ಗಂಡಸರು ತಿಳಿಯಲೇ ಬೇಕು!

 

ಈ ಜಗತ್ತಿನಲ್ಲಿ ಸೃಷ್ಟಿಯಾದ ಪ್ರತಿಯೊಂದು ಜೀವಿಯೂ ಶ್ರೇಷ್ಟವೇ. ಒಂದೊಂದು ಜೀವಿಯ ಹಿಂದೆಯೂ ಈ ಜಗತ್ತಿಗೆ ಉಪಯೋಗ ಇದೆ. ಅದರಲ್ಲೂ ಈ ಹೆಣ್ಣು ಜನ್ಮ ತುಂಬಾನೇ ಪವಿತ್ರವಾದದ್ದು. ಹೆಣ್ಣನ್ನು ದೇವತೆ ಅನ್ನುತ್ತಾರೆ, ಮಗಳಾಗಿ, ಹೆಂಡತಿಯಾಗಿ, ತಾಯಿಯಾಗಿ ತನ್ನ ಜೀವನವನ್ನೇ ಪರರಿಗಾಗಿ ಮುಡಿಪಾಗಿಡುವ ಆಕೆಯ ಜನ್ಮ ತುಂಬಾನೇ ಶ್ರೇಷ್ಠವಾದದ್ದು. ಒಂದು ವೇಳೆ ಈ ಭೂಮಿಯಲ್ಲಿ ಹೆಣ್ಣು ಅನ್ನುವುದು ಇಲ್ಲದೇ ಹೋದರೆ ಈ ಜಗತ್ತೇ ನಾಶವಾಗುತ್ತಿತ್ತು.

ಈ ಭೂಮಿಯನ್ನು ಕೂಡ ಹೆಣ್ಣಿಗೆ ಹೋಲಿಸಲಾಗುತ್ತದೆ, ಭೂಮಿಯನ್ನು ತಾಯಿಯಂತೆ ಪೂಜಿಸುತ್ತೇವೆ. ಅದೇ ರೀತಿ ನಮ್ಮ ದೇಶವನ್ನು ಭಾರತ ಮಾತೆ ಅನ್ನುತ್ತೇವೆ. ನಮ್ಮ ದೇಶವೂ ತಾಯಿಯೇ. ನಾವು ಜೀವಿಸಿರುವುದು ಒಂದು ಹೆಣ್ಣಿನಿಂದ ಅನ್ನುವುದೇ ಇದರ ಅರ್ಥ. ಆದರೆ ಕೆಲ ಕೆಟ್ಟ ಗಂಡಸರು ಈ ಹೆಣ್ಣನ್ನು ನೀಚವಾಗಿ ಕಾಣುತ್ತದೆ. ತಮ್ಮ ತೃಷೆಗಾಗಿ, ಹೆಣ್ಣುಮಕ್ಕಳನ್ನು ಕೆಟ್ಟದಾಗಿ ನೋಡಿ ಅತ್ಯಾಚಾರ ಮಾಡಿ ಆಕೆಯ ಜೀವನವನ್ನೇ ಹಾಳು ಮಾಡುತ್ತಾರೆ.ಎಲ್ಲಾದರೂ ಗುಂಪಲ್ಲಿ ಹೋಗುವಾಗ, ಜನ ಸಂದಣಿ ಇರುವಾಗ ಕೆಲ ಗಂಡಸರು ಬೇಕು ಬೇಕಂತಲೇ ಹೆಣ್ಣಿನ ಎದೆ ಮುಟ್ಟಿಕೊಂಡು ಹೋಗುತ್ತಾರೆ. ಆದರೆ ಆ ಗಂಡಸರು ತಾನು ತನ್ನ ತಾಯಿಯ ಅದೇ ಎದೆಯಿಂದ ಹಾಲು ಕುಡಿದು ಬಂದು ಬದುಕಿದ್ದೇನೆ ಅನ್ನುವುದನ್ನು ಮರೆತು ಬಿಡುತ್ತಾರೆ. ಅದರ ಬದಲು ಆ ಹೆಣ್ಣಿನ ಅಂಗವನ್ನು ಕೆಟ್ಟದಾಗಿ ನೋಡುವ ಬದಲು ಆಕೆಗೆ ಗೌರವ ಕೊಟ್ಟರೆ, ರಸ್ತೆಯಲ್ಲಿ ಓಡಾಡುವ ಹೆಣ್ಣು ಮಕ್ಕಳನ್ನು ಅಕ್ಕ ತಂಗಿಯಂತೆ ನೋಡಿದರೆ ನಿಜಕ್ಕೂ ಆತ ಮಹಾನ್ ಅನ್ನಿಸಿಕೊಳ್ಳುತ್ತಾನೆ. ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ನಮಗೆ ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.