ಚಿರು ನೆನೆದು ಕಣ್ಣೀರು

ಇನ್ನು ಚಿರು ಬಗ್ಗೆ ಮಾತಾಡಿದ ಮೇಘನಾ ರಾಜ್ “ನನ್ನ ಮಗ ರಯಾನ್ ಸೇಮ್ ತಂದೆ ತರಾನೆ ಸಕತ್ ತರ್ಲೆ! ಅಮ್ಮ ಅನ್ನು ಅಂತ ಎಷ್ಟು ಸರಿ ಹೇಳಿದ್ರೂ ಪ್ರತಿ ಸರಿ ತೊದಲು ಮಾತಾಡಬೇಕಾದ್ರೆ ಅಪ್ಪ ಅಪ್ಪ ಅಂತಾನೆ! ಇವತ್ತು ಚಿರು ಬಗ್ಗೆ ಯೋಚನೆ ಮಾಡಿದ್ರು ನನ್ನ ಮುಖದಲ್ಲಿ ಒಂದು ನಗು ಇರುತ್ತೆ! ಚಿರು ಎಲ್ಲಿಗೆ ಹೋದ್ರೂ ಖುಷಿಯನ್ನು ಹಂಚುತಿದ್ದನು, ಎಲ್ಲರಿಗೂ ಸಂತೋಷ ಕೊಡುತ್ತಿದ್ದನು! ಈ ಮಿಸ್ ಯು ಚಿರು! ” ಎಂದು ಭಾವುಕರಾಗಿದ್ದರೆ ಮೇಘನಾ ರಾಜ್.
ಈ ಪ್ರೊಮೋ ನೋಡಿ ಮೇಘನಾ ರಾಜ್ ಅವರ ಅಭಿಮಾನಿಗಳು ಸಹ ಬಹಳ ಸಂತೋಷಪಟ್ಟಿದ್ದಾರೆ. ಇನ್ನುಮುಂದೆ ಮೇಘನಾ ರಾಜ್ ಅವರು ಪ್ರತಿ ವೀಕೆಂಡ್ ನಲ್ಲಿ ಎಲ್ಲರ ಮನೆಗೆ ಬರುತ್ತಾರೆ ಎನ್ನುವುದು ಎಲ್ಲರಿಗೂ ಬಹಳ ಸಂತೋಷದ ವಿಚಾರ. ಅಭಿಮಾನಿಗಳು ಕಮೆಂಟ್ಸ್ ಗಳ ಮೂಲಕ ಮತ್ತು ಲೈಕ್ಸ್ ನೀಡುವ ಮೂಲಕ ಮೆಚ್ಚುಗೆ ಸೂಚಿಸಿದ್ದು, ಕಿರುತೆರೆ ಲೋಕಕ್ಕೆ ಮೇಘನಾ ರಾಜ್ ಅವರನ್ನು ಪ್ರೀತಿಯಿಂದ ಸ್ವಾಗತ ಮಾಡುತ್ತಿದ್ದಾರೆ.


ನಟಿ ಮೇಘನಾ ರಾಜ್ ಸ್ಯಾಂಡಲ್ ವುಡ್ ನ ಮನೆಮಗಳು. ಇವರ ತಂದೆ ತಾಯಿ ಚಂದನವನದ ಕಲಾವಿದರಾಗಿದ್ದ ಕಾರಣ ಮೇಘನಾ ರಾಜ್ ಅವರಿಗೆ ಕನ್ನಡ ಚಿತ್ರರಂಗ ಹೊಸದೇನಲ್ಲ. ಚಿಕ್ಕ ವಯಸ್ಸಿನಿಂದಲೂ ಚಂದನವನದ ಲೆಜೆಂಡ್ ಗಳ ಮಾರ್ಗದರ್ಶನದ ಜೊತೆ ಬೆಳೆದವರು ಮೇಘನಾ ರಾಜ್. ಬಹಳ ವರ್ಷಗಳ ಕಾಲ ಯುವಸಾಮ್ರಾಟ್ ಚಿರಂಜೀವಿ ಸರ್ಜಾ ಅವರನ್ನು ಪ್ರೀತಿಸಿ, 2018 ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು.

ಈಗ ಚಿರು ಇಲ್ಲವಾದರೂ ಪುಟ್ಟ ಚಿರು ರಾಯನ್ ರಾಜ್ ಸರ್ಜಾ ಮೇಘನಾ ರಾಜ್ ಅವರ ಜೊತೆ ಇದ್ದಾನೆ. ಕಳೆದ ವರ್ಷ ಚಿರು ಇಹಲೋಕ ತ್ಯಜಿಸಿದ ನಂತರ ಬಹಳ ಕುಗ್ಗಿದ್ದ ಮೇಘನಾ ರಾಜ್ ಅವರ ಜೀವನಕ್ಕೆ ಮೆರುಗು ತಂದಿದ್ದು ಜ್ಯೂನಿಯರ್ ಚಿರು. ಜ್ಯೂನಿಯರ್ ಚಿರು ಹುಟ್ಟಿದ ನಂತರ ಮಗುವಿನಲ್ಲೇ ತಮ್ಮ ಇಡೀ ಜೀವನ ನೋಡುತ್ತಿದ್ದಾರೆ ಮೇಘನಾ ರಾಜ್.

ಕಳದ ತಿಂಗಳು ಮಗುವಿಗೆ ರಾಯನ್ ರಾಜ್ ಸರ್ಜಾ ಎಂದು ನಾಮಕರಣ ಮಾಡಲಾಯಿತು. ಕುಟುಂಬದವರು ಮತ್ತು ಸ್ಯಾಂಡಲ್ ವುಡ್ ಕಲಾವಿದರು ನಾಮಕರಣಕ್ಕೆ ಬಂದು ಮಗುವನ್ನು ಹರಸಿ ಹಾರೈಸಿದರು. ರಾಯನ್ ರಾಜ್ ಸರ್ಜಾ ಹುಟ್ಟುವರೆಗೂ ಮೇಘನಾ ರಾಜ್ ಅವರು ಪಟ್ಟ ಸಂಕಟ ಅಷ್ಟಿಷ್ಟಲ್ಲ. ಚಿರುವನ್ನು ಯಾವಾಗಲೂ ನೆನಪು ಮಾಡಿಕೊಳ್ಳುತ್ತಿದ್ದರು.

ಈಗಲೂ ಸಹ ಚಿರು ನೆನಪು ಹಾಗೆಯೇ ಇದೆ. ಮೇಘನಾ ರಾಜ್ ಅವರು ಈಗ ಎಂದಿದಂತೆ ಮೊದಲಿದ್ದ ಹಾಗೆಯೇ ಇರಲು ಪ್ರಯತ್ನ ಮಾಡುತ್ತಿದ್ದಾರೆ. ಎಲ್ಲಾ ಹಬ್ಬಗಳನ್ನು ಬಹಳ ಸಂತೋಷದಿಂದ ಆಚರಿಸಲು ಶುರು ಮಾಡಿದ್ದಾರೆ. ರಾಯನ್ ಜೊತೆ ದಸರಾ ದೀಪಾವಳಿ ಹಬ್ಬಗಳನ್ನು ಆಚರಿಸಿ, ರಾಯನ್ ಗೆ ಹಬ್ಬಗಳ ಮಹತ್ವಗಳನ್ನು ಹೇಳಿಕೊಡುತ್ತಿದ್ದಾರೆ. ಮಗನ ಜೊತೆ ಸಂತೋಷವಾಗಿರುವ ಮೇಘನಾ ರಾಜ್ ಇದೀಗ ತಮ್ಮ ಜೀವನದಲ್ಲಿ ಹೊಸ ಹೆಜ್ಜೆ ಇಟ್ಟಿದ್ದಾರೆ.

ಇಷ್ಟು ವರ್ಷಗಳ ಕಾಲ ಸಿನಿಮಾ ರಂಗದಲ್ಲಿ ಸಕ್ರಿಯರಾಗಿದ್ದ ಮೇಘನಾ ರಾಜ್ ಇದೀಗ ಮೊದಲ ಬಾರಿಗೆ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ಅದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ ಅತಿದೊಡ್ಡ ಡ್ಯಾನ್ಸ್ ಶೋ ಡ್ಯಾನ್ಸಿಂಗ್ ಚಾಂಪಿಯನ್ ಮೂಲಕ. ಈ ಶೋಗೆ ಜಡ್ಜ್ ಆಗಿ ಎಂಟ್ರಿ ಕೊಟ್ಟಿದ್ದಾರೆ ಮೇಘನಾ. ಇದೆ ಮೊದಲ ಬಾರಿಗೆ ಕಿರುತೆರೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಮೇಘನಾ ರಾಜ್. ಇದರ ಬಗ್ಗೆ ಮೇಘನಾ ಅವರು ಸಹ ಎಕ್ಸೈಟ್ ಆಗಿದ್ದಾರೆ.

ಕಾರ್ಯಕ್ರಮದ ಪ್ರೊಮೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿ, “ಎಲ್ಲಾ ವಿಚಾರದಲ್ಲೂ ಮೊದಲ ಸಲ ಅನ್ನೋದು ಇರುತ್ತೆ.. ನಾನು ಮೊದಲ ಬಾರಿಗೆ ಡ್ಯಾನ್ಸ್ ರಿಯಾಲಿಟಿ ಶೋ ಜಡ್ಜ್ ಆಗಿ ಬರುತ್ತಿದ್ದೇನೆ.. ಧನ್ಯವಾದ..”ಎಂದು ಕ್ಯಾಪ್ಶನ್ ಬರೆದು ವಿಡಿಯೋ ಶೇರ್ ಮಾಡಿ, ತಮ್ಮ ತಂಡದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ ಮೇಘನಾ ರಾಜ್.

ಈ ಶೋ ಬಗ್ಗೆ ಕಿರುತೆರೆ ಲೋಕದಲ್ಲಿ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಈ ಶೋಗೆ ನಟ ವಿಜಯ್ ರಾಘವೇಂದ್ರ ಹಾಗೂ ಡ್ಯಾನ್ಸರ್ ಮಯೂರಿ ಅವರು ಸಹ ಜಡ್ಜ್ ಗಳಾಗಿದ್ದಾರೆ. ಇನ್ನು ಸ್ಪರ್ಧಿಗಳಾಗಿ, ಗಟ್ಟಿಮೇಳ ಧಾರಾವಾಹಿ ಖ್ಯಾತಿಯ ಆದ್ಯ, ಕೆಜಿಎಫ್ ಸಿನಿಮಾ ಜ್ಯೂನಿಯರ್ ರಾಕಿ ಭಾಯ್, ಕಿರುತೆರೆಯ ಬಹಳ ಫೇಮಸ್ ಆದ ತಾರೆಯರು ಬಂದಿದ್ದಾರೆ. ಇದೇ ಶನಿವಾರದಿಂದ ಈ ಹೊಸ ಡ್ಯಾನ್ಸ್ ರಿಯಾಲಿಟಿ ಶೋ ಶುರುವಾಗಲಿದೆ.