ಪ್ರಿಯಾಂಕ ಎಲ್ಲಾ ಗೊತ್ತಿದ್ದೂ ಮಲ್ಲ ಒಪ್ಪಿಕೊಂಡಿದ್ದೇಕೆ ಉಪೇಂದ್ರ ಹೇಳಿದ್ದೇನು ನೋಡಿ?

 

ಸಾಮಾನ್ಯವಾಗಿ ಯಾವುದೇ ಚಿತ್ರ ನಟ ಅಥವಾ ನಟಿ ಮದುವೆ ಆದಮೇಲೆ ತಮ್ಮ ಗಂಡ ಅಥವಾ ಹೆಂಡತಿ ಹಸಿ ಬಿಸಿ ದೃಶ್ಯಗಳಲ್ಲಿ, ರೋಮ್ಯಾಂಟಿಕ್ ಸೀನ್ ಗಳಲ್ಲಿ ನಟಿಸುವುದನ್ನು ಇಷ್ಟ ಪಡುವುದಿಲ್ಲ. ಅದೇ ರೀತಿ ಕನ್ನಡದ ಸೂಪರ್ ಸ್ಟಾರ್ ಉಪೇಂದ್ರ ಅವರು ಕೂಡ ತಮ್ಮ ಪತ್ನಿ ಪ್ರಿಯಾಂಕ ಅವರು ನಟಿಸಿದ್ದ ಮಲ್ಲ ಚಿತ್ರದಿಂದ ತೀರಾ ಕುಗ್ಗಿ ಹೋಗಿದ್ದರು.ಹೌದು, ಮಲ್ಲ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಮಲ್ಲ ಸಿನಿಮಾ ಕೇವಲ ಒಂದಲ್ಲ ಬರೋಬ್ಬರಿ ಐದು ವರ್ಷಗಳ ಕಾಲ ಒಂದೇ ಥಿಯೇಟರ್ ನಲ್ಲಿ ಓಡಿದಂತಹ ಚಿತ್ರ.

ಆಗಿನ ಕಾಲಕ್ಕೇ ಬರೋಬ್ಬರಿ 8 ಕೋಟಿ ಕಲೆಕ್ಷನ್ ಮಾಡಿ, ದೊಡ್ಡ ಹಿಟ್ ಸಿನಿಮಾ ಆಗಿ ಹೊರ ಹೊಮ್ಮಿತ್ತು. ಆದರೆ ಈ ಸಿನಿಮಾದಿಂದ ಉಪೇಂದ್ರ ಅವರ ಜೀವನದಲ್ಲಿ ದೊಡ್ಡ ಸಮಸ್ಯೆಯೇ ಆಗಿತ್ತು. ಉಪೇಂದ್ರ ಅವರಿಗೆ ಬೆಂಗಾಲಿ ಮೂಲದ ಪ್ರಿಯಾಂಕ ಅವರ ಪರಿಚಯ ತೆಲುಗಿನ ರಾ ಸಿನಿಮಾದಿಂದ ಆಗಿತ್ತು. ಅಲ್ಲಿಂದಲೇ ಅವರ ಪ್ರೇಮ ಚಿಗುರೊಡೆದಿತ್ತು. ನಂತರ ಪ್ರಿಯಾಂಕ ಅವರು ಕನ್ನಡದ ಕೋಟಿಗೊಬ್ಬ ಸಿನಿಮಾದಲ್ಲಿ ಅಭಿನಯಿಸಿದ್ದರು. ಅದಾಗಿ ಉಪೇಂದ್ರ ಜೊತೆ ಪ್ರಿಯಾಂಕ ಅವರು ಹೆಚ್ 2ಒ ಸಿನಿಮಾದಲ್ಲಿ ನಟಿಸಿದ್ದರು.

ಅಲ್ಲಿ ಉಪೇಂದ್ರ ಹಾಗೂ ಪ್ರಿಯಾಂಕ ಭಾಂದವ್ಯ ಗಟ್ಟಿಯಾಗಿ, ಮದುವೆ ಯೋಚನೆ ಮಾಡಿದ್ದರು. ಆದರೆ ಇಬ್ಬರ ಸಂಪ್ರದಾಯವೂ ಬೇರೆ ಬೇರೆ, ಪ್ರಿಯಾಂಕ ಅಪ್ಪಟ ಬೆಂಗಾಳಿ ಬೆಡಗಿ ಇಲ್ಲಿನ ಶಾಸ್ತ್ರ ಸಂಪ್ರದಾಯ ಯಾವುದೂ ಅವರಿಗೆ ಗೊತ್ತಿರಲಿಲ್ಲ, ಆದರೂ ಇವರಿಬ್ಬರ ಪ್ರೀತಿ ಗಟ್ಟಿಯಾಗಿದ್ದ ಕಾರಣ ಎರಡು ಮನೆಯವರು ಇವರ ಪ್ರೀತಿಗೆ ಸಮ್ಮತಿ ಸೂಚಿಸಿದ್ದರು. ಆದರೆ ಆಗ ಉಪೇಂದ್ರ ಅವರು ಸ್ಟಾರ್ ನಟರಾಗಿದ್ದರು, ಸಾಲು ಸಾಲು ಸಿನಿಮಾಗಳು ಅವರ ಕೈಯಲ್ಲಿತ್ತು.

ಹಾಗಾಗಿ ಮದುವೆಯನ್ನು ಮುಂದೂಡಿದ್ದರು. ಇದೇ ಸಂದರ್ಭದಲ್ಲಿ ಪ್ರಿಯಾಂಕ ಅವರಿಗೆ ಮಲ್ಲ ಸಿನಿಮಾ ಆಫರ್ ಬರುತ್ತದೆ. ಇದನ್ನು ಪ್ರಿಯಾಂಕ ಅವರು ಉಪೇಂದ್ರರಿಗೆ ತಿಳಿಸಿದಾಗ, ಇದಕ್ಕೆ ಉಪೇಂದ್ರ ಅವರು ಸುತಾರಾಂ ಒಪ್ಪುವುದಿಲ್ಲ. ಕಾರಣ ರವಿಚಂದ್ರನ್ ಸಿನಿಮಾದಲ್ಲಿ ಹೀರೋಯಿನ್ ಗಳನ್ನು ಗ್ಲಾಮರಸ್ ಆಗಿ ತೋರಿಸಲಾಗುತ್ತದೆ ಅನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ಹಠಕ್ಕೆ ಬಿದ್ದ ಪ್ರಿಯಾಂಕ ಮಾತ್ರ ಸಹಿ ಮಾಡಿ ಸಿನಿಮಾದಲ್ಲಿ ನಟಿಸುತ್ತಾರೆ. ಈ ಸಿನಿಮಾದ ಹಾಡು ರಿಲೀಸ್ ಆಗುವ ಮುನ್ನ ಡಿಸೆಂಬರ್ ತಿಂಗಳಲ್ಲಿ ಇವರಿಬ್ಬರ ಮದುವೆ ಆಗುತ್ತದೆ.

ಅದಾಗಿ ಎರಡೇ ತಿಂಗಳಲ್ಲಿ ಅಂದರೆ ಫೆಬ್ರವರಿ 2004 ರಲ್ಲಿ ಮಲ್ಲ ಸಿನಿಮಾದ ಹಾಡುಗಳು ರಿಲೀಸ್ ಆದಾಗ, ಅದರಲ್ಲಿ ಪ್ರಿಯಾಂಕ ಅವರ ಹಸಿ ಬಿಸಿ ಹಾಗೂ ರೋಮ್ಯಾಂಟಿಕ್ ಸೀನ್ ನೋಡಿ ಉಪೇಂದ್ರ ಅವರು ತೀರಾ ಡಿಸ್ಟರ್ಬ್ ಆಗಿದ್ದರು. ಮದುವೆ ನಂತರ ಈ ಸಿನಿಮಾ ರಿಲೀಸ್ ಆಗಿರುವ ಕಾರಣ ತನ್ನ ಪತ್ನಿಯ ಬಗ್ಗೆ ಹಲವಾರು ಜನರು ಕೆಟ್ಟದಾಗಿ ಮಾತನಾಡುವುದನ್ನು ಕೇಳಲಾಗದೆ ಉಪೇಂದ್ರ ಅವರು ತೀರಾ ಕುಗ್ಗಿ ಹೋಗಿದ್ರು. ಆದ್ರೆ ಕ್ರಮೇಣ ಆ ವಿವಾದ, ಕಿರಿಕ್’ಗಳು ತಣ್ಣಗಾಗಿ, ಇದೀಗ ಉಪೇಂದ್ರ ಅವರದ್ದು ಒಂದು ಸುಂದರ ಫ್ಯಾಮಿಲಿಯಾಗಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ನಮಗೆ ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.