ತಮನ್ನಾ, ಸಮಂತಾ ನೀವು ಕೂಡಾ ಎಲ್ಲ ತೋರಿಸುತ್ತಿರಾ ಎಂದು ಕೇಳಿದ ನಿರ್ಮಾಪಕನಿಗೆ ಸಾಯಿ ಪಲ್ಲವಿ ಉತ್ತರ ಕೇಳಿ.....ಎದ್ದು ನಿಲ್ಲುತ್ತದೆ

 

ಸಾಯಿ ಪಲ್ಲವಿ ಇವರು ದಕ್ಷಿಣ ಭಾರತದ ಪ್ರತಿಭಾವಂತ ನಟಿಯರಲ್ಲಿ ಒಬ್ಬರು. ಸಾಯಿ ಪಲ್ಲವಿಯವರು ನಟನೆ, ಡ್ಯಾನ್ಸ್ ಅದೇ ರೀತಿ ಸರಳತೆಯಿಂದಾಗಿ ಅತ್ಯಂತ ಕಡಿಮೆ ಅವಧಿಯಲ್ಲಿ ಬಹುದೊಡ್ಡ ಅಭಿಮಾನಿ ವರ್ಗವನ್ನು ಪಡೆದುಕೊಂಡಿದ್ದಾರೆ. ಸಾಯಿ ಪಲ್ಲವಿ ಅಂತಲೇ ಫೆಅಮ್ಸ್ ಆಗಿರುವ ಇವರ ನಿಜವಾದ ಹೆಸರು ಸೆಂತಮರಾಯಿ ಎಂದು, ಇವರು ತಮಿಳು, ತೆಲುಗು, ಮಲಯಳಂ ಭಾಷೆಯ ಚಿತ್ರಗಳಲ್ಲಿ ನಟಿಸುತ್ತಿರುವ ಬಹು ಬೇಡಿಕೆಯ ನಟಿ. ಇವರ ಪ್ರೇಮಂ ಮತ್ತು ಫಿದಾ ಚಿತ್ರಕ್ಕೆ ಎರಡು ಫಿಲ್ಮ್ ಫೇರ್ ಪ್ರಶಸ್ತಿ ಬಂದಿದೆ.

ಮಲಯಾಳಂನ ಪ್ರೇಮಂ ಚಿತ್ರದಲ್ಲಿನ ಮಲಾರ್ ಪಾತ್ರದಿಂದಾಗಿಯೇ ಸಾಯಿ ಪಲ್ಲವಿ ಅವರು ಹಿಟ್ ಆಗಿದ್ದು. ಆ ನಂತರ ಕಾಳಿ ಚಿತ್ರದಲ್ಲಿ ದುಲ್ಕರ್ ಸಲ್ಮಾನ್ ಜೊತೆ ನಟಿಸಿದ್ದರು. ಇನ್ನು ಇವರು ತೆಲುಗಿಗೆ ಎಂಟ್ರಿ ಕೊಟ್ಟಿದ್ದು, ಫಿದಾ ಚಿತ್ರದ ಭಾನುಮತಿ ಪಾತ್ರ ಮಾಡುವುದರ ಮೂಲಕ. ಇನ್ನು ತಮಿಳು ಚಿತ್ರರಂಗಕ್ಕೆ ದಿಯಾ ಚಿತ್ರದ ಮೂಲಕ ಪ್ರವೇಶ ಮಾಡಿದ್ದರು. 1992 ರ ಮೇ 9 ರಂದು ತಮಿಳುನಾಡಿನ ಕೋಟಗಿರಿಯಲ್ಲಿ ಜನಿಸಿರುವ ಇವರು ಮೂಲತಃ ಒಬ್ಬ ವೈದ್ಯೆ. ಇವರು ಎಂಬಿಬಿಎಸ್ ಪದವಿ ಮುಗಿಸಿದ್ದಾರೆ.

ಅಷ್ಟೇ ಅಲ್ಲ ಇವರು ನೃತ್ಯ ತರಬೇತಿ ಕೂಡ ಪಡೆದು, ಆನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಹೀಗೆ ಅಧ್ಬುತ ಪ್ರತಿಭೆ ಹೊಂದಿರುವ ಸಾಯಿ ಪಲ್ಲವಿ ಅನೇಕ ಹುಡುಗರ ಕ್ರಷ್ ಕೂಡ ಹೌದು. ಯಾವುದೇ ಮೇಕಪ್ ಇಲ್ಲದೆ, ತುಂಬಾ ಸಿಂಪಲ್ ಆಗಿ ಕಾಣಿಸಿಕೊಳ್ಳುವ ಸಾಯಿ ಪಲ್ಲವಿ ಒಂದೇ ನೋಟದಲ್ಲಿ ಎಲ್ಲರನ್ನೂ ಬರಸೆಳೆಯುವ ಗುಣ ಹೊಂದಿದ್ದಾರೆ. ಯಾವುದೇ ಗ್ಲಾಮರ್, ಎಕ್ಸ್ ಪೋಸಿಂಗ್ , ಟ್ರೋಲ್ ಎಂದು ಗಾಸಿಪಿ ಮಾಡಿಕೊಳ್ಳದ ನಟಿ ಅಂದರೆ ಅದು ಸಾಯಿ ಪಲ್ಲವಿ. ತುಂಬಾ ಸಿಂಪಲ್ ಪಾತ್ರದ ಮೂಲಕ ಸ್ಟಾರ್ ನಟಿಯರಿಗ್ ಟಕ್ಕರ್ ನೀಡುತ್ತಿದ್ದಾರೆ.

ಇದೀಗ ನಾನಿ ಅಭಿನಯದ ಶ್ಯಾಮ್ ಸಿಂಗ್ ರಾಯ್ ನಲ್ಲಿ ನಾಯಕಿಯಾಗಿ ಸಾಯಿ ಪಲ್ಲವಿ ಅಭಿನಯಿಸಿದ್ದು, ಈ ಚಿತ್ರಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಹಾಗೆ ಈ ಚಿತ್ರದ ಕುರಿತಾಗಿ ನಡೆದ ಸಂದರ್ಶನಗಳಲ್ಲಿ ಹಾಗೇ ಸೋಶಿಯಲ್ ಮೀಡಿಯಾಗಳಲ್ಲಿ ಸಾಯಿ ಪಲ್ಲವಿ ಅವರಿಗೆ ಅನೇಕ ಪ್ರಶ್ನೆಗಳು ಎದುರಾಗಿದೆ. ಅದರಂತೆ ನಟಿ ಸಮಂತಾ , ಪೂಜಾ ಹೆಗ್ಡೆ ಇವರೆಲ್ಲಾ ಐಟಂ ಸಾಂಗ್’ಗೆ ಹೆಜ್ಜೆ ಹಾಕಿದ್ದಾರೆ. ಅದರಂತೆ ನೀವು ಕೂಡ ಐಟಂ ಸಾಂಗ್’ಗೆ ಕುಣಿಯುತ್ತೀರಾ? ಎಂದು ಕೇಳಿದ್ದಾರೆ.

ಇದಕ್ಕೆ ಬೋಲ್ಡ್ ಆಗಿಯೇ ಉತ್ತರಿಸಿರುವ ಸಾಯಿ ಪಲ್ಲವಿ, ’ನಾನು ಕಂಫರ್ಟ್ ಇರುವ ಹಾಡಿಗೆ ಡ್ಯಾನ್ಸ್ ಮಾಡುತ್ತೇನೆ, ನಾನು ಆಯ್ಕೆ ಮಾಡುವ ಹಾಡು ಬೇರೆಯೇ ಇರುತ್ತದೆ, ಈ ಸ್ಪೆಷಲ್ ಹಾಡು ಬೇರೆಯೇ ಇರುತ್ತದೆ, ಹಾಗಾಗಿ ನಾನು ಈ ಸ್ಪೆಷಲ್ ಹಾಡಿಗೆ ಕಂಫರ್ಟ್ ಅಲ್ಲ’ ಎಂದು ಹೇಳಿದ್ದಾರೆ. ಇದೀಗ ನಟಿ ಮಣಿಯರು ಐಟಂ ಸಾಂಗ್’ಗೆ ಹೆಜ್ಜೆ ಹಾಕಲು ತಾ ಮುಂದು ನಾ ಮುಂದು ಅನ್ನುವಾಗ ಸಾಯಿ ಪಲ್ಲವಿ ಅವರು ಈ ರೀತಿ ಹೇಳಿದ್ದು ನಿಜಕ್ಕೂ ಅವರ ಮೇಲಿನ ಗೌರವ ಇನ್ನಷ್ಟು ಹೆಚ್ಚಿಸಿದೆ.