ನಟ ರಿಯಲ್ ಸ್ಟಾರ್ ಉಪೇಂದ್ರ ಅವರು ಕನ್ನಡ ಚಿತ್ರರಂಗದ ಬಹುಮುಖ ಪ್ರತಿಭೆ. ಉಪೇಂದ್ರ ಅವರು ಓಂ ಸಿನಿಮಾ ಮೂಲಕ ಕನ್ನಡ ಚಿತ್ರರಂಗದ ದಿಕ್ಕನ್ನೇ ಬದಲಿಸಿದ ವ್ಯಕ್ತಿ. ಇವರು ಯೋಚನೆ ಮಾಡುವ ಹಾಗೆ ಮತ್ತೊಬ್ಬರಿಂದ ಯೋಚನೆ ಮಾಡಲು ಆಗುವುದಿಲ್ಲ. ಅಷ್ಟರ ಮಟ್ಟಿಗೆ ಉಪೇಂದ್ರ ಅವರು ಯೋಚನೆ ಮಾಡುವ ರೀತಿ ಇರುತ್ತದೆ. ಇವರು ಯೋಚನಾ ಶಕ್ತಿ ಎಂಥದ್ದು ಎನ್ನುವುದನ್ನು ತಿಳಿಯಲು ಅವರು ನಿರ್ದೇಶನ ಮಾಡುವ ಸಿನಿಮಾಗಳನ್ನು ನೋಡಬೇಕು. ಉಪೇಂದ್ರ ಅವರು ಕೆಲ ವರ್ಷಗಳ ಹಿಂದಿನಿಂದಲೂ ಉಪೇಂದ್ರ ಅವರು ರಾಜಕೀಯ ಪ್ರವೇಶ ಮಾಡುವ ಬಗ್ಗೆ ಕೆಲವು ಸಂದರ್ಶನದಲ್ಲಿ ಹೇಳಿಕೊಂಡಿದ್ದರು.
ಸಮಾಜದ ವ್ಯವಸ್ಥೆ ಬದಲಾಗಬೇಕು, ಜನರು ಯೋಚನೆ ಮಾಡುವ ಶೈಲಿ ಬದಲಾಗಬೇಕು, ಜನರಿಗೆ ಎಲ್ಲದರ ಬಗ್ಗೆ ತಿಳುವಳಿಕೆ ಇರಬೇಕು ಎಂದು ಉಪೇಂದ್ರ ಅವರು ತಮ್ಮ ಅಭಿಪ್ರಾಯವನ್ನು ಹೇಳಿಕೊಳ್ಳುತ್ತಿದ್ದರು. ಶೀಘ್ರದಲ್ಲೇ ಉಪೇಂದ್ರ ಅವರು ರಾಜಕೀಯ ಪ್ರವೇಶ ಮಾಡುತ್ತಾರೆ ಎಂದು ಗೊತ್ತಿದ್ದರು ಎಲ್ಲರೂ ಅವರು ಬಿಜೆಪಿ ಪಕ್ಷಕ್ಕೆ ಸೇರಿಕೊಳ್ಳುತ್ತಾರೆ ಎಂದುಕೊಂಡಿದ್ದರು. ಆದರೆ ಎಲ್ಲರಿಗೂ ಶಾಕ್ ನೀಡಿದ ಉಪೇಂದ್ರ ಅವರು ತಮ್ಮದೆ ಆದ ಹೊಸ ಪಕ್ಷ ಪ್ರಜಾಕೀಯವನ್ನು ಶುರು ಮಾಡಿದರು. ಈಗಾಗಲೇ ಒಮ್ಮೆ ಎಲೆಕ್ಷನ್ ನಲ್ಲಿ ಪ್ರಜಾಕೀಯ ಪಕ್ಷದ ಪರವಾಗಿ ಅಭ್ಯರ್ಥಿಗಳು ಎಲೆಕ್ಷನ್ ನಲ್ಲಿ ಸ್ಪರ್ಧಿಸಿದರು ಸಹ ಗೆಲ್ಲಲಿಲ್ಲ. ಇದಕ್ಕೆ ಕಾರಣ ಉಪೇಂದ್ರ ಅವರ ಯೋಚನಾ ಶಕ್ತಿಯನ್ನು ಅರ್ಥಮಾಡಿಕೊಳ್ಳುವುದು ಜನರಿಗೆ ಇನ್ನು ಸಾಧ್ಯವಾಗಿಲ್ಲ. ಉಪೇಂದ್ರ ರೆಸಾರ್ಟ್ ಹೇಗಿದೆ, ಎಂದು ಈ ಕೆಳಗಿನ ವಿಡಿಯೋ ನೋಡಿ ಉಪೇಂದ್ರ ಅವರ ಕೆಲವು ಪಾಯಿಂಟ್ ಗಳು ಜನರಿಗೆ ನಗು ತರಿಸಿತ್ತು. ಮುಂದೆ ಒಂದು ದಿನ ಜನರಿಗೆ ಉಪೇಂದ್ರ ಅವರ ಮಾತಿನ ಅರ್ಥ ಆಗುವುದು ಖಂಡಿತ. ಉಪೇಂದ್ರ ಅವರು ಕಳೆದ ವರ್ಷ ಲಾಕ್ ಡೌನ್ ನಲ್ಲಿ ತೋಟದ ಮನೆಯಲ್ಲಿ ನೆಲೆಸಿ, ಕೃಷಿ ಮಾಡಲು ಶುರು ಮಾಡಿದ್ದರು. ಈ ವರ್ಷ ಲಾಕ್ ಡೌನ್ ನಲ್ಲಿ ಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡುವ ಕೆಲಸ ಶುರು ಮಾಡಿದ್ದಾರೆ. ಉಪೇಂದ್ರ ಅವರು ಕೃಷಿ ಕೆಲಸದಲ್ಲಿ ನಿರತವಾಗಿರುವ ಸಮಯದಲ್ಲಿ ನೆಲೆಸಲು ತೋಟದಲ್ಲಿ ಕಟ್ಟಿಸಿಕೊಂಡಿರುವ ಮನೆ, ಹೇಗಿದೆ ಗೊತ್ತಾ.. ಬಹಳ ಅಚ್ಚುಕಟ್ಟಾಗಿ ಸರಳವಾಗಿ ಕಟ್ಟಿಸಿದ್ದಾರೆ ನಟ ಉಪೇಂದ್ರ. ನೀವು ಕೂಡ ನೋಡಿ.