ಅಬ್ಬಬ್ಬಾ ಇದರ ಉದ್ಘಾಟನೆ ಹೇಗಿತ್ತು ನೋಡಿ!

 

ಕಡುಬಡವರಿಗೆ ನಾಳೆಯ ಜೀವನದ ಬಗ್ಗೆ ಒಂದು ರೀತಿಯ ಚಿಂತೆಯಾದರೆ, ಮಧ್ಯಮ ವರ್ಗದವರಿಗೆ ಇನ್ನೊಂದು ರೀತಿಯ ಚಿಂತೆ. ಒಂದೆಡೆ ಸಾಲ, ಇನ್ನೊಂದೆಡೆ ಪ್ರತಿ ನಿತ್ಯದ ಖರ್ಚು ಹೀಗೆ ಏನಾದರು ಒಂದು ಸಮಸ್ಯೆ ಇದ್ದೇ ಇರುತ್ತದೆ. ಅದರಲ್ಲೂ ಈ ಕರೋನಾ ಬಂದ ಮೇಲಂತೂ ಪರಿಸ್ಥಿತಿಯನ್ನು ಹೇಳಿ ಪ್ರಯೋನಜ ಇಲ್ಲ. ಆದರೆ ಈ ಶ್ರೀಮಂತ ವರ್ಗದವರಿಗೆ ಇದ್ಯಾವ ಸಮಸ್ಯೆಯೂ ಇಲ್ಲ. ಇರುವ ದುಡ್ಡಲ್ಲಿ ಏನು ಮಾಡುವುದು, ಬ್ಲ್ಯಾಕ್ ಮನಿನಾ ಹೇಗೆ ಬಳಸಿಕೊಳ್ಳುವುದು ಅನ್ನುವ ಯೋಚನೆ ಅವರಿಗೆ.

ಇದೇ ಲಿಸ್ಟ್’ಗೆ ನಮ್ಮ ಕಾಂಗ್ರೆಸ್ ಮುಖಂಡ ಡಿಕೆ ಶಿವಕುಮಾರ್ ಕೂಡ ಸೇರುತ್ತಾರೆ. ಅವರ ಬಳಿ ಕೋಟಿಗಟ್ಟಲೆ ಹಣ, ಆಸ್ತಿ ಎಲ್ಲವೂ ಇದೆ. ಇತ್ತೀಚೆಗಷ್ಟೆ ಮಾಜಿ ಸಚಿವ ಡಿಕೆಶಿ ಯವರು ಮೊದಲನೇ ಪುತ್ರಿ ಐಶ್ವರ್ಯ ಅವರ ಮದುವೆಯನ್ನು ಅದ್ದೂರಿಯಾಗಿ ಮಾಡಿದ್ದರು. ಕೆಫೆ ಕಾಫಿ ಡೇ ಸಂಸ್ಥಾಪಕ ಸಿದ್ಧಾರ್ಥ್ ಅವರ ಮಗ ಅಮರ್ಥ್ಯ ಜೊತೆ ಫೆಬ್ರವರಿ 14 ರಂದು ಕರೋನಾ ಸಂಕಷ್ಟ ಕಾಲದಲ್ಲೂ ಶೆರಟಾನ್ ಹೋಟೆಲ್ ನಲ್ಲಿ ವಿಜೃಂಭಣೆಯಿಂದ ಮದುವೆ ಮಾಡಿಕೊಟ್ಟಿದ್ದರು. ಇದೀಗ ತನ್ನ ಮಗಳಿಗಾಗಿ ಬೆಂಗಳೂರು ನಗರದಲ್ಲಿ ಮಾಲ್ ಒಂದನ್ನು ಕಟ್ಟಿದ್ದಾರೆ.

ರಾಜಾಜಿನಗರದ ಸುಜಾತ ಥಿಯೇಟರ್ ಬಳಿ ಹೊಸದಾಗಿ ನಿರ್ಮಾಣ ಆಗಿರುವ ಈ ಮಾಲ್ ಗೆ ಲುಲು ಹೈಪರ್ ಮಾರುಕಟ್ಟೆ ಎಂದು ಹೆಸರಿಡಲಾಗಿದೆ. ಈ ಗ್ಲೋಬಲ್ ಮಾಲ್ ನಿರ್ಮಾಣವಾದ ಹೈಪರ್ ಮಾರ್ಕೆಟ್, ಒಟ್ಟು 14 ಎಕರೆಯಲ್ಲಿ ಇದ್ದು, 5 ಅಂತಸ್ತಿನ ಕಟ್ಟಡದ 8 ಲಕ್ಷ ಚದರಡಿ ವಿಸ್ತೀರ್ಣದಲ್ಲಿ 132 ಸ್ಟೋರ್ ಗಳು ಹಾಗೂ ವಿವಿಧ ರೀಟೇಲ್ ಬ್ರಾಂಡ್ ಗಳ 17 ಕಿಯೋಸ್ಕ್ ಗಳಿವೆ. ಇದರಲ್ಲಿ ಅತೀ ದೊಡ್ಡ ಫುಡ್ ಕೋರ್ಟ್ ಇದ್ದು, ಒಟ್ತು 23 ಔಟ್ ಲೆಟ್’ಗಳಿವೆ. ಜೊತೆಗೆ ಇಂಡೋರ್ ಎಂಟರ್ ಟೈನ್ ಮೆಂಟ್ ಆದ ಫಂಟೂರಾ ಇದ್ದು, ಇದುವೇ 60 ಸಾವಿರ ಚದರಡಿ ವಿಸ್ತೀರ್ಣದಲ್ಲಿದೆ.

ಇಲ್ಲಿ ರೋಲರ್ ಗ್ಲೈಡರ್, ಟ್ಯಾಗ್ ಅರೆನಾ, ಅಡ್ವೆಂಚರ್ ಕೋರ್ಸ್, ಟ್ರ್ಯಾಂಪೋಲೈನ್, ವಿ ಆರ್ ರೈಡ್ಸ್ 9 ಡಿ ಥಿಯೇಟರ್, ಮತ್ತು ಬಂಪರ್ ಕಾರ್ ಗಳಂತಹ ಆಕರ್ಷಣೆಗಳಿವೆ. ಈ ಯುಎಇ ಮೂಲದ ಲುಲು ಮಾರುಕಟ್ಟೆಯನ್ನು ಮಾಜಿ ಕೇಂದ್ರ ಸಚಿವ ಅಂದರೆ ಡಿಕೆಶಿ ಯವರ ಬೀಗರಾದ ಎಸ್ ಎಂ ಕೃಷ್ಣ ಅವರೇ ಉದ್ಘಾಟನೆ ಮಾಡಿದ್ದರು. ಈಗಾಗಲೇ ಬೆಂಗಳೂರಿನಲ್ಲಿ ಅನೇಕ ಐಷಾರಾಮಿ ಕಟ್ಟಡಗಳು, ಮಾಲ್ ಗಳಿದ್ದರೂ, ಇದು ಅವೆಲ್ಲಕ್ಕಿಂತಲೂ ಅತಿ ದೊಡ್ಡ ಶಾಪಿಂಗ್ ಮಾಲ್ ಅನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಮಾಲ್ ನಲ್ಲಿ ಈಗಾಗಲೇ ಹಲವಾರು ಅಂಗಡಿಗಳು ಬಂದಿದ್ದು, ಭಾರೀ ವ್ಯವಹಾರ ಆಗುತ್ತಿದೆ. ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ನಮಗೆ ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.