ವಿಶೇಷ ಏನು ನೋಡಿ !

 

ಕನ್ನಡ ಚಿತ್ರರಂಗದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಏನೇ ಮಾಡಿದರೂ ಸ್ಪೆಷಲ್. ನಟನೆಯಿಂದಾಗಿ ಕರ್ನಾಟಕಾದ್ಯಂತ ಕೋಟ್ಯಾಂತರ ಅಭಿಮಾನಿಗಳನ್ನು ಗಳಿಸಿದ್ದಾರೆ. ಅಭಿಮಾನಿಗಳು ಇವರನ್ನು ಪ್ರೀತಿಯಿಂದ ಡಿಬಾಸ್ ಎಂದೇ ಕರೆಯುತ್ತಾರೆ. ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದರಲ್ಲಿ ಯಾವಾಗಲೂ ಮುಂದಿರುತ್ತಾರೆ ದರ್ಶನ್.

ಬಲಗೈ ಇಂದ ಮಾಡಿದ ಸಹಾಯ ಎಡಗೈಗೆ ಗೊತ್ತಾಗಬಾರದು ಎಂಬ ಸ್ವಭಾವ ದರ್ಶನ್ ಅವರದ್ದು. ಬಿಡುವಿನ ಸಮಯದಲ್ಲಿ ಸ್ನೇಹಿತರ ಜೊತೆ ಸಮಯ ಕಳೆಯುತ್ತಾರೆ ಡಿಬಾಸ್. ಹೆಚ್ಚಾಗಿ ಮೈಸೂರಿನಲ್ಲಿರುವ ತಮ್ಮ ಫಾರ್ಮ್ ಹೌಸ್ ನಲ್ಲಿ ಸ್ನೇಹಿತರೊಡನೆ ಇದ್ದು, ಸಾಕು ಪ್ರಾಣಿಗಳ ಆರೈಕೆ ಮಾಡುತ್ತಾರೆ. ಡಿಬಾಸ್ ದರ್ಶನ್ ಅವರಿಗೆ ಇರುವ ಅಭಿಮಾನಿ ಬಳಗ ಬೇರೆ ಯಾವ ನಟರಿಗೂ ಇಲ್ಲ ಎಂದರೆ ತಪ್ಪಾಗಲಾರದು.