ಅಮ್ಮ ಆಗುತ್ತಿದ್ದೇನೆ ಖುಷಿ ವಿಷಯ ತೆರೆದಿಟ್ಟ ಸಂಜನಾ ಗಲ್ರಾನಿ ! ನೀವೇ ನೋಡಿ

 

ವಿವಾದಗಳಿಂದಲೆ ಹೆಚ್ಚಾಗಿ ಸುದ್ದಿಯಲ್ಲಿರುವ ನಟಿ ಸಂಜನಾ ಗಲ್ರಾನಿ ಮೊನ್ನೆಯಷ್ಟೇ ಮತ್ತೊಂದು ವಿವಾದಕ್ಕೆ ಸಿಲುಕಿಕೊಂಡಿದ್ದರು. ಮೊನ್ನೆ ಬೆಳಗ್ಗೆ ಓಲಾ ಕ್ಯಾಬ್ ಡ್ರೈವರ್ ಜೊತೆ ಜಗಳ ಮಾಡಿ ಆತನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಇದರಿಂದಾಗಿ ಓಲಾ ಕ್ಯಾಬ್ ಡ್ರೈವರ್ ಸಂಜನಾ ಗಲ್ರಾನಿ ಅವರ ಮೇಲೆ ದೂರು ನೀಡಿದ್ದಾನೆ ಎನ್ನುವ ಮಾಹಿತಿ ಸಿಕ್ಕಿತ್ತು.

ನಂತರ ನವರಾತ್ರಿ ಹಬ್ಬದ ಪ್ರಯುಕ್ತ ದೇವಿ ಅವತಾರದಲ್ಲಿ ವಿಶೇಷವಾದ ಫೋಟೋಶೂಟ್ ಮಾಡಿಸಿದ್ದರು ಸಂಜನಾ.. ಸೋಷಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್ ಆಗಿರುವ ಈ ನಟಿ ಆಗಾಗ ಫೋಟೋಶೂಟ್ ಗಳನ್ನು ಮಾಡಿಸಿ ಅವುಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಹಾಗೆಯೇ ತಮ್ಮ ಜೀವನದ ಬಗ್ಗೆ ಹಲವು ವಿಚಾರಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಾರೆ. ಇದೀಗ ಹೊಸ ವರ್ಷದ ಪ್ರಯುಕ್ತ ಒಂದು ಸಿಹಿ ಸುದ್ದಿ ನೀಡಿದ್ದಾರೆ ನಟಿ ಸಂಜನಾ ಗಲ್ರಾನಿ.

ಟೈಮ್ಸ್ ಆಫ್ ಇಂಡಿಯಾ ಗೆ ನೀಡಿದ ಸಂದರ್ಶನದಲ್ಲಿ ತಾವು ತಾಯಿ ಆಗುತ್ತಿರುವ ಸಂತೋಷದ ವಿಚಾರವನ್ನು ಹಂಚಿಕೊಂಡಿದ್ದಾರೆ. ತಾವು ಈಗ 5 ತಿಂಗಳ ಗರ್ಭಿಣಿ ಎಂದು ಗುಡ್ ನ್ಯೂಸ್ ಕೊಟ್ಟಿದ್ದಾರೆ ನಟಿ ಸಂಜನಾ. ನಟಿ ಸಂಜನಾ ಸಧ್ಯಕ್ಕೆ ತಾಯ್ತನವನ್ನು ಎಂಜಾಯ್ ಮಾಡುತ್ತಿದ್ದು, ಅವರ ಮುಂದಿನ ದಿನಗಳು ಚೆನ್ನಾಗಿರಲಿ ಎಂದು ಹಾರೈಸೋಣ.