ರಾಕಿ ಭಾಯ್ ಹೊಸ ವರ್ಷದ ಆಚರಣೆ ---- ಹೇಗಿತ್ತು ನೋಡಿ!

 ಚಂದನವನದ ಕ್ಯೂಟ್ ಜೋಡಿ ರಾಕಿಂಗ್ ಸ್ಟಾರ್ ಯಶ್ ಮತ್ತು ಸ್ಯಾಂಡಲ್ ವುಡ್ ಪ್ರಿನ್ಸೆಸ್ ರಾಧಿಕಾ ಪಂಡಿತ್. ಇವರಿಬ್ಬರು ಚಿತ್ರರಂಗಕ್ಕೆ ಜೊತೆಯಾಗು ಎಂಟ್ರಿ ಕೊಟ್ಟು, ಸ್ಟಾರ್ ಗಳಾಗಿ ಬೆಳೆದು ಈಗ ಸ್ಟಾರ್ ದಂಪತಿಗಳಾಗಿದ್ದಾರೆ. ಯಶ್ ರಾಧಿಕಾ ಇಬ್ಬರು ನಟನೆಯ ಜರ್ನಿ ಶುರು ಮಾಡಿದ್ದು, ಧಾರಾವಾಹಿಗಳ ಮೂಲಕ. ಕೆಲವು ಧಾರಾವಾಹಿಗಳಲ್ಲಿ ನಟಿಸಿದ ನಂತರ ಇವರಿಬ್ಬರಿಗೂ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತು.


 ಮೊಗ್ಗಿನ ಮನಸ್ಸು ಸಿನಿಮಾ ಮೂಲಕ ಇಬ್ಬರು ಜೊತೆಯಾಗಿ ಚಂದನವನಕ್ಕೆ ಎಂಟ್ರಿ ಕೊಟ್ಟರು. ಮೊದಲ ಸಿನಿಮಾದಲ್ಲೇ ಯಶಸ್ಸು ಪಡೆದುಕೊಂಡರು. ನಂತರ ತಮ್ಮದೆ ಹಾದಿಯಲ್ಲಿ ಇಬ್ಬರು ಒಳ್ಳೆಯ ಪಾತ್ರಗಳನ್ನು ಆಯ್ಕೆ ಮಾಡಿಕೊಂಡು, ಚಂದನವನದ ಸ್ಟಾರ್ ಗಳಾಗಿ  ಬೆಳೆದರು. ಹಲವು ವರ್ಷಗಳ ಕಾಲ ಪ್ರೀತಿಸಿದ ಈ ಜೋಡಿ, 2016ರಲ್ಲಿ ಎರಡು ಕುಟುಂಬವರನ್ನು ಒಪ್ಪಿಸಿ, ಅದ್ಧೂರಿಯಾಗಿ ವೈವಾಹಿಕ ಜೀವನ ಶುರು ಮಾಡಿದರು ಯಶ್ ಮತ್ತು ರಾಧಿಕಾ ಜೋಡಿ ಅಂದ್ರೆ ಅಭಿಮಾನಿಗಳಿಗೆ ಅಚ್ಚುಮೆಚ್ಚು. ಈ ಜೋಡಿ ಜೊತೆಯಾಗಿ ಮೂರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಮೊಗ್ಗಿನ ಮನಸ್ಸು, ಡ್ರಾಮಾ ಮತ್ತು ಸಂತು ಸ್ಟ್ರೇಟ್ ಫಾರ್ವರ್ಡ್..ನಿಜ ಜೀವನದಲ್ಲೂ ಐಡಿಯಲ್ ಕಪಲ್ ಆಗಿದ್ದಾರೆ ಯಶ್ ಮತ್ತು ರಾಧಿಕಾ. ಈ ದಂಪತಿಗೆ ಇಬ್ಬರು ಮುದ್ದಾದ ಮಕ್ಕಳು, ಆಯ್ರಾ ಮತ್ತು ಯಥರ್ವ್. ಮದುವೆ ಮತ್ತು ಮಕಳ ನಂತರ ರಾಧಿಕಾ ಅವರು ಸಿನಿಮಾಗಳಿಂದ ದೂರವೇ ಉಳಿದಿದ್ದಾರೆ.
ತಮ್ಮ ಜೀವನದ ಎಲ್ಲಾ ಸಂತೋಷದ ಕ್ಷಣಗಳನ್ನು ಬಹಳ ಸ್ಪೆಷಲ್ ಆಗಿ ಸೆಲೆಬ್ರೇಟ್ ಮಾಡುತ್ತಾರೆ. ಇದೀಗ 2021 ಕಳೆದು 2022 ಬಂದಿದೆ. ಈ ಹೊಸ ವರ್ಷದ ಸಂಭ್ರಮವನ್ನು ಗೋವಾದಲ್ಲಿ ಆಚರಿಸಿದ್ದಾರೆ ಯಶ್ ರಾಧಿಕಾ ಕುಟುಂಬ. ಗೋವಾದಲ್ಲಿ ನ್ಯೂ ಇಯರ್ ಸೆಲೆಬ್ರೇಷನ್ ಫೋಟೋಗಳನ್ನು ಯಶ್ ಅವರ ತಂಗಿ ನಂದಿನಿ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿಕೊಂಡಿದ್ದು, ಯಶ್ ಕುಟುಂಬದ ಫೋಟೋಗಳನ್ನು ನೋಡಿ, ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.