ಮೇಘನಾಗೆ ಐ ಲವ್ ಯು ಎಂದ ಚಿರು ಕ್ಯೂಟ್ ವಿಡಿಯೋ ನೋಡಿ


ಮೇಘನಾ ರಾಜ್ ಚಿರು ಸರ್ಜಾ ಈ ಜೋಡಿಯ ಅಪರೂಪದ ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿರುತ್ತದೆ. ಮೇಘನಾ ರಾಜ್ ಚಿರು ದಂಪತಿಗಳು ಪ್ರೀತಿಸಿ ಮದುವೆಯಾದ ಜೋಡಿಗಳು. ಸುಮಾರು ಹತ್ತು ವರುಷದ ಸ್ನೇಹಕ್ಕೆ ಮದುವೆ ಎನ್ನುವ ಮುದ್ರೆ ಒತ್ತಿದ್ದರು.  ಕಷ್ಟ ಸುಖಕ್ಕೆ ಜೊತೆಯಾಗಿ ಜೀವನ ಪರ್ಯಂತ ಸುಖವಾಗಿ ಬದುಕಿ ಬಾಳಬೇಕಾಗಿದ್ದ ದಂಪತಿಗಳು, ಆದರೆ ಚಿರು ಸರ್ಜಾ ಕಳೆದ ವರ್ಷ ಹೃದಯಘಾತದಿಂದ ಸಾವನ್ನು ಅಪ್ಪಿದ್ದರು. ಈ ಘಟನೆಯೂ ಸರ್ಜಾ ಕುಟುಂಬಕ್ಕೆ ಮಾತ್ರವಲ್ಲ,ಚಿತ್ರರಂಗ ಸೇರಿದಂತೆ ಅಭಿಮಾನಿಗಳಿಗೂ ಬಿಗ್ ಶಾಕ್. ಹತ್ತು ವರ್ಷದ  ಪ್ರೀತಿ, ಎರಡು ವರ್ಷದ ಮದುವೆ ಜೀವನ.

ಚಿರಂಜೀವಿ ಸರ್ಜಾ ಅವರನ್ನು ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಸ್ನೇಹ ಪ್ರೀತಿಗೆ ತಿರುಗಿದ ಬಳಿಕ ಪ್ರೀತಿಯ ವಿಷಯ ಮನೆಯವರಿಗೆ ತಿಳಿಸಿ, ಹಿರಿಯ ಸಮ್ಮತಿ ಮೇರೆಗೆ ಮದುವೆಯಾಗಿದ್ದರು. ಕ್ರೈಸ್ತ ಹಾಗೂ ಹಿಂದೂ ಸಂಪ್ರದಾಯಂತೆ ಮದುವೆ ಅದ್ದೂರಿಯಾಗಿ ನೆರವೇರಿತ್ತು. ಚಿರು ಅಗಲಿಕೆಯ ನಂತರ ಮೇಘನಾ ರಾಜ್ ಗೆ ಚಿರು ಸರ್ಜಾ ಹಣೆಗೆ ಮುತ್ತನಿಕ್ಕುವ ವಿಡಿಯೋ ವೈರಲ್ ಆಗಿತ್ತು. ಅದು ಅಲ್ಲದೇ, ಮದುವೆಯ ಅದ್ಭುತ ಕ್ಷಣದ ವಿಡಿಯೋ, ಫೋಟೋಸ್ ಜೊತೆಗೆ ಕುಟುಂಬದೊಂದಿಗೆ ಸಮಯ ಕಳೆದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ತುಂಬಾನೇ ವೈರಲ್ ಆಗಿದೆ.

ಪತಿಯ ಮರಣದ ನೋವು ಒಂದೆಡೆಯಾದರೆ,ಅಕ್ಟೋಬರ್ 22, 2020 ರಲ್ಲಿ ಚಿರು ಕೊಟ್ಟ ಉಡುಗೊರೆಯಾದ ತನ್ನ ಗರ್ಭದಲ್ಲಿ ಬೆಳೆಯುತ್ತಿದ್ದ  ಗಂಡು ಮಗುವಿಗೆ  ಜನ್ಮ ನೀಡಿದಳು. ಇದೀಗ ಜೂನಿಯರ್ ಚಿರು ಮೇಘನಾ ಆರೈಕೆಯಲ್ಲಿ ಬೆಳೆಯುತ್ತಿದ್ದಾನೆ. ಅದು ಅಲ್ಲದೇ ಮೇಘನಾ ರಾಜ್ ಚಿರು ಸರ್ಜಾ ಅವರ ವಿಡಿಯೋ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುತ್ತದೆ. ಅಭಿಮಾನಿಗಳು ಚಿರು ಅಗಲುವಿಕೆಯನ್ನು ಪ್ರತಿ ಸಲವು ನೆನಪಿಸಿಕೊಳ್ಳುತ್ತಾರೆ.
ಚಿರುಗೆ ಪ್ರೀತಿಯ ನಿವೇದನೆ ಮಾಡಿಕೊಂಡ ಮೇಘನಾಳಿಗೆ ಚಿರು ಪ್ರೀತಿಯಿಂದ ಪ್ರತಿಕ್ರಿಯೆ ನೀಡಿದ್ದರು. ಅಲ್ಲೇ ನೆರೆದಿದ್ದ ಅಭಿಮಾನಿಗಳು ಕೇಕೆ ಹಾಕುವ ಮೂಲಕ ಸಂಭ್ರಮಿಸಿದ್ದರು.ಈ ವಿಡಿಯೋದ ತುಣುಕೊಂದು ಸೋಶಿಯಲ್ ಮೀಡಿಯಾ ತುಂಬಾನೇ ಸದ್ದು ಮಾಡಿದೆ. ಹಾಗಾದರೆ ಆ ಬೆಸ್ಟ್ ಮೂವ್ಮೆಂಟ್ ಅನ್ನು ನೋಡಲು ಈ ಕೆಳಗಿನ ವಿಡಿಯೋವನ್ನು ನೋಡಿ.