ಇಂದು ಶ್ರೀಕೃಷ್ಣ ಜನ್ಮಾಷ್ಟಮಿ, ಈ ಹಬ್ಬ ಎಲ್ಲರಿಗೂ ಬಹಳ ಸ್ಪೆಷಲ್. ಅದರಲ್ಲು ಮುದ್ದು ಮಕ್ಕಳಿರುವ ಮನೆಗಳಲ್ಲಿ ಕೃಷ್ಣ ಜನ್ಮಾಷ್ಟಮಿ ಹಬ್ಬದ ಸಡಗರವೇ ಬೇರೆ. ಮಕ್ಕಳಿಗೆ ಕೃಷ್ಣನ ಅಥವಾ ರಾಧೆಯ ಅಲಂಕಾರ ಮಾಡಿ, ಅವರುಗಳ ಕೈಯಲ್ಲಿ ಪುಟ್ಟ ಹೆಜ್ಜೆ ಹಾಕಿಸಿ ಅದನ್ನು ನೋಡಿ ಸಂಭ್ರಮ ಪಡುವರು ಹೆತ್ತವರಿಗೆ ಬಹಳ ಸಂತೋಷ ಕೊಡುತ್ತದೆ. ಇಂದು ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ನಟಿ ರಾಧಿಕಾ ಪಂಡಿತ್ ಕೆಲವು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.
ಈ ವರ್ಷ ಕೃಷ್ಣನ ಪೂಜೆ ಮಾಡಿರುವ ಫೋಟೋ ಶೇರ್ ಮಾಡಿ, ಜೊತೆಗೆ ಕಳೆದ ವರ್ಷ ಆಯ್ರಾ ಮತ್ತು ಯಥರ್ವ್ ರಾಧೆ ಕೃಷ್ಣನ ಹಾಗೆ ಅಲಂಕಾರ ಮಾಡಿರುವ ಫೋಟೋ ಮತ್ತು 2 ವರ್ಷದ ಹಿಂದೆ ಆಯ್ರಾಳಿಗೆ ಕೃಷ್ಣನ ಅಲಂಕಾರ ಮಾಡಿದ್ದ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ ರಾಧಿಕಾ. ಈ ಫೋಟೋಗೆ ಈಗಾಗಲೇ ಅಭಿಮಾನಿಗಳು ಕಮೆಂಟ್ಸ್ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ನಮ್ಮ ಸ್ಟಾರ್ ಗಳು ಏನೇ ಮಾಡಿದರೂ ಅದು ಸುದ್ದಿ ಆಗುವುದು ಖಂಡಿತ. ಬಹಳ ವರ್ಷಗಳು
ಪ್ರೀತಿ ಮಾಡಿ, ಎರಡು ಕುಟುಂಬದವರನ್ನು ಒಪ್ಪಿಸಿ, 2016 ರಲ್ಲಿ ವೈವಾಹಿಕ ಜೀವನಕ್ಕೆ
ಕಾಲಿಟ್ಟ ಯಶ್ ರಾಧಿಕಾ ದಂಪತಿಗೆ ಆಯ್ರಾ ಮತ್ತು ಯಥರ್ವ್ ಇಬ್ಬರು ಮಕ್ಕಳಿದ್ದಾರೆ. ಇವರ
ಇಬ್ಬರು ಮಕ್ಕಳು ಸಹ ಸೋಷಿಯಲ್ ಮೀಡಿಯಾ ಸ್ಟಾರ್ ಗಳು ಎನ್ನಬಹುದು. ತಂದೆ ತಾಯಿಯ ಹಾಗೆ
ಇಬ್ಬರು ಮಕ್ಕಳು ಯಶಸ್ಸು ಕೀರ್ತಿ ಗಳಿಸಲಿ ಸರಳತೆಯಿಂದ ಬೆಳೆಯಲಿ ಎನ್ನುವುದು ಎಲ್ಲರ
ಆಸೆ.