ಮುದ್ದು ಕೃಷ್ಣನಾದ ಜ್ಯೂನಿಯರ್ ಚಿರು !

 

ಇಂದು ಶ್ರೀಕೃಷ್ಣ ಜನ್ಮಾಷ್ಟಮಿ, ಈ ಹಬ್ಬ ಎಲ್ಲರಿಗೂ ಬಹಳ ಸ್ಪೆಷಲ್. ಅದರಲ್ಲು ಮುದ್ದು ಮಕ್ಕಳಿರುವ ಮನೆಗಳಲ್ಲಿ ಕೃಷ್ಣ ಜನ್ಮಾಷ್ಟಮಿ ಹಬ್ಬದ ಸಡಗರವೇ ಬೇರೆ. ಮಕ್ಕಳಿಗೆ ಕೃಷ್ಣನ ಅಥವಾ ರಾಧೆಯ ಅಲಂಕಾರ ಮಾಡಿ, ಅವರುಗಳ ಕೈಯಲ್ಲಿ ಪುಟ್ಟ ಹೆಜ್ಜೆ ಹಾಕಿಸಿ ಅದನ್ನು ನೋಡಿ ಸಂಭ್ರಮ ಪಡುವರು ಹೆತ್ತವರಿಗೆ ಬಹಳ ಸಂತೋಷ ಕೊಡುತ್ತದೆ. ಇಂದು ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ನಟಿ ಮೇಘನಾ ರಾಜ್ ಜ್ಯೂನಿಯರ್ ಚಿರುವನ್ನು ಕೃಷ್ಣನ ಹಾಗೆ ಅಲಂಕಾರ ಮಾಡಿ ಫೋಟೋ ಶೇರ್ ಮಾಡಿಕೊಂಡಿದ್ದಾರೆ.

ಅಭಿಮಾನಿಗಳು ಜ್ಯೂನಿಯರ್ ಚಿರುವನ್ನು ಕೃಷ್ಣನ ಅವತಾರದಲ್ಲಿ ನೋಡಿ ಬಹಳ ಸಂತೋಷಪಟ್ಟು ಕಮೆಂಟ್ಸ್ ಗಳ ಮೂಲಕ ಪ್ರಶಂಸೆ. ವ್ಯಕ್ತಪಡಿಸುತ್ತಿದ್ದಾರೆ. ಜ್ಯೂನಿಯರ್ ಚಿರುವಿನ ಈ ಫೋಟೋ ಸಧ್ಯಕ್ಕೆ ಸೋಷಿಯಲ್ ಮೀಡಿಯಾದ ಎಲ್ಲೆಡೆ ಬಹಳ ವೈರಲ್ ಆಗಿದೆ. ಮೇಘನಾ ರಾಜ್ ಅವರು ನೀಡಿದ ಈ ಮುದ್ದು ಸರ್ಪ್ರೈಸ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ನೀವು ಕೂಡ ಜ್ಯೂನಿಯರ್ ಚಿರುವಿನ ಈ ಮುದ್ದಾದ ಫೋಟೋ ನೋಡಿ..

ಪುಂಡ ಸಿನಿಮಾ ಮೂಲಕ ನಾಯಕಿಯಾದ ಮೇಘನಾ ರಾಜ್, ನಂತರ ಮಲಯಾಳಂ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಮಲಯಾಳಂ ಚಿತ್ರರಂಗದಲ್ಲಿ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿ ಅಲ್ಲಿನ ಟಾಪ್ ನಟಿಯಾಗಿ ಯಶಸ್ಸು ಗಳಿಸಿದರು ಮೇಘನಾ. ನಂತರ ರಾಜಾಹುಲಿ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ವಾಪಸ್ ಬಂದರು. ಆಟಗಾರ ಸೇರಿದಂತೆ ಹಲವಾರು ಕನ್ನಡ ಸಿನಿಮಾಗಳಲ್ಲಿ ಮೇಘನಾ ನಟಿಸಿದರು. ತಮಿಳು ಚಿತ್ರರಂಗದಲ್ಲಿ ಕೂಡ ಒಂದೆರಡು ಸಿನಿಮಾಗಳಲ್ಲಿ ನಟಿಸಿದ್ದಾರೆ ಮೇಘನಾ.
ಮಲಯಾಳಂ ಮತ್ತು ಕನ್ನಡ ಚಿತ್ರರಂಗದಲ್ಲಿ ಮೇಘನಾ ಅವರಿಗೆ ದೊಡ್ಡ ಫ್ಯಾನ್ ಬೇಸ್ ಇದೆ.

ಬಹಳ ವರ್ಷಗಳ ಕಾಲ ಚಿರುವನ್ನು ಪ್ರೀತಿಸಿ, ಎರಡು ಕುಟುಂಬದವರನ್ನು ಒಪ್ಪಿಸಿ ಮದುವೆಯಾದರು. ಅನ್ಯೋನ್ಯವಾದ ದಾಂಪತ್ಯ ಜೀವನ ನಡೆಸುತ್ತಿದ್ದರು ಮೇಘನಾ ಚಿರು, ಇವರಿಬ್ಬರನ್ನು ಜೊತೆಯಾಗಿ ನೋಡುವುದೇ ಒಂದು ರೀತಿಯ ಸಂತೋಷ ತರುತ್ತಿತ್ತು. ವಿಧಿಬರಹವೋ ದುರದೃಷ್ಟವೋ ಈ ಜೋಡಿಯ ಮೇಲೆ ಯಾರ ಕಣ್ಣು ಬಿತ್ತೋ ಮದುವೆ ಆದ ಎರಡೇ ವರ್ಷಕ್ಕೆ ಚಿರಂಜೀವಿ ಸರ್ಜಾ ಹೃ.ದ.ಯಾ.ಘಾ.ತ.ದಿಂದ ನಿ.ಧ.ನರಾದರು. ಚಿರು ನಿ.ಧ.ನ.ದ ನಂತರ ಮೇಘನಾ ಬಾಳಿಗೆ ಬೆಳಕಾಗಿ ಬಂದಿರುವುದು ಅವರಿಬ್ಬರ ಪ್ರೀತಿಯ ಸಂಕೇತ ಜ್ಯೂನಿಯರ್ ಚಿರು. ಈಗ ಮೇಘನಾ ಮೇಘನಾ ತಮ್ಮ ಇಡೀ ಜೀವನವನ್ನು ಜ್ಯೂನಿಯರ್ ಚಿರುಗಾಗಿ ಮೀಸಲಾಗಿ ಇಟ್ಟಿದ್ದಾರೆ.