋಚನೆ ಮಾಡಿದ್ದರು. ಈಗಾಗಲೇ ಜಿಮ್,
ಬಾಡಿ ಬಿಲ್ಡಿಂಗ್ ಎಂದು ಸಾಕಷ್ಟು ತಯಾರಿಯನ್ನು ನಡೆಸಿದ್ದರು. ಆದರೆ ಮಗ ಬಣ್ಣ ಹಚ್ಚುವ
ಮೊದಲೇ ತಂದೆ ಇಹಲೋಕ ತ್ಯಜಿಸಿದ್ದರು. ತಂದೆಯ ಆಸೆಯಂತೆ ಹಾಗೂ ತಂದೆಯ ಸ್ನೇಹಿತರ ಸಲಹೆ
ಮೇರೆಗೆ ಮೊದಲ ಸಿನಿಮಾಗೆ ರಕ್ಷಕ್ ಬಣ್ಣ ಹಚ್ಚಲಿದ್ದಾರೆ.