ಅಬ್ಬಬ್ಬಾ ನೋಡಿ

 

ಒಂದು ವಯಸ್ಸಿಗೆ ತಕ್ಕನಾದ ಜೋಡಿ ಸಿಕ್ಕರೆ ಮಾತ್ರ ಅದು ಒಂದು ಪರಿಪಕ್ವವಾದ ಮದುವೆ ಅನ್ನಬಹುದು. ತನಗಿಂತ 10- 20 ವರ್ಷಕ್ಕಿಂತ ದೊಡ್ಡವಳಾದ ಪತ್ನಿ ಅದೇ ರೀತಿ ಚಿಕ್ಕವನಾದ ಪತಿಯನ್ನು ಮದುವೆ ಆದರೆ ಲೋಕದ ಕಣ್ಣಿಗೆ ಅವರು ವಿಶೇಷ ಜೋಡಿಗಳು ಅಂತ ಅನ್ನಿಸುತ್ತಾರೆಯೇ ವಿನಃ, ಸಹಜವಾಗಿ ಕಾಣಿಸುವುದಿಲ್ಲ. ಇನ್ನು ಕೆಲವರು ಇಳಿವಯಸ್ಸಿನಲ್ಲೂ ಮದುವೆಯ ಆಸೆಗೆ ಬಿದ್ದು ಪಡಬಾರದ ಕಷ್ಟ ಎದುರಿಸಿ ಎಲ್ಲದನ್ನೂ ಕಳೆದುಕೊಂಡು ಬಿಡುತ್ತಾರೆ. ಇದೇ ರೀತಿ 60 ವರ್ಷದ ಮುದುಕ ಮದುವೆಯಾಗಿ ಇರಲಾರದೆ ಇರುವೆ ಬಿಟ್ಟುಕೊಂಡಿದ್ದಾನೆ.

ಹೌದು ಗೆಳೆಯರೇ, ರೂಪ್ ದಾಸ್ ಅನ್ನುವ ಮುದುಕ ತನ್ನ ಮೊದಲ ಪತ್ನಿ ತೀರಿಕೊಂಡ ನಂತರ ಒಬ್ಬಂತಿಯಾಗಿಯೇ ಜೀವನ ಮಾಡುತ್ತಿದ್ದ. ರೂಪದಾಸ್ ಬಳಿ ಉಣ್ಣಲು ತಿನ್ನಲು ಏನೂ ಕೊರತೆ ಇರಲಿಲ್ಲ, ಅಪಾರ ಆಸ್ತಿಯ ಒಡೆಯನೂ ಆಗಿದ್ದ. ಆದರೆ ಆತನಿಗೆ ಒಂಟಿ ಜೀವನ ಸಾಕಾಗಿ ಹೋಗಿತ್ತು. ಜೊತೆಗೆ ಯಾರಾದರೂ ಬೇಕು ಅನ್ನಿಸುತ್ತಿತ್ತು. ಹೀಗಾಗಿ 60 ವಯಸ್ಸಾದರೂ ಮದುವೆ ಆಗುವ ಮನಸ್ಸಾಗಿ, ಮ್ಯಾಟ್ರಿಮೋನಿಯಲ್ಲಿ 3000 ಮೊತ್ತ ಕಟ್ಟಿ ನೋಂದಣಿ ಮಾಡಿಸಿ, ತನ್ನ ಪ್ರೊಫೈಲ್ ಹಾಕಿಯೇ ಬಿಟ್ಟ. ನನ್ನನ್ನು ಮದುವೆ ಆದರೆ ನನ್ನ ಆಸ್ತಿಯ ಜೊತೆ ಸಂಸಾರದ ಸುಖ ಸಿಗುತ್ತದೆ ಎಂದು ತನ್ನೆಲ್ಲಾ ವಿವರ ಹಾಕಿ ಮ್ಯಾಟ್ರಿಮೋನಿಯಲ್ಲಿ ಹಾಕಿದ್ದ.

ಹೀಗೆ ರೂಪದಾಸ್ ಪ್ರೊಫೈಲ್ ನೋಡಿದ 35 ವರ್ಷದ ಸುಂದರ ಯುವತಿ ತಾನು ಮದುವೆ ಆಗುವುದಾಗಿ ಹೇಳಿ ಮುಂದೆ ಬಂದಿದ್ದಳು. ರೂಪದಾಸ್ ಖುಷಿಗೆ ಪಾರವೇ ಇರಲಿಲ್ಲ. ಯಾಕಂದರೆ ಅವಳು ಅಷ್ಟೊಂದು ಸುಂದರವಾಗಿದ್ದಳು, ಬೇರೆನೂ ಯೋಚನೆ ಮಾಡದೆ ಅದ್ದೂರಿಯಾಗಿ ಮದುವೆ ಆಗಿಯೇ ಬಿಟ್ಟ. ಪತ್ನಿಗೆ ಯಾವುದೇ ಕೊರತೆ ಉಂಟಾಗದಂತೆ ಮಗುವಿನಂತೆ ನೋಡಿಕೊಳ್ಳುತ್ತಿದ, ಹೀಗೆ ಸ್ವಲ್ಪ ಸಮಯ ಹೋಯ್ತು.