ಸಂಯುಕ್ತ ಹೆಗ್ಡೆ ಬಿಕಿನಿ ಫೋಟೋ ಪೋಸ್ಟ್ --- ನೆಟ್ಟಿಗರಿಗೆ ಟಾಂಗ್!

 

ನಟಿ ಸಂಯುಕ್ತ ಹೆಗ್ಡೆ, 2016 ರಲ್ಲಿ ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟರು. ಚಿಕ್ಕ ವಯಸ್ಸಿನಲ್ಲಿಯೇ ಯಶಸ್ಸು ಗಳಿಸಿದರು ಸಂಯುಕ್ತ. ಕಿರಿಕ್ ಪಾರ್ಟಿ ಸಿನಿಮಾ ದೊಡ್ಡ ಹಿಟ್ ಆಗಿ, ಸಂಯುಕ್ತ ಸಕತ್ ಫೇಮಸ್ ಆದರು.ನಿಜ ಜೀವನದಲ್ಲಿ ನಟಿ ಸಂಯುಕ್ತ ಬಹಳ ಬೋಲ್ಡ್ ಹಾಗೂ ಸ್ಟ್ರೈಟ್ ಫಾರ್ವರ್ಡ್. ಇದ್ದದ್ದನ್ನು ಇದ್ದ ಹಾಗೆ ಹೇಳುವ ಹುಡುಗಿ. ಇದರಿಂದಾಗಿಯೇ ಅನೇಕ ವಿವಾದಗಳಿಗೆ ಸಾಕ್ಷಿಯಾಗಿದ್ದಾರೆ.

ಸಂಯುಕ್ತ ಸ್ವಲ್ಪ ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಸಹ ಹೇಳಿದ್ದರು. ವಿವಾದದಿಂದಲೇ ಅಲ್ಲಿಂದ ಹೊರಬಂದಿದ್ದರು.
ಹಿಂದಿಯ ಫೇಮಸ್ ರಿಯಾಲಿಟಿ ಶೋ ರೋಡಿಸ್ ನಲ್ಲಿ ಸಹ ಸ್ಪರ್ಧಿಸಿದ್ದರು ಸಂಯುಕ್ತ. ಸಂಯುಕ್ತಾರಿಗೆ ಅಡ್ವೆಂಚರ್ ಎಂದರೆ ಬಹಳ ಇಷ್ಟ. ಇವರು ಮಾಡುವ ಅಡ್ವೆಂಚರಸ್ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಕ್ಕತ್ ವೈರಲ್ ಆಗುತ್ತವೆ.

ಹಾಗೆಯೇ ಇವರು ನೀಡುವ ಹೇಳಿಕೆಗಳು ಸಹ ಸಿಕ್ಕಾಪಟ್ಟೆ ವೈರಲ್ ಆಗುತ್ತವೆ. ಇದೀಗ ನಟಿ ಸಂಯುಕ್ತ ಹೆಗ್ಡೆ ಹಾಟ್ ಆಗಿ, ಬಿಕಿನಿ ಧರಿಸಿರುವ ಫೋಟೋ ಪೋಸ್ಟ್ ಮಾಡಿ, ನೆಟ್ಟಿಗರಿಗೆ ಟಾಂಗ್ ನೀಡಿದ್ದಾರೆ. ಸಂಯುಕ್ತ ಹೆಗ್ಡೆ ಸಣ್ಣ ಇರುವ ಕಾರಣ ಕೆಲವೊಮ್ಮೆ ಟ್ರೋಲ್ ಆಗಿದ್ದರು, ಹೊರನೋಟದಿಂದ ಯಾರನ್ನು ಜಡ್ಜ್ ಮಾಡಬೇಡಿ ಎಂದು ಈ ಪೋಸ್ಟ್ ಮೂಲಕ ತಿಳಿಸಿದ್ದಾರೆ ನಟಿ ಸಂಯುಕ್ತ ಹೆಗ್ಡೆ.