ನಂದಿನಿ ಮಾಲೀಕರು ಕೈಗೊಂಡ ನಿರ್ಧಾರ ತಿಳಿದರೆ ನಿಜವಾಗ್ಲೂ ಗ್ರೇಟ್ ಅಂತೀರಾ! ಅಬ್ಬಾನಿರ್ಧಾರ ಗೊತ್ತಾ?

 

ಸ್ಯಾಂಡಲ್ ವುಡ್’ನ ರತ್ನ ಆಗಿದ್ದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಇಹಲೋಕ ತ್ಯಜಿಸಿ ಎರದು ತಿಂಗಳು ಕಳೆದೇ ಹೋಯ್ತು. ಆದರೆ ಈಗಲೂ ಇದೊಂದು ಕೆಟ್ಟ ಕನಸು ಅನ್ನುವಂತಿದೆ. ಪುನೀತ್ ರಾಜ್ ಕುಮಾರ್ ಅವರು ಇಷ್ಟು ಬೇಗ ನಮ್ಮನ್ನೆಲ್ಲಾ ಬಿಟ್ಟು ಹೋಗುತ್ತಾರೆ ಅನ್ನುವ ಊಹೆ ಕೂಡ ಯಾರು ಮಾಡಿರಲಿಲ್ಲ, ಖುದ್ದು ಅಪ್ಪುಗೂ ಈ ಬಗ್ಗೆ ಗೊತ್ತಿರಲಿಲ್ಲ. ಮುಂಚಿನ ದಿನವರೆಗೆ ಯಾವುದೇ ಸಮಸ್ಯೆ ಇಲ್ಲದೆ, ಆರೋಗ್ಯವಾಗೇ ಇದ್ದು, ಸಾವನ್ನಪ್ಪಿದ್ದ ದಿನ ಕೂಡ ವರ್ಕೌಟ್ ಮಾಡಿ ಫಿಟ್ ಆಗಿದ್ದ ಪುನೀತ್ ಇದ್ದಕ್ಕಿದ್ದಂತೆ ಹೃ-ದಯಾಘಾ-ತದಿಂದ ಸಾ-ವನ್ನಪ್ಪಿದ್ದರು.

ಇವರನ್ನು ಕಳೆದುಕೊಂಡ ಚಿತ್ರರಂಗ ಬಡವಾಗಿ ಹೋಗಿದೆ. ಪ್ರತಿದಿನ ಅಪ್ಪುನ ನೆನೆದು ಅಭಿಮಾನಿಗಳು ಕಣ್ಣೀರು ಹಾಕುತ್ತಿದ್ದಾರೆ. ಅಷ್ಟೆ ಅಲ್ಲ ಅಪ್ಪು ನೆನಪಿಗಾಗಿ ಹತ್ತು ಹಲವು ಕಾರ್ಯಕ್ರಮಗಳನ್ನು, ಸಮಾಜ ಮುಖಿ ಕೆಲಸಗಳನ್ನು ಮಾಡಿ ಅಪ್ಪುಗೆ ನಮನ ಸಲ್ಲಿಸುತ್ತಿದ್ದಾರೆ. ಇದೀಗ ಕೆ ಎಂ ಎಫ್ ಕೂಡ ಪುನೀತ್ ಅವರಿಗೆ ಕ್ಷೀರ ನಮನ ಅರ್ಪಿಸಿದೆ. ಹೌದು, ಡಾ ರಾಜ್ ಕುಮಾರ್ ಅವರು ಈ ಹಿಂದೆ ಕೆ ಎಂ ಎಫ್ ಗೆ ಅಪಾರ ಕೊಡುಗೆ ನೀಡಿದ್ದರು. ರೈತರ ಮೇಲಿನ ಗೌರವ ಹಾಗೂ ಕಳಕಳಿಯಿಂದ ಉಚಿತವಾಗಿ ಪ್ರಚಾರ ನಡೆಸಿ, ಸಂಸ್ಥೆ ಏಳಿಗೆಗಾಗಿ ಶ್ರಮಿಸಿದ್ದರು.

1990 ರಲ್ಲಿ ಪ್ರಚಾರ ರಾಯಭಾರಿಯಾಗಿಯೂ ಕಾಣಿಸಿಕೊಂಡಿದ್ದರು. ಅದೇ ರೀತಿಯಾಗಿ ಪುನೀತ್ ರಾಜ್ ಕುಮಾರ್ ಕೂಡ ಕಳೆದ 10 ವರ್ಷದಿಂದ ನಂದಿನಿ ಹಾಲಿಗೆ ಯಾವುದೇ ಸಂಭಾವನೆ ಪಡೆಯದೆ ಉಚಿತವಾಗಿ ರಾಯಭಾರಿಯಾಗಿ ಕೆಲಸ ಮಾಡಿದ್ದರು. ಇದರ ಸ್ಮರಣಾರ್ಥ ನಂದಿನಿ ಹಾಲಿನ ಪ್ಯಾಕೇಟ್ ಮೇಲೆ ಪುನೀತ್ ರಾಜ್ ಕುಮಾರ್ ಅವರ ಭಾವಚಿತ್ರ ಮುದ್ರಿಸಲಾಗಿದೆ. ಈ ಮೂಲಕ ಕೆ ಎಂ ಎಫ್ ಅಪ್ಪುಗೆ ವಿಶೇಷ ರೀತಿಯಲ್ಲಿ ಗೌರವ ಸಲ್ಲಿಸಿದೆ.


 ಹೊಸ ವರ್ಷದ ದಿನ ಪುನೀತ್ ಅವರ ಭಾವಚಿತ್ರ ಹಾಲಿನ ಪ್ಯಾಕೇಟ್ ಮೇಲೆ ಮುದ್ರಿಸಿರುವುದು ಅವರ ಅಪಾರ ಅಭಿಮಾನಿಗಳಿಗೆ ಸಂತೋಷ ಕೊಟ್ಟಿದೆ. ಆದರೆ ಇನ್ನು ಕೆಲವರು ಇದರ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ. ನಂದಿನಿ ಹಾಲಿನ ಪ್ಯಾಕೇಟ್ ಖರೀದಿ ಮಾಡುವವರು ಹಾಲು ಬಳಸಿದ ಮೇಲೆ ಪ್ಯಾಕೇಟನ್ನು ಕಸದ ರಾಶಿಗೆ ಹಾಕುತ್ತಾರೆ, ಇನ್ನು ಕೆಲವರು ಸುಡುತ್ತಾರೆ, ಹಾಗಾಗಿ ಪುನೀತ್ ಅವರ ಭಾವಚಿತ್ರ ಹಾಕಿರುವುದು ಅವರಿಗೆ ಅವಮಾನ ಮಾಡಿದಂತೆ ಎಂದು ಹೇಳಿದರೆ ಇನ್ನು ಕೆಲವರು ಇದು ಪ್ರೊಮೋಷನ್ ಗಿಮಿಕ್ ಎಂದು ಕಿಡಿಕಾರಿದ್ದಾರೆ.