ತಿಳಿದರೆ ಶಾಕ್ ಆಗೋದು ಪಕ್ಕಾ!

 

ಸ್ಯಾಂಡಲ್ ವುಡ್’ದಲ್ಲಿ ಬ್ಲ್ಯಾಕ್ ಕೋಬ್ರಾ, ಕರಿ ಚಿರತೆ ಎಂದೇ ಹೆಸರು ಪಡೆದ ನಟ ಅಂದರೆ ಅದು ದುನಿಯಾ ವಿಜಯ್. ಸಾಮಾನ್ಯವಾಗಿ ಕನ್ನಡ ಚಿತ್ರರಂಗದಲ್ಲಿ ಒಬ್ಬ ನಟ ಸೂಪರ್ ಹಿಟ್ ಸಿನಿಮಾ ಕೊಟ್ಟರೆ ನಂತರ ಅವನ ಹೆಸರಿನ ಮುಂದೆ ಆ ಚಿತ್ರದ ಹೆಸರು ಇಡಲಾಗುತ್ತದೆ. ಅದರಂತೆ ಕಿಚ್ಚ ಸುದೀಪ್, ದಾಸ ದರ್ಶನ್, ಮುಂಗಾರು ಮಳೆ ಗಣೇಶ್, ಅದೇ ರೀತಿ ದುನಿಯಾ ವಿಜಯ್ ಅನ್ನುವ ಹೆಸರು. ವಿಜಯ್ ಅವರು ನಟಿಸಿದ ದುನಿಯಾ ಚಿತ್ರ ಇಡೀ ಚಿತ್ರರಂಗವನ್ನೇ ಅಲ್ಲಾಡಿಸಿಬಿಟ್ಟಿತ್ತು, ನಂತರ ಕರಿಯ ಚಿತ್ರ ಕೂಡ ಅದೇ ರೀತಿ ಹಿಟ್ ಆಗಿತ್ತು.

ಹೀಗೆ ಒಂದರ ಮೇಲೊಂದರಂತೆ ಸೂಪರ್ ಸಿನಿಮಾಗಳಲ್ಲಿ ನಟಿಸುತ್ತಾ ಬಂದಿರುವ ದುನಿಯಾ ವಿಜಯ್ ಇದೇ ಮೊದಲ ಬಾರಿಗೆ ಸಲಗ ಚಿತ್ರವನ್ನು ನಿರ್ದೇಶನ ಮಾಡಿ, ಅದರಲ್ಲಿ ನಟಿಸಿ ಅದೃಷ್ಟ ಪರೀಕ್ಷೆಯಲ್ಲಿ ಗೆದ್ದಿದ್ದಾರೆ. ಸಲಗ ಚಿತ್ರ ರಾಜ್ಯಾದ್ಯಂತ ಭಾರೀ ಮೆಚ್ಚುಗೆಗೆ ಪಾತ್ರವಾಗಿದ್ದು, ದುನಿಯಾ ವಿಜಿ ಬಂಪರ್ ಲಾಟರಿ ಹೊಡೆದಿದ್ದಾರೆ. ಇನ್ನು ದುನಿಯಾ ವಿಜಿ ಅವರು ತೆಲುಗಿಗೆ ಪಾದಾರ್ಪಣೆ ಮಾಡಿದ್ದು ಅಲ್ಲಿ ವಿಲನ್ ಆಗಿ ಒಂದು ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಅನ್ನುವ ಸುದ್ದಿಯೂ ಕೇಳಿ ಬಂದಿದೆ.

ಇನ್ನು ದುನಿಯಾ ವಿಜಯ್ ಅವರು ಕೀರ್ತಿ ಗೌಡ ಅವರನ್ನು ಸುಮಾರು ಐದು ವರ್ಷದ ಮೊದಲು ಮದುವೆ ಆಗಿದ್ದರು. ವಿಜಯ್ ಅವರ ಮೊದಲ ಹೆಂಡತಿಯ ಹೆಸರು ನಾಗರತ್ನ, ಇದೀಗ ಅವರಿಗೆ ವಿಚ್ಛೇದನ ನೀಡಿ ಕೀರ್ತಿ ಪಟ್ಟಡಿ ಜೊತೆ ಸಂಸಾರ ಮಾಡುತ್ತಿದ್ದಾರೆ. ಯಾವ ಸಿನಿಮಾ ನಟಿಯರಿಗೂ ಕಮ್ಮಿ ಇಲ್ಲದಂತಿರುವ ಕೀರ್ತಿ ಪಟ್ಟಡಿ ಮೂಲತಃ ಒಬ್ಬರು ಮಾಡೆಲ್, ತನ್ನ ಸಿನಿಮಾ ಕೆರಿಯರ್ ಅನ್ನು ನಟ ರಾಹುಲ್ ಜೊತೆ ’’ನನ್ನುಸಿರೇ” ಸಿನಿಮಾದಲ್ಲಿ ಎರಡನೇ ನಾಯಕಿಯಾಗುವ ಮೂಲಕ ಆರಂಭಿಸಿದ್ದರು.