ಸಮಂತಾ ಪುಷ್ಪ ಹಾಡೊಂದರ ಮೇಕಿಂಗ್ ವಿಡಿಯೋದಲ್ಲಿ ಹಾಟ್! ನೋಡಿದ್ರೆ ಮೈ ರೋಮ ಎದ್ದು ನಿಲ್ಲುತ್ತದೆ ನೋಡಿ

 

ಇತ್ತೀಚಿನ ಹೊಸ ಹೊಸ ಸಿನಿಮಾಗಳಲ್ಲಿ ಅದರ ಕಥೆಗಿಂತ ಅದರಲ್ಲಿನ ಹಾಡುಗಳೇ ಹಿಟ್ ಆಗಿ ಬಿಡುತ್ತವೆ. ಉದಾಹರಣೆಗೆ ರಾಬರ್ಟ್ ಸಿನಿಮಾದ ಕಣ್ಣೇ ಅದಿದೆಂಡಿ ಹಾಡು ಭಾರೀ ಫೇಮ್ ಪಡೆದಿತ್ತು. ಖ್ಯಾತ ಗಾಯಕಿ ಹಾಡಿರುವ ಆ ಹಾಡು ಹೆಚ್ಚಿನವರ ಸ್ಟೇಟಸ್, ಕಾಲರ್ ಟ್ಯೂನ್ ಆಗಿತ್ತು. ಅದೇ ರೀತಿ ಏಕ್ ಲವ್ ಯಾ ಸಿನಿಮಾದ ಎಣ್ಣೆಗೂ ಹೆಣ್ಣಿಗೂ ಕೂಡ ಭಾರೀ ಟ್ರೆಂಡ್ ಕ್ರಿಯೇಟ್ ಮಾಡಿದೆ. ಇದು ಕೂಡ ಮಂಗ್ಲಿ ಅವರೇ ಹಾಡಿರುವ ಹಾಡು. ಅದೇ ರೀತಿ ಪ್ಯಾನ್ ಇಂಡಿಯಾ ಸಿನಿಮಾ ಆದ ಪುಷ್ಪಾ ಸಿನಿಮಾದ ಊ ಅಂಟಾವ ಮಾಮ ಹಾಡು ಕೂಡ ಭಾರೀ ಕ್ರೇಜ್ ಹುಟ್ಟಿಸಿದೆ.

ಇದು ಕೂಡ ಮಂಗ್ಲಿ ಅವರ ಕಂಠ ಸಿರಿಯಲ್ಲಿ ಮೂಡಿ ಬಂದ ಹಾಡೇ ಆಗಿದೆ. ಇನ್ನು ಈ ಊ ಅಂಟಾವ ಮಾಮ ..ಊಹೂ ಅಂಟಾವ ಮಾಮ… ಹಾಡಿಗೆ ಮೈ ಚಳಿ ಬಿಟ್ಟು ಕುಣಿದ ಸಮಂತಾ ಅಂತೂ ಪಡ್ದೆ ಹುಡುಗರ ನಿದ್ದೆ ಕಸಿದು ಬಿಟ್ಟಿದ್ದಾರೆ. ವಿಶೇಷವಾದ ಮ್ಯೂಸಿಕ್ ಹಾಗೂ ಸಾಹಿತ್ಯದಿಂದ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ಈ ಐಟಂ ಸಾಂಗ್’ಗೆ ಸಖತ್ ಸ್ಟೆಪ್ ಹಾಕಿರುವ ಸಮಂತಾ ಪಡ್ದೆ ಹೈಕ್ಳ ಫೆವರಿಟ್ ಆಗಿದ್ದಾರೆ. ಇಷ್ಟು ದಿನ ಹೀರೋಯಿನ್ ಆಗಿ ನಟಿಸಿ ಅಭಿಮಾನಿಗಳಿಗೆ ರಂಜನೆ ನೀಡುತ್ತಿದ್ದ ಸಮಂತಾ, ಮೊದಲ ಬಾರಿ ಐಟಂ ಹಾಡಿಗೆ ಹೆಜ್ಜೆ ಹಾಕಿ ಹಾಟ್ ಆಗಿ ಮಿಂಚಿದ್ದಾರೆ.

ಇದು ನಾವು ತೆರೆ ಮೇಲೆ ಕಂಡಿರುವ ಡ್ಯಾನ್ಸ್ ಆದರೆ ಸಮಂತಾ ಅವರು ಈ ಹಾಡಿನ ಮೇಕಿಂಗ್’ನಲ್ಲಿ ಹೇಗೆ ಕುಣಿದಿದ್ದರು ಅನ್ನುವ ವಿಡಿಯೋ ಇದೀಗ ಭಾರೀ ವೈರಲ್ ಆಗಿದೆ. ಸಮಂತಾ ಅವರು ಡ್ಯಾನ್ಸ್ ರಿಹರ್ಸಲ್ ಮಾಡಿರುವ ಒಟ್ಟು 41 ಸೆಕೆಂಡ್’ನ ವಿಡಿಯೋ ಬಿಡುಗಡೆ ಮಾಡಿದ್ದು ಒಂದೇ ದಿನದಲ್ಲಿ 7 ಲಕ್ಷಕ್ಕೂ ವೀಕ್ಷಣೆ ಪಡೆದಿದೆ. ಇದರಲ್ಲಿ ಸಮಂತಾ ಅವರು ಎರಡು ವಿಡಿಯೋವನ್ನು ಒಟ್ಟು ಸೇರಿಸಿ, ಒಂದರಲ್ಲಿ ಟೈಟ್ ಫಿಟ್ಟಿಂಗ್ ಡ್ರೆಸ್ ಹಾಗೂ ಇನ್ನೊಂದರಲ್ಲಿ ಶಾರ್ಟ್ ಹಾಕಿಕೊಂಡು ಮೈ ಚಳಿ ಬಿಟ್ಟು ಸೊಂಟ ಬಳುಕಿಸಿದ್ದಾರೆ.

ಸಮಂತಾ ಅವ್ರು ಪುಷ್ಪಾ ಸಿನಿಮಾದಲ್ಲಿ ಚಿಕ್ಕ ಲಂಗ ಧಾವಣಿ ಹಾಕಿಕೊಂಡು ಕುಣಿಯೋದನ್ನು ನೋಡಿಯೇ ನಿದ್ದೆ ಗೆಟ್ಟಿರುವ ಪಡ್ಡೆ ಹುಡುಗರಿಗೆ, ಈ ಮೇಕಿಂಗ್ ವಿಡಿಯೋ ಇನ್ನಷ್ಟು ಡಿಸ್ಟರ್ಬ್ ಮಾಡಿದರೆ ಅದರಲ್ಲಿ ಯವುದೇ ಅತಿಶಯೋಕ್ತಿ ಇಲ್ಲ. ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ನಮಗೆ ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.