ನಾನು ಅಮ್ಮ ಆಗುತ್ತಿದ್ದೇನೆ ಖುಷಿ ವಿಷಯ ತೆರೆದಿಟ್ಟ ಕಾಜಲ್ ಅಗರ್ವಾಲ್ ! ನೀವೇ ನೋಡಿ

 


ದಕ್ಷಿಣ ಭಾರತ ಚಿತ್ರರಂಗದ ಮುದ್ದುಮುಖದ ಚೆಲುವೆ ಕಾಜಲ್ ಅಗರ್ವಾಲ್ ಕಳೆದ ಆಕ್ಟೊಬರ್ 30ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಬಹು ದಿನದ ಗೆಳೆಯ ಗೌತಮ್ ಕಿಟ್ಟು ಅವರೊಡನೆ ಸಪ್ತಪದಿ ತುಳಿದರು ಕಾಜಲ್ ಅಗರ್ವಾಲ್. ಕಳೆದ ವರ್ಷ ಆಕ್ಟೊಬರ್ 6 ರಂದು, ತಮ್ಮ ಗೆಳೆಯ ಗೌತಮ್ ಕಿಟ್ಟು ಜೊತೆ ಮದುವೆ ನಿಶ್ಚಯವಾಗಿದೆ, ಆಕ್ಟೊಬರ್ 30 ರಂದು ತಾವಿಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಡುವುದಾಗಿ ಕಾಜಲ್ ಅಗರ್ವಾಲ್ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದರು.

ಇತ್ತೀಚೆಗೆ ನಟಿ ಕಾಜಲ್ ಅಗರ್ವಾಲ್ ಮತ್ತು ಅವರ ಪತಿ ಗೌತಮ್ ಸಿಹಿ ಸುದ್ದಿಯೊಂದನ್ನು ಶೀಘ್ರದಲ್ಲೇ ಹಂಚಿಕೊಳ್ಳುತ್ತಾರೆ ಎನ್ನುವ ಮಾಹಿತಿ ಸಿಕ್ಕಿತ್ತು. ಕಾಜಲ್ ಮತ್ತು ಗೌತಮ್ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಇದೀಗ ಹೊಸ ವರ್ಷದ ಸಮಯದಲ್ಲಿ ಕಾಜಲ್ ಮತ್ತು ಗೌತಮ್ ಇದರ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ. ಹೊಸ ವರ್ಷದ ಸ್ಪೆಷಲ್ ಆಗಿ ನಟಿ ಕಾಜಲ್ ಅಗರ್ವಾಲ್ ಗಂಡನ ಜೊತೆ ಫೋಟೋ ಶೇರ್ ಮಾಡಿ, ಹೊಸ ವರ್ಷಕ್ಕೆ ವಿಶ್ ಮಾಡಿದ್ದರು.

ಕಾಜಲ್ ಅವರ ಗಂಡ ಗೌತಮ್, ಪತ್ನಿಯ ಫೋಟೋ ಶೇರ್ ಮಾಡಿ, 2022 ನಿನ್ನೆ ಎದುರು ನೋಡುತ್ತಿದ್ದೇನೆ.. ಎಂದು ಬರೆದುಕೊಂಡಿದ್ದಾರೆ.  ಜೊತೆಗೆ ಪ್ರೆಗ್ನೆನ್ಟ್ ಎಮೋಜಿ ಶೇರ್ ಮಾಡುವ ಮೂಲಕ, ಸಿಹಿ ಸುದ್ದಿ ನೀಡಿದ್ದಾರೆ. ಇದನ್ನು ನೋಡಿ ಎಲ್ಲರೂ ಕಾಜಲ್ ಗೌತಮ್ ದಂಪತಿಗೆ ವಿಶ್ ಮಾಡಲು ಶುರು ಮಾಡಿದ್ದಾರೆ.. ಕಾಜಲ್ ಅಗರ್ವಾಲ್ ಮದುವೆ ಆಗುತ್ತಿರುವ ಸುದ್ದಿ ಕೇಳಿ ಅವರ ಮೇಲ್ ಫ್ಯಾನ್ ಫಾಲೋವರ್ಸ್ ಗಳಿಗೆ ಬಹಳ ಬೇಸರವಾಗಿತ್ತು. ಕಾಜಲ್ ಇಷ್ಟು ಬೇಗ ಮದುವೆ ಆಗಬಾರದಿತ್ತು ಎಂದು ಸೋಶಿಯಲ್ ಮೀಡಿಯಾದಲ್ಲಿ ಬೇಸರ ವ್ಯಕ್ತಪಡಿಸಿದ್ದರು. ಆದರೆ  ನಿಶ್ಚಯವಾದಂತೆ ಆಕ್ಟೊಬರ್ 30 ರಂದು ಕಾಜಲ್ ಮತ್ತು ಗೌತಮ್ ಕಿಟ್ಟು ಅವರ ಮದುವೆ ಕುಟುಂಬದವರ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ನಡೆಯಿತು. ಇದೊಂದು ಖಾಸಗಿ ಸಮಾರಂಭವಾಗಿತ್ತು.

ಮದುವೆ ಸಮಾರಂಭದಲ್ಲಿ ಕುಟುಂಬದವರು, ಗುರು ಹಿರಿಯರು ಹಾಗೂ ಕೆಲವೇ ಕೆಲವು ಸ್ನೇಹಿತರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ಮುಂಬೈ ನ ತಾಜ್ ಮಹಲ್ ಹೋಟೆಲ್ ನಲ್ಲಿ ನಟಿ ಕಾಜಲ್ ಅಗರ್ವಾಲ್ ಮದುವೆ ಅದ್ಧೂರಿಯಾಗಿ ನಡೆಯಿತು. ಮದುವೆಯ ದಿನ ಡಿಸೈನರ್ ಲೆಹೆಂಗ ಧರಿಸಿದ್ದಾರೆ ಕಾಜಲ್, ವರ ಗೌತಮ್ ಕಿಟ್ಟು ಶೇರ್ವಾನಿ ಧರಿಸಿ ಮಿಂಚಿದ್ದರು. ಎರಡು ಕುಟುಂಬದ ಆಪ್ತರು ಮಾತ್ರ ಮದುವೆಯಲ್ಲಿ ಭಾಗಿಯಾಗಿದ್ದರು. ಇದೀಗ ಮದುವೆ ಆಗಿ ಒಂದು ವರ್ಷ ತುಂಬುವ ಹೊತ್ತಿಗೆ ಕಾಜಲ್ ಅಗರ್ವಾಲ್ ಸಿಹಿ ಸುದ್ದಿ ನೀಡಲು ತಯಾರಾಗಿರುವುದು ನಿಜಕ್ಕೂ ಒಳ್ಳೆಯ ವಿಷಯ.