ರಿಷಬ್ ಶೆಟ್ಟಿ ಅವರ ಮನೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ ಹೇಗಿತ್ತು ನೋಡಿ

 

ಇಂದು ಶ್ರೀಕೃಷ್ಣ ಜನ್ಮಾಷ್ಟಮಿ, ಈ ಹಬ್ಬ ಎಲ್ಲರಿಗೂ ಬಹಳ ಸ್ಪೆಷಲ್. ಅದರಲ್ಲು ಮುದ್ದು ಮಕ್ಕಳಿರುವ ಮನೆಗಳಲ್ಲಿ ಕೃಷ್ಣ ಜನ್ಮಾಷ್ಟಮಿ ಹಬ್ಬದ ಸಡಗರವೇ ಬೇರೆ. ಮಕ್ಕಳಿಗೆ ಕೃಷ್ಣನ ಅಥವಾ ರಾಧೆಯ ಅಲಂಕಾರ ಮಾಡಿ, ಅವರುಗಳ ಕೈಯಲ್ಲಿ ಪುಟ್ಟ ಹೆಜ್ಜೆ ಹಾಕಿಸಿ ಅದನ್ನು ನೋಡಿ ಸಂಭ್ರಮ ಪಡುವರು ಹೆತ್ತವರಿಗೆ ಬಹಳ ಸಂತೋಷ ಕೊಡುತ್ತದೆ. ಇಂದು ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ನಿರ್ದೇಶಕ ರಿಷಬ್ ಶೆಟ್ಟಿ ಅವರ ಮಗನಿಗೆ ಶ್ರೀಕೃಷ್ಣನ ವೇಶ ಹಾಕಿ ಬಹಳ ಮುದ್ದಾಗಿ ರೆಡಿ ಮಾಡಿದ್ದಾರೆ.

ನಟ ನಿರ್ದೇಶಕ ರಿಷಬ್ ಶೆಟ್ಟಿ ಮತ್ತು ಅವರ ಪತ್ನಿ ಪ್ರಗತಿ ಶೆಟ್ಟಿ ಇಬ್ಬರು ಕೂಡ ಮಗನ ಮುದ್ದಾದ ಫೋಟೋಗಳನನ್ನು ಆಗಾಗ ಶೇರ್ ಮಾಡಿಕೊಳ್ಳುತ್ತಾರೆ. ಇಂದು ಶ್ರೀಕೃಷ್ಣ ಜನ್ಮಾಷ್ಟಮಿ ಹಬ್ಬದ ಪ್ರಯುಕ್ತ ಒಂದಷ್ಟು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದು, ಇದೀಗ ಈ ಹೊಸ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಬಹಳ ವೈರಲ್ ಆಗುತ್ತಿದೆ.