ಹಿಂದಿ ಹಾಡಿಗೆ ಸಕತ್ ಸ್ಟೆಪ್ ಹಾಕಿದ ರಶ್ಮಿಕಾ ಮಂದಣ್ಣ…ಹೇಗಿತ್ತು ನೋಡಿ ಡ್ಯಾನ್ಸ್

 


ಕನ್ನಡ ಚಿತ್ರರಂಗದಲ್ಲಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿ ಇದೀಗ ಸೌತ್ ಸಿನಿಮಾ ಇಂಡಸ್ಟ್ರಿಯನ್ನೇ ಶೇಕ್ ಮಾಡುತ್ತಿರುವ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಅವರ ಖ್ಯಾತಿ ಜನಪ್ರಿಯತೆ ಎಷ್ಟರ ಮಟ್ಟಿಗೆ ಇದೆ ಎಂಬುದು ತಮಗೆಲ್ಲರಿಗೂ ಈಗಾಗಲೇ ತಿಳಿದಿದೆ. ಇನ್ನು ಕನ್ನಡದಲ್ಲಿ ಅವರು ಇತ್ತೀಚೆಗೆ ಪೊಗರು ಎಂಬ ಸಿನಿಮಾದಲ್ಲಿ ಧ್ರುವ ಸರ್ಜಾ ಅವರ ಜೊತೆ ಕಾಣಿಸಿಕೊಂಡಿದ್ದು ಈ ಚಿತ್ರ ಸೂಪರ್ ಹಿಟ್ ಆದ ಬಳಿಕ ಇದೀಗ ತಮ್ಮ ಬೇಡಿಕೆಯನ್ನು ದಕ್ಷಿಣ ಭಾರತ ಚಿತ್ರರಂಗದಲ್ಲಿ ಏರಿಸಿಕೊಂಡಿದ್ದು ಬಾಲಿವುಡ್ ಚಿತ್ರರಂಗದಲ್ಲೂ ತಮ್ಮ ಅದೃಷ್ಟ ಪರೀಕ್ಷೆ ಮಾಡುತ್ತಿದ್ದಾರೆ.

ಹೌದು ಈಗಾಗಲೇ ರಶ್ಮಿಕಾ ಮಂದಣ್ಣ ಅವರು ಬಾಲಿವುಡ್ ಚಿತ್ರರಂಗದ ಖ್ಯಾತ ನಟ ಸಿದ್ಧಾರ್ಥ್ ಮಲ್ಹೋತ್ರಾ ಅವರ ಜೊತೆ ಮಿಷನ್ ಮಜ್ನೂ ಎಂಬ ಸಿನಿಮಾದಲ್ಲಿ ಭಾಗಿಯಾಗಿರುವ ಫೋಟೋಗಳು  ಸಾಮಾಜಿಕ ಜಾಲತಾಣದಲ್ಲಿ ವೈರಲ್  ಆಗಿವೆ. ಇನ್ನು ಇದಕ್ಕೂ ಮೊದಲು ಈ ಕಿರಿಕ್ ರಾಣಿ ‍ಅಭಿನಯದ ಟಾಪ್ ಟಕ್ಕರ್ ಎಂಬುವಂತಹ ಹಿಂದಿ ಆಲ್ಬಂ ಸಾಂಗ್ ದೊಡ್ಡಮಟ್ಟದಲ್ಲಿ ಹವಾ ಸೃಷ್ಟಿಸಿತ್ತು. ಇನ್ನೂ ವಿಶೇಷತೆ ಏನೆಂದರೆ ಈ ಆಲ್ಬಂ ಸಾಂಗ್ ಬಿಡುಗಡೆಯ ಮುನ್ನ  ಹಾಡಿನ ತಂಡ ಪ್ರೋಮೊ ಒಂದನ್ನು ಬಿಡುಗಡೆ ಮಾಡಿತ್ತು. ಹಾಡಿಗಿಂತ ಹೆಚ್ಚಾಗಿ ಈ ಪ್ರೋಮೋ ವಿಡಿಯೋ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದು ಟೀಸರ್ ನೋಡಿ ಬಾಲಿವುಡ್ ಮಂದಿ ಫಿದಾ ಆಗಿದ್ದರು.

ಅಲ್ಲದೆ ಈ ಕೊಡಗಿನ ಬೆಡಗಿಗೆ ಇದೇ ಮೊದಲ ಆಲ್ಬಂ ಸಾಂಗ್ ಆಗಿದ್ದು ಈ ಸಂತಸವನ್ನು ರಶ್ಮಿಕಾ ಮಂದಣ್ಣ ಅವರು ಟ್ವೀಟ್ ಮಾಡುವ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು. ಹೌದು ಟಾಪ್ ಟಾಪ್ ಟಾಪ್ ಟಕರ್ ಇದು ತುಂಬಾ ಎಕ್ಸೈಟಿಂಗ್ ಆಗಿದ್ದು  ಈ ರೀತಿ ಹಿಂದೆಂದು ನಾನು ಅಭಿನಯಿಸಿಲ್ಲ. ಆಯಾ ಇಂಡಸ್ಟ್ರಿಗಳಲ್ಲಿ ನಾನು ಉತ್ತಮಾವಾಗಿ ಅಭಿನಯಿಸಿದ್ದೇನೆ. ಆದರೆ ಈ ಬಾರಿ ನಾನು ಬಹಳ ಎಕ್ಸೈಟ್ ಆಗಿದ್ದೇನೆ. ಇನ್ನು ಈಗಾಗಲೇ  ರಶ್ಮಿಕಾ ಮಂದಣ್ಣ ಅವರ ಈ ಹಿಂದಿ ಹಾಡು ಬಿಡುಗಡೆ ಆಗಿ ಸುಮಾರು 3 ತಿಂಗಳು ಕಳೆದಿದ್ದು ಈಗಲೂ ಕೂಡ ಎಲ್ಲೆಡೆ ಭರ್ಜರಿ ವೈರಲ್ ಆಗುತ್ತಿದೆ.

ಈ ಹಾಡಿನಲ್ಲಿ ನಟಿ ರಶ್ಮಿಕಾ ಮಂದಣ್ಣ ಅವರು ಬಹಳ ಹಾಟ್ ಆಗಿ ಡಾನ್ಸ್ ಮಾಡಿದ್ದು   ದಕ್ಷಿಣ ಭಾರತ ಚಿತ್ರರಂಗ ಸೇರಿದಂತೆ ಬಾಲಿವುಡ್ ಮಂದಿಯೂ ಕೂಡ ಬಾಯಲ್ಲಿ ಬೆರಳು ಇಟ್ಟುಕೊಳ್ಳುವಂತೆ ಮಾಡಿದ್ದಾರೆ.

ಅವರೇ ಹೇಳಿದ ಹಾಗೆ ಬಹಳ ಎಕ್ಸೈಟ್ ಆಗಿದ್ದಾರೆ ರಶ್ಮಿಕಾ ಮಂದಣ್ಣ ಈ ಹಾಡು ನಿಮ್ಮೆಲ್ಲರಿಗು ತುಂಬಾ ಇಷ್ಟವಾಗುತ್ತದೆ. ಈ ಹಾಡನ್ನು ನಾನು ಶಾಲಾಕಾಲೇಜು ಸಮಾರಂಭಗಳಲ್ಲಿ  ಮದುವೆ ಸಮಾರಂಭಗಳಲ್ಲಿ ಕೇಳುತ್ತೇನೆ ಎಂದು ನನಗೆ ನಂಬಿಕೆ ಇದೆ ಎಂದಿದ್ದರು. ಅವರ ನಂಬಿಕೆ ನಿಜವಾಗಿದ್ದು ಅವರು ನಿರೀಕ್ಷೆ ಮಾಡಿದಕ್ಕಿಂತಲೂ ಹೆಚ್ಚಾಗಿ ಯಶಸ್ಸು ಕಂಡಿದೆ.
ಅದರಲ್ಲೂ  ಹಾಡಿನಲ್ಲಿ ನಟಿ ರಶ್ಮಿಕಾ ಮಂದಣ್ಣ ಅವರು ಮಾದಕವಾಗಿ ಡಾನ್ಸ್ ಮಾಡಿರುವುದು ವಿಶೇಷವಾಗಿ  ಟಾಪ್ ಟಕರ್ ಹಾಡಿನಲ್ಲಿ ಬಹಳ ವಿಭಿನ್ನವಾದ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಟ್ರೆಡಿಷನಲ್ ಆಭರಣಗಳನ್ನು ಧರಿಸಿ ಮಾಡರ್ನ್ ಬಟ್ಟೆ ಧರಿಸಿರುವ ರಶ್ಮಿಕಾರ ಈ ಹೊಸ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.ಟಾಪ್ ಟಕರ್ ಹಾಡು ಪೆಪಿ ನಂಬರ್ ಆಗಿದ್ದು ಭರ್ಜರಿಯಾಗಿ ಸ್ಟೆಪ್ಸ್ ಹಾಕಿದ್ದಾರೆ  ನಟಿ ರಶ್ಮಿಕಾ. ಈ ಹಾಡಿನಲ್ಲಿ ಬಾದ್ ಶಾ , ರಶ್ಮಿಕಾ ಯುವನ್ ಶಂಕರ್ ರಾಜ ಮತ್ತು ಅಮಿತ್ ಉಚನ ಕಾಣಿಸಿಕೊಂಡಿದ್ದು ಬಾದ್ ಶಾ ಮತ್ತು ಯುವನ್ ಶಂಕರ್ ರಾಜ ಇಬ್ಬರು ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.
ಹಾಗೂ ಬಾದ್ ಶಾ ಮತ್ತು ವಿಜ್ಞೇಶ್ ಶಿವನ್ ಸಾಹಿತ್ಯ ರಚಿಸಿದ್ದು ಬಹಳ ವಿಭಿನ್ನವಾಗಿ ಹಾಗು ಖ್ಯಾತಿ ಆಗಿರುವ ಸಾಹಿತ್ಯಕ್ಕೆ ನೋಡುಗರು ಫಿದಾ ಆಗಿದ್ದಾರೆ. ಸದ್ಯ ಇದೀಗ ಈ ಹಾಡು ಯೂಟ್ಯೂಬ್ ನಲ್ಲಿ ಬರೋಬ್ಬರಿ ಹತ್ತು ಕೋಟಿ ಗೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು ಈ ಮೂಲಕ ರಶ್ಮಿಕಾ ಅವರು ತಮ್ಮ ಮೊದಲ ಪ್ರಯತ್ನದಲ್ಲಿಯೇ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಕಂಡುಕೊಂಡಿದ್ದಾರೆ. ಈ ಬೆಳವಣಿಗೆಯನ್ನು ನೋಡುತ್ತಿದ್ದರೆ ರಶ್ಮಿಕಾ ಮಂದಣ್ಣ ಅವರು ತೆಲುಗು ಚಿತ್ರರಂಗದ  ಯಾವ ರೀತಿ ಹೈಪ್ ಕ್ರಿಯೇಟ್ ಮಾಡಿದ್ದರೋ ಅದಕ್ಕಿಂತ ಹೆಚ್ಚಾಗಿ ಬಾಲಿವುಡ್ ಚಿತ್ರರಂಗದಲ್ಲೂ ಕೂಡ ಮಾಡಲಿದ್ದಾರೆ ಎಂದು ಸಿನಿ ಪಂಡಿತರು ಲೆಕ್ಕಾಚಾರ ಹಾಕುತ್ತಿದ್ದಾರೆ.

ಈಗಾಗಲೇ ಸಿದ್ಧಾರ್ಥ್ ಮಲ್ಹೋತ್ರಾ ಅವರ  ಜೊತೆ ಅಲ್ಲದೇ

ಬಾಲಿವುಡ್ ನ ಬಿಗ್ ಬಿ ಅಮಿತಾಬ್ ಬಚ್ಚನ್ ರವರ ಜೊತೆ ಕೂಡ ತೆರೆ ಹಂಚಿಕೊಳ್ಳುತ್ತಿದ್ದು ಒಟ್ಟಾರೆಯಾಗಿ ಭಾರತ ಚಿತ್ರರಂಗದಲ್ಲೇ ರಶ್ಮಿಕಾ ದೊಡ್ಡ ಮಟ್ಟದಲ್ಲಿ ದಾಖಲೆ ಬರಿತುವುದಂತೂ ಸತ್ಯ. ನೋಡಿ ಆ ಹಾಡು ಇಲ್ಲಿದೆ ವಿಡಿಯೋ.