ಕನ್ನಡ ವಾಹಿನಿಗಳು ಇದೀಗ ಸೀರಿಯಲ್’ಗಳ ಜೊತೆ ಭಿನ್ನ ಭಿನ್ನವಾದ ರಿಯಾಲಿಟಿ ಶೋಗಳನ್ನು ಆಯೋಜನೆ ಮಾಡಿ ಭಾರೀ ಯಶಸ್ಸು ಗಳಿಸುತ್ತಿದೆ. ಕನ್ನಡ ಜೀ ಕನ್ನದ ಅದೇ ರೀತಿ ಕಲರ್ಸ್ ಕನ್ನಡ ಹಲವಾರು ರಿಯಾಲಿಟಿ ಶೋಗಳನ್ನು ಪ್ರಸಾರ ಮಾದುತ್ತಿದೆ. ಅದರಲ್ಲೂ ಕಲರ್ಸ್ ಕನ್ನಡದಲ್ಲಿ ಬಿಗ್ ಬಾಸ್ ಶೋ ತುಂಬಾನೇ ಫೇಮಸ್ ಹಾಗೂ ಹೆಸರು ತಂದುಕೊಟ್ಟಂತಹ ರಿಯಾಲಿಟಿ ಶೋ. ಅದು ಮಾತ್ರ ಅಲ್ಲದೆ, ಮಜಾ ಟಾಕೀಸ್, ಕಾಮೆಡಿ ಕಿಲಾಡಿಗಳು ಅಲ್ಲದೆ ಸಿಂಗಿಂಗ್ ಶೋಗಳನ್ನು ಕೂಡ ನಡೆಸಿಕೊಟ್ಟಿತ್ತು. ಅದರಲ್ಲಿ ಒಂದು ಕನ್ನಡ ಕೋಗಿಲೆ.
ಬಿಗ್ ಬಾಸ್ ಸೀಸನ್ 5 ಮುಗಿದ ಬಳಿಕ ಶುರುವಾದ ಈ ಶೋನಲ್ಲಿ ಆ ಸೀಸನ್ ನ ಸ್ಪರ್ಧಿಗಳಾದ ಚಂದನಾ ಅನಂತ ಕೃಷ್ಣ ನಿರೂಪಕಿಯಾಗಿದ್ದರು. ಅದೇ ರೀತಿ ವಿನ್ನರ್ ಆಗಿದ್ದ ರ್ಯಾಪರ್ ಚಂದನ್ ಶೆಟ್ಟಿ ಹಾಗೂ ಸಂಗೀತ ನಿರ್ದೇಶಕ ಹಾಗೂ ಕಾಮೆಡಿ ನಟ ಸಾಧು ಕೋಕಿಲ, ಅದೇ ರೀತಿ ಗಾಯಕಿ ಅರ್ಚನಾ ಉಡುಪ ಅವರು ತೀರ್ಪುಗಾರರಾಗಿದ್ದರು. ಈ ಶೋ ಅನೇಕ ಸಂಗೀತ ಲೋಕದ ಪ್ರತಿಭೆಗಳಿಗೆ ಉತ್ತಮ ಭವಿಷ್ಯ ರೂಪಿಸಿದೆ. ಎಲ್ಲೆಲ್ಲೋ ಎಲೆ ಮರೆಯಂತಿದ್ದ ಸಂಗೀತಗಾರರನ್ನು ಈ ಶೋ ಜಗತ್ತಿಗೆ ಪರಿಚಯಿಸಿದೆ.
ಕನ್ನಡ ಕೋಗಿಲೆ ಶೋನಲ್ಲಿ ಅಖಿಲಾ ಅವರು ಹಳೆ ಹಾಡುಗಳನ್ನು ತಮ್ಮ ವಿಶೇಷ ಕಂಠ ಸಿರಿಯ ಮೂಲಕ, ಅದಕ್ಕೆ ವಿಶೇಷ ರೂಪ ಕೊಟ್ಟು ಹಾಡುತ್ತಿದ್ದರು. ಇವರ ಹಾಡುಗಳು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿತ್ತು. ಇವರು ಸಂಗಾತಿ ಅನ್ನುವ ಚಿತ್ರಕ್ಕೆ ಕವರ್ ಸಾಂಗ್ ಕೂಡ ಹಾಡಿದ್ದಾರೆ. ಅದೇ ರೀತ್ ಕನರ್ಸ್ ಕನ್ನಡದಲ್ಲಿಯೇ ಪ್ರಸಾರ ಆಗುತ್ತಿದ್ದ ಮುಂಜಾನೆಯ ರಾಗ ಅನ್ನುವ ರಿಯಾಲಿಟಿ ಶೋಗೆ ನಿರೂಪಕಿ ಆಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಇಂತಹ ಅದ್ಭುತ ಕಲಾವಿದೆ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವುದು ಎಲ್ಲರಿಗೂ ಖುಷಿ ಕೊಟ್ಟಿದ್ದು, ಅಭಿಮಾನಿಗಳು ಶುಭ ಹಾರೈಸಿದ್ದಾರೆ. ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ನಮಗೆ ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.