ಕನ್ನದಡ ಕಿರುತರೆಯಲ್ಲಿ ಬಿಗ್ ಬಾಸ್ ಒಂದು ಅತ್ಯದ್ಭುತ ಮೈಲಿಗಲ್ಲು . ಕನ್ನಡದ ಜನ ಮೆಚ್ಚಿದ ನಟ ಕಿಚ್ಚ ಸುದೀಪ್ ರವರು ನಡೆಸಿಕೊಡುತ್ತಿರೋ ಈ ರಿಯಾಲಿಟಿ ಷೋ ಜನರ ಮೆಚ್ಚಿಗೆಗೆ ಪಾತ್ರವಾಗಿದೆ. ಕಳೆದವಾರವಷ್ಟೇ ತನ್ನ ಎಂಟನೇ ವೃತ್ತಿಯನ್ನ ಮುಗಿಸಿ ಯಶಸ್ವೀ ರಿಯಾಲಿಟಿ ಷೋ ಲಿಸ್ಟ್ ಸೇರಿದೆ.
ಬಿಗ್ ಬಾಸ್ ಅಭ್ಯರ್ಥಿಗಳಲ್ಲಿ ಒಬ್ಬರಾದ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಶಾಕಿಂಗ್ ವಿಚಾರವನ್ನ ತಿಳೀದ್ಧಾರೆ. ಖಾಸಗಿ ನ್ಯೂಸ್ ಚಾನೆಲ್ ಆವರಣ ಇಂಟರ್ವ್ಯೂ ನಡೆಸಿದಾಗ ಕಿಚ್ಚ ಸುದೀಪ್ ನಡೆಸಿಕೊಡುವ ವಾರದ ಕಥೆ ಕಿಚ್ಚನ ಜೊತೆಯ ಒಂದು ಸನ್ನಿವೇಶದ ಬಗ್ಗೆ ನಿರೂಪಕಿ ಪ್ರಶ್ನಿಸಿದಾಗ ಉತ್ತರಿಸಿದ ಸಂಬರಗಿ ಆ ವಿಷಯ ತನಗೆ ಬೇಸರವಾಗಿಸಿದೆ ಎಂದಿದ್ದಾರೆ.
ಸಂಬರಗಿ ಒಬ್ಬ ಬ್ರೋಕರ್ ಅವನಿಗೆ ಸ್ವಂತ ಕಾರ್ ಕೂಡ ಇಲ್ಲ ಎಂದು ಚಕ್ರವರ್ತಿ ಅರವಿಂದ್ ಬಳಿ ಮಾತನಾಡಿದ್ಧರು ಇದನ್ನ ಆ ವಾರದ ಕಿಚ್ಚನ ಸಭೆಯಲ್ಲಿ ಚರ್ಚಿಸಲಾಗಿತ್ತು, ಈ ಬಗ್ಗೆ ಪ್ರಶ್ನೆ ಕೇಳಿದ ಟಿವಿ ನಿರುಪಕಿಯ ಪ್ರಶ್ನೆಗೆ ಉತ್ತರಿಸಿದ ಸಂಬರಗಿ ಹೇಳಿದ್ದೇನು ಗೊತ್ತ.
ತನ್ನನ್ನ ಚಕ್ರವರ್ತಿ ಅಷ್ಟು ಕೀಳಾಗಿ ನೋಡುತ್ತಾನೆ ಎಂದು ಭಾವಿಸಿರಲಿಲ್ಲ , ಆದರೆ ಅವನು ಹೇಳಿದ ನನ್ನ ಬಳಿ ಕಾರ್ ಇಲ್ಲ ಎಂದು ಅಸಲಿಗೆ ನನ್ನ ಬಳಿ ಒಟ್ಟು ಎಂಟು ಕಾರ್ ಗಳಿವೆ ಎಂದಿದ್ದಾರೆ . ಏನೇ ಹೇಳಿ ಕಾರಿಂದ ಮನುಷ್ಯನ ಯೋಗ್ಯತೆ ಆಳಿತುವುದು ಎಷ್ಟ್ ಸರಿ??
ಕಾರ್ ಯಾರ ಮನೆಯಲ್ಲಿ ಇರೋದಿಲ್ಲ? ಈಗ ಎಲ್ಲರ ಮನೆಯಲ್ಲೂ ಟಿವಿ ಎಷ್ಟು ಸಹಜವಾಗಿ ಜನ ಮಾನಸದಲ್ಲಿ ಸೇರಿ ಹೋಗಿದೆಯೋ ಅಷ್ಟೇ ಕಾರುಗಳು ಇತ್ತೀಚಿನ ದಿನಗಳಲ್ಲಿ ಸರ್ವೇ ಸಾಮಾನ್ಯ. ವಾಹನ ಖರೀದಿ ಹೆಚ್ಚಾದಷ್ಟೂ ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತಿದೆ . ಅವಶ್ಯಕತೆಗಿಂತ ಹೆಚ್ಚು ನಾವೂ ವಾಹನ ಬಳಸುತ್ತಿರುವುದರಿಂದ ಪ್ರಕೃತಿ ಮಾಲಿನ್ಯ ಹೆಚ್ಚಾಗುವ ಜೊತೆಗೆ ಇಂಧನದ ಬೆಲೆ ಗಗನಕ್ಕೇರಿದೆ.