ಚಂದ್ರಕಲಾ ಕಿರುತೆರೆ 50ನೇ ಸೀರಿಯಲ್ ಒಪ್ಪಿಕೊಂಡಿದ್ದಾರೆ, ಪಾತ್ರ ಯಾವುದು ಗೊತ್ತಾ ನಿಮಗೆ!

 ಕಲರ್ಸ್ ಕನ್ನಡ ವಾಹಿನಿಯಲ್ಲಿ ಕೆಲ ವರ್ಷಗಳ ಹಿಂದೆ ಪ್ರಸಾರವಾಗುತ್ತಿದ್ದ ಧಾರಾವಾಹಿ ಪುಟ್ಟಗೌರಿ ಮದುವೆ. ಈ ಧಾರಾವಾಹಿ ಕನ್ನಡ ಕಿರುತೆರೆ ವೀಕ್ಷಕರಲ್ಲಿ ಬಹಳ ಜನಪ್ರಿಯತೆ ಗಳಿಸಿತ್ತು. ನಟಿ ರಂಜನಿ ರಾಘವನ್ ಮತ್ತು ರಕ್ಷ್ ನಟಿಸಿದ ಮೊದಲ ಧಾರಾವಾಹಿ ಆಗಿತ್ತು ಪುಟ್ಟಗೌರಿ ಮದುವೆ. ಈ ಧಾರಾವಾಹಿ ಜನಪ್ರಿಯತೆ ಮತ್ತು ಟಿ.ಆರ್.ಪಿ ಎರಡರಲ್ಲು ನಂಬರ್ 1 ಸ್ಥಾನ ಪಡೆದಿತ್ತು. ಪುಟ್ಟಗೌರಿ ಮದುವೆ ಧಾರಾವಾಹಿ ಹಿಂದಿ ಭಾಷೆಯ ಬಾಲಿಕಾ ವಧು ಧಾರಾವಾಹಿಯ ಕನ್ನಡ ರಿಮೇಕ್ ಆಗಿತ್ತು. ಚಂದ್ರಕಲಾ ಮೋಹನ್ ಅವರು ಈಗ ವಿಶೇಷ ಪಾತ್ರದ ಮೂಲಕ ಕಿರುತೆರೆಗೆ ಮತ್ತೊಮ್ಮೆ ಬರುತ್ತಿದ್ದಾರೆ.


ಪುಟ್ಟಗೌರಿ ಧಾರಾವಾಹಿಯ ಮೂಲಕ ಅತಿಹೆಚ್ಚು ಜನಪ್ರಿಯತೆ ಪಡೆದಿದ್ದು ಅಜ್ಜಮ್ಮ ಪಾತ್ರ. ಈ ಪಾತ್ರದ ಗತ್ತು, ಗಾಂಭೀರ್ಯ, ಮಾತು, ನಡವಳಿಕೆ, ಆಕೆ ತೆಗೆದುಕೊಳ್ಳುವ ನಿರ್ಧಾರ ಎಲ್ಲವೂ ಕೂಡ ಕಿರುತೆರೆ ವೀಕ್ಷಕರಿಗೆ ಬಹಳ ಮೆಚ್ಚುಗೆ ಆಗಿತ್ತು. ಅಜ್ಜಮ್ಮನ ಪಾತ್ರ ಬಹಳ ವಯಸ್ಸಾದ ಪಾತ್ರ, ಆದರೆ ಈ ಪಾತ್ರ ನಿರ್ವಹಿಸಿದವರು ಮಧ್ಯವಯಸ್ಕರಾದ ಚಂದ್ರಕಲಾ ಮೋಹನ್ ಅವರು. ಪುಟ್ಟಗೌರಿ ಧಾರಾವಾಹಿಗೂ ಮೊದಲು ಕೃಷ್ಣ ರುಕ್ಮಿಣಿ ಸೇರಿದಂತೆ ಹಲವಾರು ಸೂಪರ್ ಹಿಟ್ ಧಾರಾವಾಹಿಗಳಲ್ಲಿ ಇವರು ಅಭಿನಯಿಸಿದ್ದರು. ಆದರೆ ಅತಿಹೆಚ್ಚಿನ ಜನಪ್ರಿಯತೆ ತಂದುಕೊಟ್ಟಿದ್ದು ಮಾತ್ರ ಪುಟ್ಟಗೌರಿ ಮದುವೆ ಖ್ಯಾತಿಯ ಅಜ್ಜಮ್ಮ ಪಾತ್ರ.

ಪುಟ್ಟಗೌರಿ ನಂತರ ಕಮಲಿ ಧಾರವಾಹಿಯಲ್ಲಿ ನಟಿಸುತ್ತಿದ್ದರು. ನಂತರ ಈ ವರ್ಷ ಬಿಗ್ ಬಾಸ್ ಕನ್ನಡ ಸೀಸನ್ 8ರ ಸ್ಪರ್ಧಿಯಾಗಿ ಮನೆಯೊಳಗೆ ಪ್ರವೇಶ ಮಾಡಿದ ಚಂದ್ರಕಲಾ ಅವರು, 4 ವಾರಗಳ ಕಾಲ ಮನೆಯಲ್ಲಿದ್ದರು. ಮನೆಯಲ್ಲಿ ಇದ್ದಷ್ಟು ದಿನ ಅಡುಗೆ ಮಾಡುತ್ತಾ, ಎಲ್ಲರ ಜೊತೆ ಬೆರೆಯುತ್ತಾ, ಹಾಡು ಹಾಡುತ್ತಾ, ಎಲ್ಲರಿಗು ತಾಯಿಯ ಹಾಗೆ ಅಕ್ಕನ ಹಾಗೆ ತಿನ್ನಲು ರುಚಿಯಾದ ಅಡುಗೆ ಮಾಡುತ್ತಾ ಇದ್ದರು. ಕೆಲವು ಬಾರಿ ಜಗಳಕ್ಕು ಸಿಕ್ಕಿಹಾಕಿಕೊಂಡಿದ್ದರು.

ಇದೀಗ ಚಂದ್ರಕಲಾ ಮೋಹನ್ ಅವರು ಮತ್ತೊಂದು ವಿಶೇಷವಾದ ಪಾತ್ರದ ಮೂಲಕ ಕಿರುತೆರೆಗೆ ಬರುತ್ತಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ ಪುರಂಧರ ದಾಸರ ಕಥೆ, “ದಾಸ ಪುರಂಧರ” ದಲ್ಲಿ ವಿಶೇಶ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಚಂದ್ರಕಲಾ ಮೋಹನ್. ತಮ್ಮ ಹೊಸ ಪಾತ್ರದ ಬಗ್ಗೆ ಇನ್ಸ್ಟಾಗ್ರಾಮ್ ಮೂಲಕ ಅಭಿಮಾನಿಗಳ ಜೊತೆ ಶೇರ್ ಮಾಡಿಕೊಂಡಿದ್ದಾರೆ.

“ಎಲ್ಲರಿಗು ಹೊಸ ವರ್ಷದ ಶುಭಾಶಯಗಳು. ಹೊಸ ವರುಷ ಹೊಸ ಪಾತ್ರ. ಇದು ನನ್ನ ಮೊದಲನೆ ಐತಿಹಾಸಿಕ ಪಾತ್ರ ಮತ್ತು ಸೀರಿಯಲ್ ಪಯಣದ 5೦ ನೇ ಧಾರವಾಹಿ. ಕರ್ನಾಟಕ ಸಂಗೀತ ಪಿತಾಮಹ ಪುರಂದರ ದಾಸರ ಕಥೆ ‘ದಾಸ ಪುರಂದರ’ ನಿಮ್ಮ ಕಲರ್ಸ್ ಕನ್ನಡದಲ್ಲಿ. 5೦ ಧಾರಾವಾಹಿಯ ಪಯಣದಲ್ಲಿ ನನ್ನನ್ನು ಪ್ರೋತ್ಸಾಹಿಸಿ ಬೆಳೆಸಿದ ಅಭಿಮಾನಿ ದೇವರುಗಳಿಗೆ ನಾನು ಚಿರರುಣಿ..” ಎಂದು ಬರೆದುಕೊಂಡಿದ್ದಾರೆ ಚಂದ್ರಕಲಾ ಮೋಹನ್.