ಶಿವಣ್ಣನ ಒಳಿತಿಗಾಗಿ ಗೀತಾಕ್ಕ ಮಾಡಿರುವ ಕೆಲಸ ನೋಡಿ! ಏನು ಮಾಡಿದ್ದಾರೆ ಗೊತ್ತಾ?

 

ಸಿನಿಮಾ ಜಗತ್ತಿನಲ್ಲಿ ಡಾ ರಾಜ್ ಕುಮಾರ್ ಕುಟುಂಬಕ್ಕಿರುವ ಮರ್ಯಾದೆಯೇ ಬೇರೆ. ದೊಡ್ಮನೆ ಕುಟುಂಬವನ್ನು ಪ್ರತಿಯೊಬ್ಬರೂ ಆರಾಧಿಸುತ್ತಾರೆ, ಪ್ರೀತಿಸುತ್ತಾರೆ. ಅದಕ್ಕೆ ಕಾರಣ ಡಾ ರಾಜ್ ಕುಮಾರ್ ಅವರು ನಡೆದುಕೊಂಡು ಬಂದ ದಾರಿ. ಅವರು ಸಿನಿಮಾ ಜಗತ್ತಿನಲ್ಲಾಗಲಿ ಅಥವಾ ಹೊರ ಪ್ರಪಂಚದಲ್ಲಾಗಲಿ ಎಲ್ಲಿಯೂ ಕೇಡು ಬಯಸಿದವರಲ್ಲ, ಪ್ರತಿಯೊಬ್ಬರ ಒಳಿತನ್ನೇ ಬಯಸಿದ ಅವರಿಗೆ ಅಪಾರ ಸಂಖ್ಯೆ ಅಭಿಮಾನಿಗಳಿದ್ದರು.

ಇನ್ನು ರಾಜ್ ಕುಮಾರ್ ಅವರ ಯಶಸ್ಸು ಅದೇ ರೀತಿ ಅವರು ನಡೆದು ಬಂದ ದಾರಿಯಿಂದಾಗಿ ಅವರು ಎಲ್ಲೇ ಹೋದರೂ ಸಾವಿರಾರು ಸಂಖ್ಯೆಯಲ್ಲಿ ಜನ ಸೇರುತ್ತಿದ್ದರು. ಇದೇ ಕಾರಣಕ್ಕಾಗಿ ಅವರನ್ನು ರಾಜಕೀಯವಾಗಿ ಬಳಸಿಕೊಳ್ಳಲು ಅನೇಕ ಪ್ರಯತ್ನಗಳು ನಡೆದಿದ್ದವು. ಆದರೆ ಅಣ್ಣಾವ್ರು ಮಾತ್ರ ರಾಜಕೀಯದಿಂದ ದೂರ ಉಳಿದಿದ್ದರು. ಡಾ ರಾಜ್ ಕುಮಾರ್ ಗೆ ಅಧ್ಬುತ ಅವಕಾಶ ಇದ್ದರೂ ಕೂಡ, ನನಗೆ ರಾಜಕೀಯ ಬೇಡ, ಅದರಲ್ಲಿ ಸ್ವಾರ್ಥ ಇದೆ, ರಾಜ ತಂತ್ರ ಬಳಸಬೇಕಾಗುತ್ತದೆ.

ಅದು ನನಗೆ ಬರುವುದಿಲ್ಲ, ಹಾಗಾಗಿ ಅದು ಬೇಡ ಎಂದು ಅದೆಷ್ಟೇ ಆಫರ್ ಬಂದರೂ ಅದನ್ನು ತಿರಸ್ಕರಿಸಿದ್ರು. ಅವರು ಮಾತ್ರ ಅಲ್ಲ ತನ್ನ ಮಕ್ಕಳಿಗೂ ಅದನ್ನೇ ಹೇಳಿಕೊಟ್ಟಿದ್ದರು. ನಮ್ಮದು ಸಿನಿಮಾ ಕ್ಷೇತ್ರ, ಕಲಾವಿದರು ನಾವು, ರಾಜಕೀಯ ನಮಗೆ ಸರಿ ಹೊಂದಲ್ಲ ಎಂದು ಹೇಳುತ್ತಾ ಮಕ್ಕಳನ್ನು ಬೆಳೆಸಿದ್ದರು. ಆದರೆ ಇದನ್ನೆಲ್ಲಾ ಬ್ರೇಕ್ ಮಾಡಿದ್ದು, ಶಿವರಾಜ್ ಕುಮಾರ್ ಅವರ ಪತ್ನಿ ಗೀತಾ ಶಿವರಾಜ್ ಕುಮಾರ್. ಅದಕ್ಕೆ ಕಾರಣ ಅವರದ್ದು ರಾಜಕೀಯ ಹಿನ್ನೆಲೆ ಇದ್ದ ಕುಟುಂಬ.

ಸಿಎಂ ಆಗಿದ್ದಂತಹ ಬಂಗಾರಪ್ಪರ ಮಗಳು ಗೀತಾ ಶಿವರಾಜ್ ಕುಮಾರ್, ಅದೇ ರೀತಿ ತಮ್ಮಂದಿರಾದ ಮಧು ಬಂಗಾರಪ್ಪ, ಕುಮಾರ್ ಬಂಗಾರಪ್ಪ ಕೂಡ ರಾಜಕೀಯದಲ್ಲಿದ್ದರು. ಹೀಗಾಗಿ ಗೀತಾ ಶಿವರಾಜ್ ಕುಮಾರ್ ಅವರು 2014 ರಲ್ಲಿ ಜೆಡಿಎಸ್ ಪಕ್ಷದಿಂದ ಕಣಕ್ಕಿಳಿದಿದ್ದರು. ಈ ವೇಳೆ ಶಿವರಾಜ್ ಕುಮಾರ್ ಸೇರಿದಂತೆ ಎಲ್ಲಾ ಸಿನಿಮಾ ಕಲಾವಿದರು ಪ್ರಚಾರ ಕಾರ್ಯಕಕ್ಕೆ ಬಂದರೂ ಪುನೀತ್ ಆಗಲಿ ರಾಘಣ್ಣ ಆಗಲಿ ಎಲ್ಲಿಯೂ ಕಾಣಿಸಿರಲಿಲ್ಲ.

ಹೀಗಾಗಿ ಅನೇಕರು ಪ್ರಶ್ನೆ ಮಾಡಿದಾಗ, ರಾಘಣ್ಣ ಅವರಿಗೆ ಅನಾರೋಗ್ಯ ಇದೆ, ಪುನೀತ್ ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ ಅಂತ ಶಿವಣ್ಣ ಹೇಳಿದ್ದರು. ಆದರೆ ಎಲ್ಲರಿಗೂ ಈ ಉತ್ತರ ಸಮಧಾನ ಕೊಟ್ಟಿರಲಿಲ್ಲ, ಎಲ್ಲಿಯೂ ಗೀತಾ ಅವರ ಪರವಾಗಿ ಶಿವಣ್ಣ ಬಿಟ್ಟರೆ ಬೇರೆ ಯಾರೂ ಒಂದು ಮಾತು ಕೂಡ ಆಡಿರಲಿಲ್ಲ. ಹೀಗಾಗಿ ದೊಡ್ಮನೆ ಕುಟುಂಬದವರಿಗೆ ಗೀತಾ ಅವರ ರಾಜಕೀಯ ಎಂಟ್ರಿ ಸಮಧಾನ ಇರಲಿಲ್ಲ ಅನ್ನುವುದು ಮೇಲ್ನೋಟಕ್ಕೆ ತಿಳಿದು ಬರುತ್ತದೆ. ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ನಮಗೆ ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.