ಇತ್ತೀಚಿನ ದಿನಗಳಲ್ಲಿ ಯೋಗ ಮಾಡುವುದು ದೈನಂದಿನ ಬದುಕಿನ ಪಾಠವಾಗಿದೆ ಹೌದು ಬದಲಾಗುತ್ತಿರುವ ಜೀವನ ಶೈಲಿಯಿಂದಾಗಿ ಹಳೆಯ ಪದ್ಧತಿಯನ್ನೇ ಅಳವಡಿಸಿಕೊಳ್ಳುವುದು ಆರಂಭವಾಗಿದೆ. ಯೋಗ ಎಂದರೆ ಕೇವಲ ಪದವಲ್ಲ. ನಮ್ಮ ದೈಹಿಕ ಆರೋಗ್ಯ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಲು ಮಾಡುವಂತಹದ್ದು.ದಿನ ಪೂರ್ತಿ ಖುಷಿಯಾಗಿ ಇಡಲು ಈ ಯೋಗ ಪೂರಕವಾಗಿದೆ. ಒತ್ತಡ ಬದುಕಿನಿಂದ ಬೆಸೆತ್ತ ಅನೇಕರು ಇದೀಗ ಯೋಗದ ಮೊರೆ ಹೋಗಿದ್ದಾರೆ. ಜೊತೆಗೆ ಕಾಯಿಲೆ ಎಂದು ಆಸ್ಪತ್ರೆಗೆಂದು ಹೋದರೆ ಮೊದಲು ಸಲಹೆ ನೀಡುವುದೇ ಯೋಗಭ್ಯಾಸ.
ಯೋಗ ಪರಿಣಿತರು ಸೂರ್ಯ ಉದಯಿಸುವ ಸಮಯದಲ್ಲಿ ಯೋಗ ಮಾಡಿದರೆ ಒಳ್ಳೆಯದು ಎಂದು ಹೇಳುವುದು ಸಹಜ. ಆದರೆ, ಕೆಲಸದ ಒತ್ತಡಕ್ಕೆ ಒಳಪಡುವ ಅನೇಕರಿಗೆ ಮುಂಜಾನೆ ಸಮಯ ಸಿಗುವುದಿಲ್ಲ. ಈ ವೇಳೆ ಸಂಜೆಯಲ್ಲೂ ಯೋಗ ಮಾಡುವುದು ಒಳಿತು.ಕಿ.ಪೂ 5ನೇ ಶತಮಾನದಲ್ಲಿ ಪತಂಜಲಿ ಋಷಿಯ ಚಿಂತನೆಯ ಫಲವಾದದ್ದೇ ಯೋಗ. ಯೋಗ ಎಂದರೆ ಅದು ಬರೀ ಶಾಸ್ತ್ರವಲ್ಲ. ಮನುಷ್ಯನ ಬದುಕಿನಲ್ಲಿ ಅಭ್ಯಾಸವಾಗಿ ಬೆಸೆದುಕೊಂಡಿದೆ. ಅಂದಹಾಗೆ, ಜೂನ್ 21ರಂದು ವಿಶ್ವ ಯೋಗ ದಿನಾಚರಣೆಯನ್ನು 177ಕ್ಕೂ ಅಧಿಕ ರಾಷ್ಟ್ರಗಳಲ್ಲಿ ಆಚರಿಸುತ್ತದೆ. ಇದು ಭಾರತದ ಹೆಮ್ಮೆ ಎಂದರೆ ತಪ್ಪಾಗಲಾರದು.
ಅದು ಅಲ್ಲದೇ ಯೋಗ ಎಂದರೆ ಮನಸ್ಸು, ಕಾಯಕ, ದೇಹದ ಮೇಲೆ ಸಂಪೂರ್ಣ ಸಾಧಿಸುವಂತಹದ್ದು. ಅಂದಹಾಗೆ, ವಿಶ್ವದಾದ್ಯಂತ ಜೂನ್ 21 2015 ರಂದು ಮೊದಲ ಬಾರಿಗೆ ‘ವಿಶ್ವ ಯೋಗದಿನ’ ವನ್ನು ಆಚರಿಸಲಾಯಿತು. ಸುಮಾರು, ಭಾರತ ಸೇರಿದಂತೆ ವಿಶ್ವದ 177 ರಾಷ್ಟ್ರಗಳಲ್ಲಿ ಯೋಗ ಅಭ್ಯಾಸವನ್ನು ಮಾಡುವ ಮೂಲಕ ಯೋಗ ದಿನವನ್ನು ಆಚರಿಸಲಾಯಿತು ಎಂಬುದು ಖುಷಿಯ ವಿಚಾರ. ಪುರಾಣದ ಕಾಲದಿಂದಲೂ, ಯೋಗ ಇತ್ತು ಎಂಬುದಕ್ಕೆ ಸಾಕ್ಷಿಗಳು ಇವೆ.
ಆದರೆ ಮನುಷ್ಯನು ತನ್ನ ಜೀವಿತಾವಧಿಯಲ್ಲಿ ಹಲವಾರು ಭಾವನೆಗಳು ಕ್ಷಣಕ್ಷಣದಲ್ಲಿ ಕಾಡುತ್ತಿರುವುದನ್ನು ಅನುಭವಿಸುತ್ತಿರುತ್ತಾನೆ. ಹೌದು ಒತ್ತಡದಿಂದ ಇರುವ ಮನುಷ್ಯನ ಮನಸ್ಥಿತಿಯೇ ಭಿನ್ನ. ಒಂದು ಕ್ಷಣ ಇದ್ದಂತಹ ಭಾವಗಳು ಮತ್ತೊಂದು ಕ್ಷಣ ಇರಲಾರದು. ಈ ಎಲ್ಲಾ ಭಾವನೆಗಳನ್ನು ಕ್ಷಣದಿಂದ ಕ್ಷಣಕ್ಕೆ ಬದಲಾಗುತ್ತಿರುತ್ತದೆ. ಈ ಮನಸ್ಸನ್ನು ನಿಯಂತ್ರಣದಲ್ಲಿ ಇಡಲು ಯೋಗ ಅಗತ್ಯವಾಗಿ ಬೇಕು. ಅದೇನೇ ಇರಲಿ ಯೋಗವನ್ನು ಅನೇಕ ಸಲೆಬ್ರೆಟಿಗಳು ಮಾಡುತ್ತಾರೆ. ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ಎಲ್ಲರಿಗು ಕಳ್ಸಿಸುತ್ತಾರೆ ಇದೀಗ ನಟಿ ಯಾಮಿನಿ ಶರ್ಮಾ ಅವರು ಮಾಡುತ್ತಿರುವ ಯೋಗ ಕೂಡ ವೈರಲ್ ಆಗಿದೆ ನೋಡಿ ವಿಡಿಯೋ.