ಅಭಿಷೇಕ್ ಅವರ ಮನೆಯಲ್ಲಿ ಈಗ ಮದುವೆ ಸಂಭ್ರಮ !

 

ದಕ್ಷಿಣ ಭಾರತ ಚಿತ್ರರಂಗದ ರೆಬೆಲ್ ಸ್ಟಾರ್ ಅಂಬರೀಶ್ ಅವರ ಪತ್ನಿ ಹಿರಿಯ ನಟಿ ಸುಮಲತಾ. 3 ದಶಕಗಳಿಗೂ ಹೆಚ್ಚಿನ ಸಮಯದಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ ಈ ನಟಿ. ಗೌರವಾನ್ವಿತ ಪಾತ್ರಗಳನ್ನೇ ಆರಿಸಿಕೊಂಡು, ನೈಜ ಅಭಿನೇತ್ರಿ ಎನಿಸಿಕೊಂಡವರು ಸುಮಲತಾ. ಪತಿ ಅಂಬರೀಶ್ ನಿಧನದ ನಂತರ ಅಭಿಮಾನಿಗಳ ಮನವಿಯ ಮಣಿದು ಮಂಡ್ಯ ಕ್ಷೇತ್ರದಿಂದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ, ವಿಜಯ ಸಾಧಿಸಿದರು. ಚುನಾವಣೆಯಲ್ಲಿ ಗೆದ್ದ ದಿನದಿಂದಲೂ ಸಹ ಜನರ ಕಷ್ಟ ಆಲಿಸುತ್ತಾ, ಮಂಡ್ಯದ ಜನತೆಗೆ ಒಳ್ಳೆಯದನ್ನೇ ಮಾಡುತ್ತಿದ್ದಾರೆ ಸುಮಲತಾ.

ಸುಮಲತಾ ಅವರು ದಕ್ಷಿಣ ಭಾರತ ಚಿತ್ರರಂಗದ ಅತ್ಯಂತ ಸುಂದರವಾದ ನಟಿಯರಲ್ಲಿ ಒಬ್ಬರು, ಇವರು ಮೂಲತಃ ಆಂಧ್ರಪ್ರದೇಶದವರು, ಹುಟ್ಟಿ ಬೆಳೆದಿದ್ದು, ಓದಿದ್ದು ಎಲ್ಲವೂ ಅಲ್ಲಿಯೇ. ತೆಲುಗು ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿ, ನಾಯಕಿಯಾದ ನಂತರ ಕನ್ನಡ, ತಮಿಳು ಮತ್ತು ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಸಹ ನಟಿಸಿ ಎಲ್ಲಾ ಚಿತ್ರರಂಗದಲ್ಲೂ ಹೆಚ್ಚಿನ ಜನಪ್ರಿಯತೆ ಪಡೆದುಕೊಂಡರು. ಇಂದಿಗೂ ಸುಮಲತಾ ಅವರಿಗೆ ದೊಡ್ಡ ಫ್ಯಾನ್ ಬೇಸ್ ಇದೆ.

ರಾಜಕೀಯಕ್ಕೆ ಬಂದ ನಂತರ ಸುಮಲತಾ ಅವರು ಹೆಚ್ಚಾಗಿ ಸಿನಿಮಾಗಳಲ್ಲಿ ನಟಿಸುತ್ತಿಲ್ಲ. ಸಂಪೂರ್ಣವಾಗಿ ರಾಜಕೀಯದಲ್ಲೇ ಸಕ್ರಿಯರಾಗಿದ್ದಾರೆ. ಇನ್ನು ಇವರ ಅಭಿಷೇಕ್ ಸಹ ಮುಂದಿನ ಚುನಾವಣೆಯಲ್ಲಿ ಮಳವಳ್ಳಿ ಕ್ಷೇತ್ರದಿಂದ ಚುನಾವಣೆಯಲ್ಲಿ ಪಾಲ್ಗೊಳ್ಳುತ್ತಾರೆ ಎನ್ನಲಾಗುತ್ತಿದೆ. ಈ ಕಾರಣಕ್ಕಾಗಿ ಪ್ರಸ್ತುತ ಸುಮಲತಾ ಅವರು ಮಂಡ್ಯದಲ್ಲಿ ಹೊಸ ಮನೆ ಕಟ್ಟಿಸುತ್ತಿದ್ದಾರೆ. ಸಧ್ಯಕ್ಕೆ ಸುಮಲತಾ ಅವರು ದೆಹಲಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈ ನಡುವೆ ಒಂದು ಸಂತೋಷದ ಸುದ್ದಿಯನ್ನು ಹಂಚಿಕೊಂಡಿದ್ದಾರೆ.


 ಸುಮಲತಾ ಅವರ ಮನೆಯಲ್ಲಿ ಮದುವೆ ಸಂಭ್ರಮ ನಡೆಯುತ್ತಿದೆ. ಮೊದಲಿಗೆ ಎಲ್ಲರೂ ಫೋಟೋಗಳನ್ನು ನೋಡಿ ಅಭಿಷೇಕ್ ಅವರ ಮದುವೆ ಗೊತ್ತಾಗಿರಬಹುದೇ ಎಂದುಕೊಂಡರು. ಆದರೆ ಇದು ಸುಮಲತಾ ಅವರ ಸಹೋದರನ ಮಗನ ನಿಶ್ಚಿತಾರ್ಥದ ಫೋಟೋಗಳಾಗಿವೆ. ನಾನು ಎತ್ತಿ ಆಡಿಸಿದ ಮಗುವಿಗೆ ಮದುವೆ ಅಂದ್ರೆ ತುಂಬಾ ಸಂತೋಷ ಆಗುತ್ತೆ ಎಂದು ಸುಮಲತಾ ಅವರು ಪೋಸ್ಟ್ ಮಾಡಿದ್ದರು. ಈ ಪೋಸ್ಟ್ ಗೆ ಕಮೆಂಟ್ ಮಾಡುತ್ತಿರುವ ಅಭಿಮಾನಿಗಳು ಅಭಿಷೇಕ್ ಗೆ ಬೇಗ ಮದುವೆ ಮಾಡಿ ಎನ್ನುತ್ತಿದ್ದಾರೆ.