ಸಂತೋಷದ ಸುದ್ದಿ ಹಂಚಿಕೊಂಡ ರಿಷಬ್ ಶೆಟ್ಟಿ, ಏನದು ನೀವೇ ಓದಿ

ಚಂದನವನದ ಖ್ಯಾತ ನಿರ್ದೇಶಕರಲ್ಲಿ ಒಬ್ಬರು ರಿಷಬ್ ಶೆಟ್ಟಿ. ರಿಷಬ್ ಶೆಟ್ಟಿ ನಿರ್ದೇಶನ ಮಾಡಿದ ಕಿರಿಕ್ ಪಾರ್ಟಿ ಸಿನಿಮಾ ದೊಡ್ಡ ಮಟ್ಟದಲ್ಲಿ ಕ್ರೇಜ್ ಸೃಷ್ಟಿಸಿತ್ತು. ಹಲವು ಸಿನಿಮಾಗಳಲ್ಲಿ ಸಣ್ಣ ಪಾತ್ರಗಳಲ್ಲಿ ಸಹ ರಿಷಬ್ ಕಾಣಿಸಿಕೊಂಡಿದ್ದರು. ಈಗ ಚಂದನವನದ ಖ್ಯಾತ ನಟ ಮತ್ತು ನಿರ್ದೇಶಕ ಎನ್ನಿಸಿಕೊಂಡಿದ್ದಾರೆ ರಿಷಬ್. ಈ ವರ್ಷ ತೆರೆಕಂಡ ಹೀರೋ ಸಿನಿಮಾ ರಿಷಬ್ ಅವರಿಗೆ ಒಳ್ಳೆಯ ಹೆಸರು ತಂದುಕೊಟ್ಟಿತು.


 ರಿಷಬ್ ಶೆಟ್ಟಿ ಅವರ ವೈಯಕ್ತಿಕ ಜೀವನದ ವಿಚಾರಕ್ಕೆ ಬರುವುದಾದರೆ, ಕೆಲ ವರ್ಷಗಳ ಹಿಂದೆ ಪ್ರಗತಿ ಅವರನ್ನು ಇಷ್ಟಪಡಲು ಶುರು ಮಾಡಿದ ರಿಷಬ್, ಪ್ರಗತಿ ಅವರ ಜೊತೆಯಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ರಿಷಬ್ ಪ್ರಗತಿ ದಂಪತಿಗೆ ಒಬ್ಬ ಮುದ್ದಾದ ಮಗನಿದ್ದಾನೆ. ಇವರ ಮಗನ ಹೆಸರು Ranvit Shetty.. ಇದೀಗ ಈ ದಂಪತಿ ಅಭಿಮಾನಿಗಳಿಗೆ ಒಂದು ಗುಡ್ ನ್ಯೂಸ್ ಕೊಟ್ಟಿದ್ದಾರೆ.


ಅದೇನೆಂದರೆ ರಿಷಬ್ ಶೆಟ್ಟಿ ಮತ್ತು ಪ್ರಗತಿ ಶೆಟ್ಟಿ ಮತ್ತೊಮ್ಮೆ ತಂದೆ ತಾಯಿ ಆಗುತ್ತಿದ್ದಾರೆ. Ranvit Shetty ಅಣ್ಣ ಆಗುತ್ತಿದ್ದಾರೆ. ಕ್ ಸಂತೋಷದ ವಿಚಾರವನ್ನು ಪ್ರಗತಿ ಶೆಟ್ಟಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಮಂಗಳೂರಿನ ಬೀಚ್ ನಲ್ಲಿ ಸ್ಪೆಷಲ್ ಆಗಿ ಫೋಟೋಶೂಟ್ ಮಾಡಿಸಿ ಈ ಸಂತೋಷದ ಸುದ್ದಿಯನ್ನು ಶೇರ್ ಮಾಡಿಕೊಂಡಿದ್ದಾರೆ ರಿಷಬ್, ಪ್ರಗತಿ ದಂಪತಿ. ಇವರ ಕುಟುಂಬದ ಸುಂದರವಾದ ಫೋಟೋಗಳನ್ನು ನೋಡಿ.